ನದಿಗೆ ಜಿಗಿದು ಗುತ್ತಿಗೆದಾರ ಆತ್ಮಹತ್ಯೆ ; ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ

0

ಹೊಳೆನರಸೀಪುರ : ಪಟ್ಟಣದ ಖ್ಯಾತ ಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಜೀವನ ನಡೆಸುತ್ತಿದ್ದಕ್ಕೆ ಕೆ.ಸತ್ತರ್(78) ಅವರು ಗುರುವಾರ ಹೇಮಾವತಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೇಮಾವತಿ ನದಿಯ ಹಳೇ ಸೇತುವೆಯ ಕಟ್ಟೆಯ ಮೇಲೆ ಕುಳಿತು ಚಿಂತಿತರಾಗಿ, ನದಿಗೆ ಬೀಳಲು ಮೀನಾ ಮೇಷ ಎಣಿಸುತ್ತ ಅಂತಿಮವಾಗಿ ಕೆ ಸತ್ತಾರ್ ಅವರು ಹೇಮಾವತಿ ನದಿಗೆ ಬಿದ್ದ ಬೆಚ್ಚಿ ಬೀಳಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 1980/90ರ ದಶಕದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಖ್ಯಾತರಾಗಿದ್ದ ಸತ್ತರ್ ಅವರು ನಿಷ್ಠೆಯೊಂದಿಗೆ ಕಾಯ ವಾಚ ಮನಸ್ಸಾ ಕರ್ತವ್ಯವನ್ನು ನಿರ್ವಹಿಸುತ್ತ ಸದಾ ಕಾಲ ಚಟುವಟಿಕೆಯಿಂದ ಇರುತ್ತಿದ್ದರು.

ಪ್ರತಿಯೊಬ್ಬರನ್ನು ವಿಶ್ವಾಸದಿಂದ ಕಾಣುತ್ತಿದ್ದ ಇವರು ಎಲ್ಲರನ್ನೂ ನಂಬುವಂತ ಮುಗ್ದ ವ್ಯಕ್ತಿಯಾಗಿದ್ದರು ಮತ್ತು ಕಷ್ಟವೆಂದು ಸಹಾಯ ಕೇಳಿಕೊಂಡು ಬರುತ್ತಿದ್ದ ಜನರಿಗೆ ಹಣಕಾಸಿನ ನೆರವನ್ನು ನೀಡುತ್ತಿದ್ದರು. ನಂತರದ ದಿನಗಳಲ್ಲಿ ವಯೋಸಹಜ ಕಾಯಿಲೆಗಳು ಭಾವಿಸಲು ಪ್ರಾರಂಭಿಸಿದ ಮೇಲೆ ಗುತ್ತಿಗೆ ಕೆಲಸವನ್ನು ಬಿಟ್ಟು ನೆಮ್ಮದಿಯ ಜೀವನ ಪಡೆದರು. ಇವರಿಂದ ಹಣಕಾಸಿನ ನೆರವು ಪಡೆದ‌ ಜನರಲ್ಲಿ ಕೆಲವರು ಇವರನ್ನು ವಂಚಿಸಿದ್ದರು. ವಿಶ್ವಾಸ ದ್ರೋಹ ಮಾಡಿದ ವಂಚನೆಯ ಬಾಧೆಯ ಜೊತೆಗೆ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಯಶಸ್ವಿ ಜೀವನ ನಡೆಸಿ ಇಳಿ ವಯಸ್ಸಿನಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ತಡೆಯಲಾರದೇ ಆತ್ಮಹತ್ಯೆ ದಾರಿ ಕಂಡುಕೊಂಡಿದ್ದು ದುರ್ದೈವ. ಕುಂದಾಪುರದಿಂದ ಆಗಮಿಸಿರುವ ಮುಳುಗುತಜ್ಞರು ಮೃತ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಇನ್ನು ದೇಹ ಪತ್ತೆಯಾಗಿಲ್ಲ.

LEAVE A REPLY

Please enter your comment!
Please enter your name here