ಹಾಸನ ಜಿಲ್ಲೆಯ ಇಲ್ಲಿ ನಡೆದ ಕೆಸರುಗದ್ದೆ ವಿವಿಧ ಆಟಗಳು ನೆರೆದಿದ್ದವರ ಮನಸೆಳೆದವು

0

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಕಟ್ಟೇಪುರ ಗ್ರಾಮ ಪಂಚಾಯಿತಿಯ ವತಿಯಿಂದ ಅಭಿವೃದ್ಧಿ ಅಧಿಕಾರಿ ಪರಮೇಶ್ ನೇತೃತ್ವದಲ್ಲಿ ಕಳೆದ ಗುರುವಾರ ( 25 Aug 2022 ) ಇಲ್ಲಿನ ಕೆಸರು ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕೆಸರು ಗದ್ದೆ ಓಟ, ಕೆಸರು ಗದ್ದೆ ವಾಲಿಬಾಲ್, ಕೆಸರುಗದ್ದೆ ಹಗ್ಗಜಗ್ಗಾಟಗಳು ನೆರೆದಿದ್ದವರ ಮನಸೆಳೆದವು. ಇದರ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ .,

ಇದೇ ಪ್ರಥಮ ಬಾರಿಗೆ ಈ ಭಾಗದಲ್ಲಿ ಆಯೋಜಿಸಲಾಗಿದ್ದ ಕೆಸರು ಗದ್ದೆ ಕ್ರೀಡೆಗಳನ್ನು ನೋಡಲು ಕಟ್ಟೇಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ಹಲವು ಜನತೆ ನೆರೆದಿದ್ದು ಹಳ್ಳಿ ಆಟವನ್ನು ಸಂಭ್ರಮದಿಂದ ಕಣ್ತುಂಬಿಕೊಂಡರು

ಕಟ್ಟೇಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಲ್ಲಿನ ಹಿರಿಯ ಪ್ರಾಥಮಿಕ ಶಾಲಾ, ಪ್ರೌಢಶಾಲಾ, ಕಾಲೇಜು, 40 ವರ್ಷಕ್ಕಿಂತ ಒಳಗಿನ ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಬಾಲಕ, ಬಾಲಕಿ, ಯುವಕ, ಯುವತಿ, ಪುರುಷರು, ಮಹಿಳೆಯರಿಗಾಗಿ 100 ಮೀ. ಓಟ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ಪುರುಷರಿಗಾಗಿ ವಾಲಿಬಾಲ್ ಪಂದ್ಯಗಳು ನಡೆದವು.,

ಅಂದಾಜು 250ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಹರಸಾಹಸವನ್ನು ತೋರ್ಪಡಿಸಿದರು ., ವಿಜೇತರಿಗೆ ಕಟ್ಟೇಪುರ ಗ್ರಾಮ ಪಂಚಾಯಿತಿಯ ವತಿಯಿಂದ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗಿದ್ದು.,

ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್ ನೆರವೇರಿಸಿ., ಸಹಾಯಕ ನಿರ್ದೇಶಕ ಗಣೇಶ್ ಮತ್ತು ಶೇಖರ್, ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೇಖರ್, ಉಪಾಧ್ಯಕ್ಷೆ ಸುಧಾರಾಣಿ ದೊರೆ, ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.

ಹಳ್ಳಿ ಕ್ರೀಡೆ‌ಪ್ರೋತ್ಸಾಹಿಸಲು ಈ ಪೋಸ್ಟ್ ಶೇರ್ ಮಾಡಿ . ಧನ್ಯವಾದ

LEAVE A REPLY

Please enter your comment!
Please enter your name here