ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ಸೆ.14 ಕ್ಕೆ ಆಯ್ಕೆ

0

ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ
ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಫರ್ಧೆಯನ್ನು ಸೆ.14 ರಂದು ನಡೆಸಲು ತಿರ್ಮಾನಿಸಲಾಗಿದೆ.

ಅಂದು ಆಲೂರು, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ತಾಲ್ಲೂಕು ಕ್ರೀಡಾಂಗಣ, ಅರಕಲಗೂಡು, ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣ, ಹಳೇಬೀಡು ಹಾಗೂ ಹಾಸನ ಜಿಲ್ಲಾ ಕ್ರೀಡಾಂಗಣಗಳಲ್ಲಿ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆ ನಡೆಸಲಾಗುವುದು.


ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ನಿಯಮಗಳು:
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬ್ಬಡಿ, ಪುಟ್ಬಾಲ್, ಥ್ರೋಬಾಲ್, ಯೋಗ ಸ್ಪರ್ಧೆಗಳನ್ನು ಮಾತ್ರ ಏರ್ಪಡಿಸಲಾಗುವುದು. ವೈಯಕ್ತಿಕ ಕ್ರೀಡೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮ/ ಆಯ್ಕೆ ತಂಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಆಯಾ ತಾಲ್ಲೂಕಿನ ಕ್ರೀಡಾಪಟುಗಳು ಆಯಾ ತಾಲ್ಲೂಕಿನಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಹೊಂದಿರುತ್ತಾರೆ. ಭಾಗವಹಿಸುವ ಸಮಯದಲ್ಲಿ ಆಧಾರ ಕಾರ್ಡ ತರುವುದು ಕಡ್ಡಾಯವಾಗಿದೆ.

ಸ್ಪರ್ಧೆ ಏರ್ಪಡಿಸಲು ಕನಿಷ್ಠ 4 ತಂಡಗಳು ಇರಬೇಕು. ಇಲ್ಲದಿದ್ದಲ್ಲಿ ಆಯ್ಕೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು. ಒಬ್ಬರಿಗೆ ಎರಡು ವೈಯಕ್ತಿಕ ಹಾಗೂ ಒಂದು ಗುಂಪು ಸ್ಫರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಒಂದು ದಿನ ಮುಂಚಿತವಾಗಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಬಳಿ ತಂಡ ಮತ್ತು ವೈಯಕ್ತಿಕ ಆಟಗಳಿಗೆ ನೊಂದಾವಣೆ ಕಡ್ಡಾಯವಾಗಿರುತ್ತದೆ. ನೊಂದಾವಣೆ ಮಾಡಿಕೊಂಡವರಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಯಾವುದೇ ಕಾರಣಕ್ಕೂ ಕ್ರೀಡಾಕೂಟ ನಡೆಯುವ ದಿನ ಸ್ಥಳ ನೊಂದಾವಣೆಗೆ ಅವಕಾಶವಿ ಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕ್ರೀಡಾಪಟುವಿನ ಆಧಾರ್ ಕಾರ್ಡ್ ಕಡ್ಡಾಯ. ಕ್ರೀಡಾಕೂಟದ ಸ್ಫರ್ಧೆಗಳನ್ನು ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರಿಗೆ ಏರ್ಪಡಿಸಲಾಗುವುದು.

ಮೇಲ್ಕಂಡ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ನಡೆಸಲಿದ್ದು, ಸದರಿ ಸ್ಫರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿಗಡಿಪಡಿಸಿದ ದಿನಾಂಕದAದು ಬೆಳಿಗ್ಗೆ 9 ಗಂಟೆಯೊಳಗೆ ಕ್ರೀಡಾಕೂಟ ನಡೆಯುವ ಕ್ರೀಡಾಂಗಣದಲ್ಲಿ/ಸ್ಥಳದಲ್ಲಿ ಸಂಬAಧಪಟ್ಟ ವರಿದಿ ಮಾಡಿಕೊಂಡು ಹೆಸರು ನೊಂದಾಯಿಸಿಕೊಳ್ಳತಕ್ಕದ್ದು. ಕ್ರೀಡಾಪಟುಗಳು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳು ವಿಧಿಸುವ ನಿಯಮಾನುಸಾರ ಷರತ್ತಿಗೊಳಪಟ್ಟು ಕ್ರಿಡಾಕೂಟದಲ್ಲಿ ಭಾಗವಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ 08172-296256 ಸಂರ್ಪಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here