ಆಕಸ್ಮಕಿ ಬೆಂಕಿ ಅವಘಡದಿಂದ ಸಹೋದರರಿಗೆ ಸೇರಿದ ಮೂರು ಮನೆ ಬಹುತೇಕ ಅಗ್ನಿಗಾಹುತಿ

0

ಶ್ರವಣಬೆಳಗೊಳ: ಆಕಸ್ಮಕಿ ಬೆಂಕಿ ಅವಘಡದಿಂದ ಸಹೋದರರಿಗೆ ಸೇರಿದ ಮೂರು ಮನೆ ಬಹುತೇಕ ಅಗ್ನಿಗಾಹುತಿಯಾಗಿರುವ ಘಟನೆ ಹೋಬಳಿಯ ಕಬ್ಬಾಳು
ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. 12.40ರ ಸುಮಾರಿಗೆ ಈ ಅವಘಡ ನಡೆದಿದ್ದು, ಇದರಿಂದ ನಗದು, ಚಿನ್ನಾಭರಣ, ದಿನನಿತ್ಯದ ಬಳಕೆ ವಸ್ತುಗಳು, ಕೊಬ್ಬರಿ ಸೇರಿದಂತೆ ಅಪಾರ ಪ್ರಮಾಣ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಬೆಂಕಿ ದುರಂತದಲ್ಲಿ ಸುಮಾರು

ಲಕ್ಷಾಂತರ ರೂ. ನಗದು, ಒಡವೆ, ಧವಸ ಧಾನ್ಯ, ಕೊಬ್ಬರಿ ಸೇರಿದಂತೆ ಗೃಹ ಬಳಕೆಯ ಎಲ್ಲಾ ವಸ್ತುಗಳು ಸುಟ್ಟು ಭಸ್ಮ ಆಗಿವೆ.
ಅಲ್ಲದೆ ಗ್ರಾಮದ ರಾಮಣ್ಣ, ಸಣ್ಣರಾಮು ಮತ್ತು ಮಂಜೇಗೌಡ ಎಂಬುವರಿಗೆ ಸೇರಿದ ಮನೆಗಳು ಬಹುತೇಕ ಸುಟ್ಟು ಹೋಗಿವೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಠಾಣಾಧಿಕಾರಿ ಗಿಡ್ಡೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಆದರೆ

ಆ ವೇಳೆಗಾಗಲೇ ಎಲ್ಲಾ ವಸ್ತುಗಳು ಬಹುತೇಕ ಸುಟ್ಟು ಹೋಗಿದ್ದವು.
ರಾಮಣ್ಣ ಎಂಬುವರ ಮನೆಯಲ್ಲಿದ್ದ 100 ಗ್ರಾಂ, 50 ಸಾವಿರ ಇಲ್ಲವಾಗಿದ್ದರೆ, ಮಂಜೇಗೌಡ ಅವರ ಮನೆಯಲ್ಲಿ 1.10 ಲಕ್ಷ ರೂ. ನಗದು 30 ಗ್ರಾಂ ಒಡವೆ ಸುಟ್ಟು ಹೋಗಿದೆ. ಸಣ್ಣರಾಮ ಅವರು ಸಂಗ್ರಹಿಸಿದ್ದ 5 ಸಾವಿರ ಕೊಬ್ಬರಿ ಸುಟ್ಟು ಕರುಕಲಾಗಿದೆ. 50 ಸಾವಿರದಷ್ಟು ನಗದು ಅರೆ-ಬರೆ ಸುಟ್ಟುಹೋದ ರೀತಿಯಲ್ಲಿ ಪತ್ತೆಯಾಗಿದೆ.
ನಗದು, ಒಡವೆ, ಗೃಹಬಳಕೆ ವಸ್ತುಗಳು, ಕೊಬ್ಬರಿ ನಾಶದಿಂದ ಅಂದಾಜು 20 ಲಕ್ಷ ಮೌಲ್ಯದ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಇಷ್ಟೇ ಅಲ್ಲದೆ, ಮೂರೂ ಮನೆಯ ಮಕ್ಕಳ ವಿದ್ಯಾಭ್ಯಾಸದ ದಾಖಲೆಗಳು, ಜಮೀನು, ಬ್ಯಾಂಕ್‌ಗೆ ಸಂಬಧಿಸಿದ ಕಾಗದ ಪತ್ರಗಳೂ ಸಹ ಸುಟ್ಟು ಹೋಗಿದ್ದು, ಕುಟುಂಬ ಸದಸ್ಯರು

ಕಣ್ಣೀರು ಇಡುವಂತಾಗಿದೆ. ಸಂಬಂಧ ಪಟ್ಟವರು ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here