ಹಾಸನ ನಗರದ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ

0

ಹಾಸನ,ನ. : ಹಾಸನ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯನ್ನು ನವೆಂಬರ್ 15 ರಿಂದ ಮಾಡಲಾಗುತ್ತಿದ್ದು, ತಮ್ಮ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದಲ್ಲಿ ತಮ್ಮ ವಾರ್ಡಿನ ಸದಸ್ಯರು ಹಾಗೂ ನಗರಸಭೆ ಆರೋಗ್ಯ ನಿರೀಕ್ಷಕರ ಗಮನಕ್ಕೆ ತಂದು ಶಸ್ತ್ರಚಿಕಿತ್ಸೆಗೆ ಸಹಕಾರ ನೀಡಬೇಕು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಮಂಜುನಾಥ್ ಕಿರಿಯ ಆರೋಗ್ಯ ನಿರೀಕ್ಷಕರು ವಾರ್ಡ್ ನಂಬರ್ ಒಂದರಿಂದ ಹತ್ತರವರೆಗೆ, ದೂ. ಸಂ 9844623830, ಎಸ್,ಎನ್.ಎಂ ಪ್ರಸಾದ್ ಕಿರಿಯ ಆರೋಗ್ಯ ನಿರೀಕ್ಷಕರು ವಾರ್ಡ್ ನಂಬರ್ 11 ರಿಂದ 15 ಹಾಗೂ 31 ರಿಂದ 35 ರವರೆಗೆ ದೂ. ಸಂ 8660150882, ರಾಹುಲ್ ನಾಗರಾಜ್ ವಾರ್ಡ್ ನಂಬರ್ 16 ರಿಂದ 20 ರವರೆಗೆ  ದೂ. ಸಂ 9844096037, ಆದೀಶ್ ಕುಮಾರ್ ವಾರ್ಡ್ ನಂಬರ್ 21 ರಿಂದ 30 ರವರೆಗೆ ದೂ. ಸಂ 8660150882, ಇವರುಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಸಾರ್ವಜನಿಕರು ಸ್ವಂತ ನಾಯಿಗಳನ್ನು ಸಾಕಿದ್ದರೆ ಅಂತಹ ನಾಯಿಗಳನ್ನು ತಮ್ಮ ಮನೆಯಲ್ಲಿಯೇ ಕಟ್ಟಿಕೊಳ್ಳತಕ್ಕದ್ದು ಒಂದು ವೇಳೆ ತಮ್ಮ ಸಾಕುನಾಯಿಗಳು ಬೀದಿಯಲ್ಲಿ ಇದ್ದು,  ಶಸ್ತ್ರಚಿಕಿತ್ಸೆ ಮಾಡಿದ್ದಲ್ಲಿ ಇದಕ್ಕೆ ನಗರಸಭೆಯು ಜವಾಬ್ದಾರಿಯಾಗಿರುವುದಿಲ್ಲ. ಸಾರ್ವಜನಿಕರು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹಾಗೂ ಅನಿಮಲ್ಸ್ ಬರ್ತ್ ಕಂಟ್ರೋಲ್ ರೂಲ್ಸ್-2001 ರ ಪ್ರಕಾರ ಹಾಸನ ನಗರಸಭಾ ವ್ಯಾಪ್ತಿಯ ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಲು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ನಗರ ಸಭೆ ನಡೆಸುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದ್ದಾರೆ. #muncipaltyhassan #hassannagarasabha #hassan #hassannews

LEAVE A REPLY

Please enter your comment!
Please enter your name here