ಈತನನ್ನು ಸರಿಯಾಗಿ ಗಮನಿಸಿ , ವಿಷಯ ಇದೆ ಹೇಳ್ತೀವಿ
ಕಳೆದ ಎರಡು ತಿಂಗಳಿಂದ ಹಾಸನ ನಗರದ ಹಲವೆಡೆ ಈತ ಅಂಗಡಿ ಮುಂಗಟ್ಟುಗಳಲ್ಲಿ ಈ ಕೆಳಕಂಡ ಒಂದೇ ಸುಳ್ಳು ಸ್ಟೋರಿ ಹೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ ., ಮೈಗಳ್ಳ!
ಈತ ಹೆಳೋ ಕಥೆ ಕೇಳಿಬಿಡಿ ಒಮ್ಮೆ : ” ಸಾರ್ ನಾನು ನನ್ನ ಕುಟುಂಬ ಹೊರ ಜಿಲ್ಲೆಯಿಂದ ಬಂದ್ವಿ , ಒಬ್ರು ನನ್ನ ಎಸ್ಟೇಟ್ ಕೆಲಸಕ್ಕೆ ಅಂತ ಕರೆದು ಕೊಂಡು ಬಂದ್ರು , ಎರಡು ದಿನ ಕೆಲಸ ಮಾಡಿಸಿಕೊಂಡು ಸಂಬಳ ಕೊಡದೆ ಕೆಲಸ ಕೊಡದೆ ಕೈಬಿಟ್ರು ದಯವಿಟ್ಟು ಊರಿಗೆ ಹೊಗೋಕೆ ಹಣ ಕೊಡಿ “
ಹೀಗೆ ಹಾಸನದ ಹಲವು ಜನತೆಗೆ ಯಾಮಾರಿಸಿ ಹಣ ಪಡೆದು ಎಣ್ಟೇ ಹೊಡೆದು ಓಡಾಡುತ್ತಿದ್ದಾನೆ , ಕೈಕಾಲು ಗಟ್ಟಿ ಇದೆ , ದುಡಿದು ತಿಂತೀನಿ ಅಂದರೆ ನಮ್ಮ ಹಾಸನದ ಉದ್ಯಮಿಗಳು ಕೆಲಸ ಕೊಡ್ತಾರೆ ಅಲ್ಲವೇ , ಯಾಕೀ ಭಂಡಬಾಳು , ಸ್ವಾಭಿಮಾನಿ ಜೀವನ ಜೀವಿಸಬೇಕು .
ನಿನ್ನ ಕುಟುಂಬ ಎಲ್ಲಿದೆ ತೋರಿಸು ನಾವು ಸಹಾಯ ಮಾಡ್ತೀವಿ ಎಂದು ನಮ್ಮ ಹಾಸನ್ ನ್ಯೂಸ್ ತಂಡ ಕೇಳಿದರು ., ನಮ್ಮಿಂದ ಕಾಲ್ಕಿತ್ತು ., ಬಿಡಿ ಸರ್ ನನ್ನ ನೀವು ಹಲವು ಬಾರಿ ನೋಡಿದೀರ ಅನ್ಸತ್ತೆ ನೀವು ಹಣ ಕೊಡಲ್ಲ ಬಿಡಿ ನಾನು ಹೊರಡುತ್ತೀನಿ ಅಂದ!!