ನೀವು ಸರ್ಕಾರಿ ನೌಕರಿಯಲ್ಲಿದ್ದೀರಾ !, ಹಾಸನ ಜಿಲ್ಲಾ ಕ್ರೀಡಾಂಗಣ ದಲ್ಲಿ ನಿಮಗೆಂದೇ ಕ್ರೀಡಾಕೂಟ ಏರ್ಪಡಿಸಲಾಗಿದೆ ., ಈಗಲೇ ನೊಂದಾಯಿಸಿ , (ಹೆಚ್ಚಿನ ವಿವರ) 👇

0

ಹಾಸನ ಜ.23 (ಹಾಸನ್_ನ್ಯೂಸ್ ) !, ಜಿಲ್ಲಾಡಳಿತ, ಪಂಚಾಯತ್ ರಾಜ್ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಹಾಸನ ಇವರುಗಳ ಸಂಯುಕ್ತಾಶ್ರಯದಲ್ಲಿ ಫೆ.9 ಹಾಗೂ ಫೆ.10 ರಂದು  ಎರಡು ದಿವಸಗಳು ಜಿಲ್ಲಾ ಕ್ರಿಡಾಂಗಣದಲ್ಲಿ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಜಿಲ್ಲೆಯ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಈ.ಕೃಷ್ಣೇಗೌಡ ತಿಳಿಸಿದ್ದಾರೆ

ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಖಾಲಿ ಪ್ರವೇಶದ ಫಾರಂ ಹಾಗೂ ಗುರುತಿನ ಚೀಟಿಯನ್ನು ಸಂಬಂಧಿಸಿದ ತಾಲ್ಲೂಕು ಸರ್ಕಾರಿ ನೌಕರರ ಸಂಘಗಳಿಂದ ಪಡೆದು ತುಂಬಿದ ಫಾರಂಗಳನ್ನು ಆಯಾ ತಾಲ್ಲೂಕಿನ ನೌಕರರ ಸಂಘದ ಕಚೇರಿಯಲ್ಲಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.
            ಹಾಸನ ತಾಲ್ಲೂಕಿನ ಸರ್ಕಾರಿ ನೌಕರರು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಅಥವಾ ಹಾಸನದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಖಾಲಿ ಪ್ರವೇಶದ ಫಾರಂ ಹಾಗೂ ಗುರುತಿನ ಚೀಟಿಯನ್ನು ಪಡೆದು ತುಂಬಿದ ಫಾರಂಗಳನ್ನು ಫೆ,02 ರೊಳಗಾಗಿ ಜಿಲ್ಲಾ ಸಂಘದ ಕಚೇರಿಗೆ ಸಲ್ಲಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ. ನಿಗಧಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಕೋವಿಡ್-19 ರ ನಿಮಿತ್ತ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಯಾವುದೇ ನೋಂದಣಿಗೆ ಅವಕಾಶವಿರುವುದಿಲ್ಲವೆಂದು  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here