ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆ ಆವರಣದಲ್ಲಿರುವ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಂ.ಕೆ. ಕಮಲ್ ಕುಮಾರ್ ಆಯ್ಕೆಗೊಂಡರೇ, ಉಪಾಧ್ಯಕ್ಷರಾಗಿ ಸಿ. ವಾಸುದೇವ್ ಅವರನ್ನು ಆಯ್ಕೆ ಮಾಡಿದ್ದು, ಚುನಾಯಿತ ನಿರ್ದೇಶಕರು ಹಾಗೂ ಅಭಿಮಾನಿಗಳು ಸೇರಿದಂತೆ ಇತರರು ಹೂವಿನ ಮಾಲೆ, ಶಾಲು ಹೊದಿಸಿ ಪೇಟ ತೊಡಿಸುವುದರ ಮೂಲಕ ಅಭಿನಂದಿಸಲಾಯಿತು.
ನಂತರ ಆಯ್ಕೆಗೊಂಡ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾದ ಎಂ.ಕೆ. ಕಮಲ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರದ ಪ್ರತಿಷ್ಠಿತ ಸಹಕಾರ ಬ್ಯಾಂಕ್ ಆದಂತಹ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ೨೦೨೩-೨೮ನೇ ಸಾಲಿಗೆ ಚುನಾವಣೆ ನಡೆದಿದ್ದು, ೧೩ ಜನ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಏರ್ಪಟ್ಟಿತ್ತು. ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದರೇ, ಉಪಾಧ್ಯಕ್ಷರಾಗಿ ವಾಸುದೇವ್ ಅವರು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.
ಸುಮಾರು೪೭ ವರ್ಷಗಳ ಪೂರೈಸಿರುವ ಈ ಬ್ಯಾಂಕ್ ಸುವರ್ಣ ಮಹೋತ್ಸವದ ಸಮೀಪದಲ್ಲಿದೆ. ಈ ಬ್ಯಾಂಕ್ ನಾಗರೀಕರಿಗೆ ತಲುಪುವುದಕ್ಕೆ sಸಹಕಾರ ನೀಡಿದ್ದು, ಇನ್ನು ಮುಂದೆಯೂ ಕೂಡ ಬ್ಯಾಂಕ್ ಹಾಸನದ ನಾಗರೀಕರ ಪರವಾಗಿ ಕೆಲಸ ಮಾಡಲಿದೆ. ಮಂದೆ ಈ ಬ್ಯಾಂಕಿನ ಸೌಲತ್ತುಗಳನ್ನು ಸಹಕಾರಿ ಬಂಧುಗಳು ಬಳಸಿಕೊಳ್ಳಬೇಕು. ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಲ್ಲಿ ಇನ್ನಷ್ಟು ಎತ್ತರಕ್ಕೆ ಬ್ಯಾಂಕನ್ನು ಕೊಂಡೂಯ್ಯಲಾಗುವುದು ಎಂದು ಹೇಳಿದರು.
ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಚುಣಾವಣೆಯ ವೇಳೆ ಸ್ಪರ್ದೆ ಮಾಡಿದ ಪ್ರತಿ ಸ್ಪರ್ದಿಗಳು ಬ್ಯಾಂಕಿನ ಬಗ್ಗೆ ಅನಾವಶ್ಯಕವಾದಂತಹ ಗೊಂದಲವನ್ನು ಪ್ರಾರಂಭ ಮಾಡಿದ್ದು, ಬ್ಯಾಂಕಿನಲ್ಲಿ ಯಾವುದೇ ಗೊಂದಲಗಳಿಲ್ಲ. ಉತ್ತಮವಾದ ಸ್ಥಿತಿಯಲ್ಲಿ ನಡೆಯುತ್ತಿದೆ. ೪೭ ವರ್ಷಗಳ ಕಾಲಾವಧಿಯಲ್ಲಿ ಇದೆ ಪ್ರಥಮ ಬಾರಿಗೆ ೪೮ ಲಕ್ಷಗಳ ಲಾಭವನ್ನು ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಗಿರೀಶ್ ಚನ್ನವೀರಪ್ಪ ಮತ್ತು ಉಪಾಧ್ಯಕ್ಷರಾದ ತಮ್ಮಣ್ಣಗೌಡರು ಹಾಗೂ ಆಡಳಿತ ಮಂಡಳಿಯಲ್ಲಿದ್ದಂತ ಎಲ್ಲಾರ ಸಹಕಾರದಿಂದ ಬ್ಯಾಂಕ್ ಪ್ರಗತಿ ಹಾದಿಯಲ್ಲಿ ಸಾಗಿತ್ತು.
ಆದರೂ ಕೂಡ ವಿರೋಧಿಗಳು ಬ್ಯಾಂಕಿನ ಬಗ್ಗೆ ಇಲ್ಲ ಸಲ್ಲದ ಊಹಪೋಹಗಳನ್ನು ಸಾರ್ವಜನಿಕರಲ್ಲಿ ಸೃಷ್ಠಿ ಮಾಡುವಂತಹ ಪ್ರಯತ್ನ ಮಾಡಿದರೂ ಹಿಂದೆ ಇದ್ದಂತಹ ಆಡಳಿತ ಮಂಡಳಿ ಬಗ್ಗೆ ಗೌರವದಲ್ಲಿ ಮತ್ತೆ ಇದೆ ತಂಡ ಮತ್ತೆ ಆಯ್ಕೆಗೊಂಡಿದೆ. ಮುಂದೆ ಉತ್ತಮವಾಗಿ ಬ್ಯಾಂಕನ್ನು ಕೊಂಡೂಯ್ಯಲು ಪ್ರಯತ್ನ ಪಡುವುದಾಗಿ ಹೇಳಿದರು.
ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಂ.ಕೆ. ಕಮಲ್ ಕುಮಾರ್ ಆಯ್ಕೆಗೊಂಡರೇ, ಉಪಾಧ್ಯಕ್ಷರಾಗಿ ಸಿ. ವಾಸುದೇವ್ ಅವರನ್ನು ಆಯ್ಕೆಯಾಗಿದು, ಅಭಿನಂದನೆ ಹೇಳಲು ಜೆಡಿಎಸ್ ಮುಖಂಡರಾದ ಸ್ವಾಮಿಗೌಡ, ಚಿನ್ನಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್, ಸೋಹನ್ ಲಾಲ್, ಮೆನ್ಷನ್ ಹೌಸ್ ವರುಣ್, ಬ್ಯಾಂಕಿನ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಹೆಚ್.ಸಿ. ಗಿರೀಶ್, ನಿತಿನ್ ಪಟೇಲ್, ಬಿ. ಶ್ರೀನಿವಾಸ್, ಜಿ.ಆರ್. ಶ್ರೀನಿವಾಸ್, ಹೆಚ್.ವಿ. ರವಿಶಂಕರ್, ಹೆಚ್.ಎಸ್. ಬಾಲಸುಬ್ರಮಣ್ಯ, ಚಂದ್ರಶೇಖರ್, ಆಶಾ ಬಾಹುಬಲಿ, ಆರ್. ಗೀತಾ, ಹೆಚ್.ಎಂ. ಯಶವಂತ್, ಎನ್.ಟಿ. ಶ್ರೀನಿವಾಸ್ ಇತರರು ಶುಭ ಕೋರಿದರು.