ಸಕಲೇಶಪುರ ಹಳೇ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ತ್ಯಾಜ್ಯ ಪಾರ್ಕಿಂಗ್ ಸ್ಥಳದಲ್ಲಿ ಹರಿದು ದುರ್ವಾಸನೆ ಬೀರುತ್ತಿದೆ

0

ಸಕಲೇಶಪುರ : ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಪುರಸಭೆಯ ವಾಣಿಜ್ಯ ಮಳಿಗೆಯ ತಳಭಾಗದಲ್ಲಿ ಇರುವ ಸಾರ್ವಜನಿಕ ಶೌಚಾಲಯದ ಫಿಟ್ ಗುಂಡಿಯು ತುಂಬಿ ವಾಹನಗಳು ಪಾರ್ಕಿಂಗ್ ಮಾಡಿದ ಸ್ಥಳಕ್ಕೆ ಶೌಚಾಲಯದ ತ್ಯಾಜ್ಯ ಹರಿಯತ್ತಿದ್ದು, ಹಳೆ ಬಸ್ ನಿಲ್ದಾಣದ ತುಂಬೆಲ್ಲ ಗಬ್ಬುನಾಥ ವಾಸನೆ ಆವರಿಸಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಿಲ್ಲುವ ಪರಿಸ್ಥಿತಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಖಾಸಗಿ ವಾಹನ ಸವಾರರು ಪ್ರತಿನಿತ್ಯ ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು ಸಹಜವಾಗಿದೆ. ಹಳೆ ಬಾಸ್ ನಿಲ್ದಾಣದ ಎದುರುಗಡೆ ಇರುವ ಸಾರ್ವಜನಿಕರ ಫಿಟ್ ಗುಂಡಿ ತುಂಬಿ ಶೌಚಾಲಯದ ತ್ಯಾಜ್ಯ ಪಾರ್ಕಿಂಗ್ ಸ್ಥಳದಲ್ಲಿ ಹರಿದು ದುರ್ವಾಸನೆ ಹರಡಿದೆ.

ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಇಲ್ಲಿನ ಶೌಚಾಲಯದ ಗುತ್ತಿಗೆದಾರರು ಸ್ವಚ್ಚತೆಯ ಕಡೆಗೆ ಗಮನಹರಿಸದೆ ಇರುವುದರಿಂದ ಮೂತ್ರವಿಸರ್ಜನೆಗೆ ಹೋಗುವವರು ಶೌಚಾಲಯಕ್ಕೆ ಮೂಗು ಮುಚ್ಚಿಕೊಂಡು ಹೋಗಿ ಮೂಗು ಮುಚ್ಚಿಕೊಂಡು ಬರುವ ಸ್ಥಿತಿ ಎದುರಾಗಿದೆ ಇದರಿಂದಾಗಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗದ ಬೀತಿ ಎದುರಾಗಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಪುರಸಭೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ,

ಪಟ್ಟಣದ ಹೃದಯ ಭಾಗವಾದ ಹಳೆ ಬಸ್ ನಿಲ್ದಾಣದ ಸಮೀಪವಿರುವ ಶೌಚಾಲಯ ತುಂಬಿ ವಾಹನ ನಿಲುಗಡೆಯ ಜಾಗಕ್ಕೆ ತ್ಯಾಜ್ಯ ತುಂಬಿದನೀರು ಹರಿದು ದುರ್ವಾಸನೆ ಹೊಡೆಯುತ್ತಿದೆ
ತಕ್ಷಣ ಸರಿಪಡಿಸದೆ ಇದ್ದರೆ ಪುರಸಭೆಯ ವಿರುದ್ದ ಹೋರಾಟ ಮಾಡಬೇಕಾಗುತ್ತದೆ. ಎಂಥ ವಿಪರ್ಯಾಸ ಎಂದರೆ ಈ ಸ್ಥಳಕ್ಕೆ ಶಾಸಕರಾದ ಸಿಮೆಂಟ್ ಮಂಜು ಅವರು ಎರಡರಿಂದ ಮೂರು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪುರಸಭೆಯ ವಾಣಿಜ್ಯ ಮಳಿಗೆ ಮತ್ತು ಸಾರ್ವಜನಿಕರ ಶೌಚಾಲಯ ಸ್ವಚ್ಛತೆಯಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದರ ನಡುವೆಯೂ ಈ ರೀತಿ ಆಗಿರುವುದು ಅಧಿಕಾರಿಗಳ ವೈಫಲ್ಯವೆನಿಸುತ್ತದೆ. ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಜಿಲ್ಲಾದ್ಯಕ್ಷ ಜೀವನ್ ಗೌಡ ಹಾಗೂ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here