ನಗರಾಭಿವೃದ್ದಿ ಪ್ರಾಧಕಾರದ ಆಕ್ಷೇಪಣೆಗಳ ಪರಿಶೀಲನೆ; ಶೀಘ್ರ ಪರಿಹರಿಸಲು ಸೂಚನೆ
ಹಾಸನ, ನ. : ಹಾಸನ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸಂಬಂದಿಸಿದ ಆಕ್ಷೇಪಣೆಗಳ ಕುರಿತು ಕರ್ನಾಟಕ ವಿಧಾನಮಂಡಲದ ಸಭೆಯಲ್ಲಿ ಮಂಡಿಸಲಾದ ಕಾಗದ ಪತ್ರಗಳ ಸಮಿತಿ ವತಿಯಿಂದ ಇಂದು ಪರಿಶೀಲನೆ ನಡೆಸಿದರು.
ನಗರಾಭಿವೃದ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸಂಭಂದಿಸಿದ ಕಡತಗಳನ್ನು ವೀಕ್ಷಣೆ ಮಾಡಿದ ಅವರು ಎಸ್.ಎಂ.ಕೆ ನಗರ ವಸತಿ ಬಡಾವಣೆ ಯೋಜನೆಯಲ್ಲಿ ಬಾಕಿ ಇರುವ ನಿವೇಶನಗಳನ್ನು ಶೀಘ್ರವಾಗಿ ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ವಿಧಾನ ಮಂಡಲದ ಸಭೆಯಲ್ಲಿ ಮಂಡಿಸಲಾದ ಕಾಗದಪತ್ರಗಳ ಕೆಲವೊಂದು ಕಟ್ಟಡ ನಿರ್ಮಾಣ ಕಾಮಗಾರಿಗಳ ಉದ್ದೇಶ ವ್ಯತ್ಯಾಸಗಳು ಹಾಗೂ ಅವುಗಳ ಬಳಕೆ ಸ್ವರೂಪದ ಬಗ್ಗೆ ಆಕ್ಷೇಪಣೆಗಳಿವೆ ಆದರೆ ಅದು ಸದ್ಬಳಕೆಯಾಗುತ್ತಿದ್ದು ಸಾರ್ವಜನಿಕರ ಅನುಕೂಲಕ್ಕೆ ಮೀಸಲಾಗಿದ್ದರೆ ಆ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿ ಶೀಘ್ರವಾಗಿ ಬಗೆಹರಿಸುವಂತೆ ತಿಳಿಸಿದರು.
ಆಡಿಟರ್ ಜನರಲ್ ಹಾಗೂ ರಾಜ್ಯ ಲೆಕ್ಕಪರಿಶೋಧನೆ ವೇಳೆಯ ವರದಿಯಲ್ಲಿ ಆಕ್ಷೇಪಣೆಗೆ ಗುರಿಯಾಗಿರುವ ಅಂಶಗಳಲ್ಲಿ ಹಣ ದುರುಪಯೋಗವಾಗಿದ್ದು, ಕೇವಲ ನಿಯಮ ಪಾಲನೆಯಲ್ಲಿ ಆಗಿರುವ ಸಣ್ಣಪುಟ್ಟ ವ್ಯತ್ಯಾಸಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಸೂಕ್ತ ಸಮಜಾಯಿಷಿ ನೀಡಿ ಇತ್ಯರ್ಥಪಡಿಸಿ ಕೊಳ್ಳುವಂತೆ ಸೂಚಿಸಿದರು.
ಸಮಿತಿ ಸಭೆಯಲ್ಲಿ ಆಕ್ಷೇಪಣಾ ವರದಿಗಳನ್ನು ಪರಿಶೀಲನೆ ಮಾಡಿ ಹಣದುರುಪಯೋಗ ಪ್ರಕರಣಗಳನ್ನು ಸಹಿಸಲಾಗದು ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ದುರ್ಬಳಕೆ ಇಲ್ಲದೆ ಮಾಡಿದ ಕೆಲಸಗಳನ್ನು ಮುಕ್ತಾಯ ಗೊಳಿಸಬಹುದಾದ ಸೂಕ್ತ ವರದಿ ನೀಡಿ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಿ ಎಂದರು.
ಕರ್ನಾಟಕ ವಿಧಾನ ಮಂಡಳಿ ಸಭೆಯ ಸದಸ್ಯರು ಹಾಗೂ ಶಾಸಕರಾದ ಎಮ್.ಎಸ್.ಸೋಮಲಿಂಗಪ್ಪ, ಶಾಸಕರಾದ ಗಣೇಶ್ ಪ್ರಕಾಶ್ ಹುಕ್ಕೇರಿ, ಕರ್ನಾಟಕ ವಿಧಾನ ಮಂಡಳಿ ಸಭೆಯ ಸದಸ್ಯರು ಹಾಗೂ ಶಾಸಕರಾದ ಕೆ. ಅನ್ನದಾನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್.ನಂದಿನಿ, ನಗರ ಸಭೆ ಅಧ್ಯಕ್ಷರಾದ ಕೃಷ್ಣಮೂರ್ತಿ, ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
https://goo.gl/maps/KEFAFnvkLeQXd7vv5
#saramahesh #smknagarhassan