ಹಾಸನ / ಮೈಸೂರು : ಮಹಾರಾಜ ಟಿ20ಗೆ ಆರು ತಂಡಗಳು ಸಿದ್ದಗೊಂಡಿದ್ದು
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಮಹಾರಾಜ ಟಿ20 ಟೂರ್ನಿಗೆ 6 ತಂಡಗಳು ಸಿದ್ದಗೊಂಡಿವೆ . ಶನಿವಾರ KSCAನಲ್ಲಿ ನಡೆದ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು. ಮೊದಲು ತಂಡದ ಪ್ರಾಯೋಜಕರು ಕೋಚ್‌ಗಳನ್ನು ಆಯ್ಕೆ ಮಾಡಿಕೊಂಡರು. ಬಳಿಕ ಕೋಚ್ ಗಳು ಆಟಗಾರರ ಆಯ್ಕೆ ನಡೆಸಿದರು.
ಭಾರತ ಪರ ಹಾಗೂ ಐಪಿಎಲ್‌ನಲ್ಲಿ ಆಡಿರುವ ಆಟಗಾರರನ್ನು ‘ಎ’ ದರ್ಜೆಯಲ್ಲಿ ಸೇರಿಸಲಾಗಿತ್ತು. ಈ ದರ್ಜೆಯಲ್ಲಿದ್ದ ಮಯಾಂಕ್ ಬೆಂಗಳೂರು ತಂಡ ಸೇರಿದರೆ, ಮನೀಶ್ ಪಾಂಡೆ ಮತ್ತು ದೇವದತೆ ಪಡಿಕ್ಕಲ್ ಗುಲ್ಬರ್ಗ ತಂಡದ ಪಾಲಾದರು. ಶಿವಮೊಗ್ಗ ತಂಡಕ್ಕೆ ಕೆ.ಗೌತಮ್, ಮೈಸೂರು ತಂಡಕ್ಕೆ ಕರುಣ್ ನಾಯರ್, ಹುಬ್ಬಳ್ಳಿ ತಂಡಕ್ಕೆ ಮಿಥುನ್, ಮಂಗಳೂರು ತಂಡಕ್ಕೆ ಅಭಿನವ್ , ಶಿವಮೊಗ್ಗ ಸ್ಟ್ರೈಕರ್ ತಂಡಕ್ಕೆ ಫಾಸ್ಟ್ ಬೌಲರ್ ಆಗಿ ನಮ್ಮ ಹಾಸನದ ಪ್ರತಿಭೆ ಆದಿತ್ಯ SS ಸೇರ್ಪಡೆಗೊಂಡರು.
ಇಲ್ಲಿ ಮಿಂಚಿದ್ದೇ ಆದಲ್ಲಿ IPL ದ್ವಾರ ಪ್ರವೇಶಿಸುವುದು ಬಹುತೇಕ ಖಚಿತ
‘ಎ’ ದರ್ಜೆಯ ಆಟಗಾರರಿಗೆ 5 ಲಕ್ಷ ರು. ವೇತನ, ಹಿರಿಯರ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ‘ಬಿ’ ದರ್ಜೆಯಲ್ಲಿ ಸ್ಥಾನ ಪಡೆದ ಆಟಗಾರರಿಗೆ ತಲಾ 2 ಲಕ್ಷ, ಅಂಡರ್-19/23 ಆಟಗಾರರಿಗೆ ‘ಸಿ’ ದರ್ಜೆಯಲ್ಲಿ ಸ್ಥಾನ ನೀಡಲಾಗಿತ್ತು. ಉದಯೋನ್ಮುಖ ಆಟಗಾರರು ‘ಡಿ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದರು. ಒಟ್ಟು 740 ಆಟಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟೂರ್ನಿಯುಆ.7ರಿಂದ 26ರವರೆಗೂ ನಡೆಯಲಿದೆ.ಮೈಸೂರು, ಬೆಂಗಳೂರು ಫೈನಲ್ ಸೇರಿ ಒಟ್ಟು 34 ಪಂದ್ಯಗಳು ನಡೆಯಲಿವೆ.
ಎನ್‌ಆರ್ ಗ್ರೂಪ್ ಸೈಕಲ್ ಪ್ಯೂರ್ ಅಗರಬತ್ತಿ ಒಡೆತನದ ಮೈಸೂರು ವಾರಿಯರ್ಸ್ ಈಗ ಮಹಾರಾಜ ಟ್ರೋಫಿ (ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್) ಟಿ-20 ಪಂದ್ಯಾವಳಿಗಾಗಿ ಆಡುವ ತನ್ನ ತಂಡದ ಸದಸ್ಯರನ್ನು ಪ್ರಕಟಿಸಿದೆ.
ಈ ಟೂರ್ನಿ ಆಗಸ್ಟ್ 7 ರಿಂದ ಆಗಸ್ಟ್ 26 ರವರೆಗೆ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯ ಲಿದ್ದು, ಜುಲೈ 30 ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಪಿ.ವಿ.ಶಶಿಕಾಂತ್ ಅವರನ್ನು ಮುಖ್ಯ ತರಬೇತುದಾರರಾಗಿ ಆಯ್ಕೆ ಮಾಡಲಾಗಿದೆ ಮತ್ತು ಸಿಬ್ಬಂದಿ ಆಯ್ಕೆಯೂ ಪೂರ್ಣವಾಗಿದೆ.
ಮೈಸೂರು ವಾರಿಯರ್ಸ್ ತಂಡದ ಸದಸ್ಯರಾಗಿ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ವಿದ್ಯಾಧರ್ ಪಾಟೀಲ್, ನಿಹಾಲ್ ಉಳ್ಳಾಲ್, ಪ್ರತೀಕ್ ಜೈನ್, ಭರತ್ ಧುರಿ, ಚಿರಂಜೀವಿ, ಶುಭಾಂಗ್ ಹೆಗ್ಡೆ, ಲೋಚನ್ ಅಪ್ಪಣ್ಣ, ಶಿವರಾಜ್, ಮೋನಿಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯಲ್, ಅಭಿಷೇಕ್ ಅಲವತ್, ನಾಗಾ ಭರತ್, ಅರುಣ್ ಕೆ ಮತ್ತು ತುಷಾರ್ ಹರಿಕೃಷ್ಣ ಅವರನ್ನು ಹೊಸದಾಗಿ ಆಯ್ಕೆ ಮಾಡಲಾಗಿದೆ.
ಮುಖ್ಯ ಕೋಚ್ ಪಿ.ವಿ.ಶಶಿಕಾಂತ್ ಮಾತನಾಡಿ, ತಂಡವು ನನಗೆ ದೊಡ್ಡ ಜವಾಬ್ದಾರಿ ವಹಿಸಿದೆ ಮತ್ತು ನಾನು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ ಎಂಬ ವಿಶ್ವಾಸವಿದೆ. ಪ್ರತಿಭಾವಂತ ಆಟಗಾರರನ್ನು ಉತ್ತಮವಾಗಿ ಪ್ರಯತ್ನಿಸುವುದಾಗಿ ಹೇಳಿದರು. ತರಬೇತುಗೊಳಿಸಲು
ತಂಡದ ಸಹಾಯಕ ತರಬೇತುದಾರರಾಗಿ ಕೆ.ಎ. ಅಕ್ಷಯ್, ಆಯ್ಕೆಗಾರರಾಗಿ ಕೆ.ಎಲ್. ಅಶ್ವಥ್, ಫಿಸಿಯೋ ಥೆರಪಿಸ್ಟ್ ಆಗಿ ಟಿ.ಮಂಜುನಾಥ್, ತರಬೇತುದಾರರಾಗಿ ಇರ್ಫಾನುಲ್ಲಾ ಖಾನ್ ಮತ್ತು ವಿಡಿಯೋ ವಿಶ್ಲೇಷಕರಾಗಿ ಕಿರಣ್ ಕೆ. ಅವರು ಕಾರ್ಯನಿರ್ವಹಿಸಲಿದ್ದಾರೆ.
2009 ರಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಪ್ರಾರಂಭಿಸಿತ್ತು. ಆದರೆ 2019 ರಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಲಾಯಿತು.
ಮಹಾರಾಜ ಟ್ರೋಫಿ KSCA T20 ಮೈಸೂರಿನಲ್ಲಿ ಆಗಸ್ಟ್ 7 ರಂದು ಆರಂಭವಾಗಲಿದ್ದು, ಮೊದಲ ಲೆಗ್ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಇನ್ನು ಈ ಟೂರ್ನಿಗಾಗಿ ಆಟಗಾರರನ್ನು ಡ್ರಾಫ್ಟ್ ಮೂಲಕ ಆಯ್ಕೆ ಮಾಡಲಿದ್ದು, ಜುಲೈ 30 ರಂದು ಡ್ರಾಫ್ಟ್ ಪ್ರಕ್ರಿಯೆ ನಡೆಯಲಿದೆ.
ಅಂದಹಾಗೆ ಮಹರಾಜ ಟಿ20 ಟೂರ್ನಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ಟಿವಿಯಲ್ಲಿ ವೀಕ್ಷಿಸಬಹುದು. ಈಗಾಗಲೇ ಈ ಲೀಗ್‌ನ ನೇರ ಪ್ರಸಾರದ ಹಕ್ಕುಗಳನ್ನು ಸ್ಟಾರ್ ನೆಟ್ವರ್ಕ್ ಪಡೆದಿದ್ದು, ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ನಲ್ಲಿ ವೀಕ್ಷಿಸಬಹುದು. ಇದಲ್ಲದೆ, ಫ್ಯಾನ್‌ಕೋಡ್ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ