ಹಾಸನ : ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು “ಆಜಾದಿ ಕಾ ಅಮೃತ್ ಮಹೋತ್ಸವ”ವನ್ನು ಆಚರಿಸುತ್ತಿದ್ದು 75 ನೇ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಅನ್ನು, ದೇಶಾದ್ಯಂತ ಆಯೋಜಿಸುತ್ತಿದೆ,
ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿಯವರ ಉದ್ಘಾಟನಾ ಭಾಷಣದಿಂದ ಸ್ಫೂರ್ತಿ ಪಡೆದು, 75ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ, ಸಾಮಾಜಿಕ ದೂರವು ಹೊಸ ಸಾಮಾನ್ಯ ಜೀವನಶೈಲಿಯಾಗಿದ್ದು , ಈ ಅಭಿಯಾನದ ಮೊದಲ ಆವೃತ್ತಿಯನ್ನು ಆಗಸ್ಟ್ 15 ರಿಂದ ಅಕ್ಟೋಬರ್ 2ರವರೆಗೆ ಆಯೋಜಿಸಲಾಗಿತ್ತು.
ಕೇಂದ್ರ /ರಾಜ್ಯ ಇಲಾಖೆ ಮತ್ತು ಕೇಂದ್ರ ಸಶಸ್ತ್ರ ಪಡೆಗಳು, ಎನ್ ಜಿ ಒ ಗಳು, ಖಾಸಗಿ ಸಂಸ್ಥೆಗಳು, ಶಾಲೆಗಳು, ವ್ಯಕ್ತಿಗಳು, ಯುವಕ/ ಯುವತಿ ಮಂಡಳಿಗಳು, ಎನ್ ಎಸ್ ಎಸ್, ಎನ್ ಸಿ ಸಿ ಸೇರಿದಂತೆ ಸುಮಾರು 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿದರು ಮತ್ತು ಸುಮಾರು 18 ಕೋಟಿ ಕಿಮೀ ದೂರವನ್ನು ಕ್ರಮಿಸಿದ್ದಾರೆ.
ಈ ಸಮಯದಲ್ಲಿ ಫಿಟ್ ಇಂಡಿಯಾ ಫ್ರೀಡಮ್ 2.0 ರನ್‍ಗಳು ಆಗಸ್ಟ್ 13 ರಿಂದ ಅಕ್ಟೋಬರ್2 ರಂದು ಮುಕ್ತಾಯಗೊಳ್ಳುತ್ತದೆ. ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಗಳಂತಹ ಫಿಟ್ನೆಸ್ ಚಟುವಟಿಕೆಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಬೊಜ್ಜು, ಸೋಮಾರಿತನ, ಒತ್ತಡ, ಆತಂಕ, ರೋಗ ಇತ್ಯಾದಿಗಳಿಂದ ಮುಕ್ತಿಯನ್ನು ಪಡೆಯುವುದು ಈ ಕಾರ್ಯಕ್ರಮದ ಗುರಿಯಾಗಿದೆ.ಈ ಅಭಿಯಾನದ ಮೂಲಕ, ನಾಗರಿಕರು ತಮ್ಮ ಜೀವನದಲ್ಲಿ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆ/ ಯೋಗ/ ಧ್ಯಾನ ದಂತಹ ಕಾರ್ಯಕ್ರಮಗಳನ್ನು “ಫಿಟ್ನೆಸ್ ಕಿ ಡೋಸ್ ಅಧಾ ಘಂಟಾ ರೋಜ್” ನಲ್ಲಿ ಸೇರಿಸುವ ಸಂಕಲ್ಪವನ್ನು ಮಾಡಲು ಕರೆ ನೀಡಲಾಗುವುದು.
ಗಣ್ಯರಿಂದ ಉದ್ಘಾಟನೆಯ ಮೂಲಕ ಪ್ರಾರಂಭವಾಗುತ್ತದೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಎನ್,ಎಸ್,ಎಸ್/ ಎನ್,ಸಿ,ಸಿ, ಎನ್.ಜಿ.ಒ, ಯುವ ಜನ ಸಂಘಟನೆಗಳು, ಸೇವಾ ದಳ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಜಾಥಾ/ಓಟ ಹಮ್ಮಿಕೊಳ್ಳಲಾಗಿದೆ,
ಈ ಫ್ರೀಡಂ ರನ್ ಕಾರ್ಯಕ್ರಮವನ್ನು ಚಾಲನೆ ನೀಡಲು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು , ಶಾಸಕರು, ಸಂಸತ್ ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಾಣಾಧಿಕಾರಿ, ಜಿಲ್ಲಾ ಪಂಚಾಯತ್ , ಅಪರ ಜಿಲ್ಲಾಧಿಕಾರಿಗಳು ಹಾಗೂ ಇತರೆ ಗಣ್ಯರು ಭಾಗವಹಿಸುತ್ತಾರೆ ಎಂದು ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ಅಭಿಷೇಕ್ ಚವಾರೆ ತಿಳಿಸಿದ್ದಾರೆ.
#fitindia #sportsnewshassan