ವಾಲಿಬಾಲ್ ಪಂದ್ಯಾವಳಿ ಯಲ್ಲಿ ಪ್ರಥಮ ಸ್ಥಾನವನ್ನು ಮಠಸಾಗರದ ಜೋವಿತ್ ನೇತೃತ್ವದ ತಂಡ ಗೆದ್ದು ಬೀಗಿದೆ

0

ಕ.ರ. ವೇ ಸ್ವಾಭಿಮಾನಿ ಸೇನೆ ಸಕಲೇಶಪುರ ವತಿಯಿಂದ ದಿನಾಂಕ,28/11/2021 ರಂದು ನೆರವೇರಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ಯಲ್ಲಿ ಪ್ರಥಮ ಸ್ಥಾನವನ್ನು ಮಠಸಾಗರದ #ಜೋವಿತ್ ನೇತೃತ್ವದ ತಂಡ ಜಯಶೀಲವಾಯಿತು.

ದ್ವಿತೀಯ ಸ್ಥಾನವನ್ನು #ನಿರಂಜನ್ ನೇತೃತ್ವದ ಬಾಳ್ಳುಪೇಟೆಯ ಜೆ. ಪಿ.ನಗರ ತಂಡ ತನ್ನದಾಗಿಸಿಕೊಂಡಿತು.

ತೃತೀಯ ಸ್ಥಾನವನ್ನು ಕನ್ನಡಾಂಬ ಹೊಸಕೆರೆಯ #ಕಿರಣ್ ನೇತೃತ್ವದ ತಂಡ ತನ್ನದಾಗಿಸಿಕೊಂಡಿದೆ. ಹಾಗೆಯೇ ಚತುರ್ಥ ಸ್ಥಾನವನ್ನು

#ನಿಖಿಲ್_ಬೆಳಗೋಡು ನೇತೃತ್ವದ ಬೆಳಗೋಡು ತಂಡ ತನ್ನದಾಗಿಸಿಕೊಂಡಿದೆ. ಹಾಗೆಯೇ ಈ ಸಂದರ್ಭದಲ್ಲಿ ಬೆಸ್ಟ್ ಅಟ್ಯಾಕರ್ ಆಗಿ  ಪ್ರಣಂ, ಬೆಸ್ಟ್ ಪಾಸ್ಸರ್ ಬಹುಮಾನ ನಿರಂಜನ್ ಶೈವ ರವರಿಗೆ ಮತ್ತು ಆಲ್ ರೌಂಡರ್ ಪ್ರಶಸ್ತಿಯನ್ನು ಜೋಯಿತ್ ರವರಿಗೆ ನೀಡಿ ಗೌರವಿಸಲಾಯಿತು.


  ಹಾಗೆಯೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ನೇತ್ರದಾನ ಶಿಬಿರದಲ್ಲಿ 89 ಮಂದಿ ಸ್ವಯಂ ಪ್ರೇರಿತವಾಗಿ ನೇತ್ರದಾನ ಮಾಡಲು ನೊಂದಣಿ ಆಗಿರುತ್ತಾರೆ. ನಮ್ಮ ಸಕಲೇಶಪುರದ ಉಪ ನಿರೀಕ್ಷಕರಾದ ಬಸವರಾಜ ಚಿಂಚೋಳಿ ರವರು ಸೇರಿದಂತೆ ಹಲವಾರು ಗಣ್ಯರು ನೇತ್ರದಾನ ಮಾಡಲು ನೊಂದಣಿ ಆಗಿರುವುದು ವಿಶೇಷವಾಗಿತ್ತು.
ಸಂಘಟನೆಯ ವತಿಯಿಂದ ನೆರವೇರಿಸಿದ ಮೂರನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಮಾಡಲು ಸಹಕರಿಸಿದ ಎಲ್ಲಾ ನಮ್ಮ ಪದಾಧಿಕಾರಿಗಳಿಗೆ ನಾನು ಚಿರೃಣಿ ಎಂದರು ಅಧ್ಯಕ್ಷರು. ಹಾಗೆಯೇ  ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು  ಸಮರ್ಪಣೆ. ಹಾಗೆಯೇ ಪ್ರೀತಿ ಮತ್ತು ಸಹಕಾರ ನಮ್ಮೊಟ್ಟಿಗೆ ಸದಾ ಕಾಲ ಹೀಗೆ ಇರಬೇಕೆಂದು ಕೇಳಿಕೊಂಡರು.
“ಕನ್ನಡವೇ ಸತ್ಯ, ಕನ್ನಡವೇ ನಿತ್ಯ”

LEAVE A REPLY

Please enter your comment!
Please enter your name here