ಹಿಂದಿನಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮೋಹನ್ ಸೆಸ್ಕ್ ನೌಕರ

0

ಹಾಸನ: ಬೇಲೂರು ರಸ್ತೆಯ ಕುಪ್ಪಳ್ಳಿ ಬಳಿ ಕಳೆದ ಗುರುವಾರ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಸೆಸ್ಕ್‌ ನೌಕರ ಮೊಸಳೆ ಹೊಸಳ್ಳಿ ಹೋಬಳಿಯ ಕಲ್ಲೇನಹಳ್ಳಿಯ ಕೆ.ಟಿ.ಮೋಹನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಮೋಹನ್ ಮತ್ತು ನಟರಾಜ್ ಬೈಕ್‌ನಲ್ಲಿ ಹಾಸನ ಕಡೆಗೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ ಗಂಭೀರ ಗಾಯಗೊಂಡ ಮೋಹನ್ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಹಿಂಬದಿ ಸವಾರ ನಟರಾಜ್‌ಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಬಂಧಿಗಳು ಮೋಹನ್ ಅವರ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದು ಇತರರಿಗೆ ಮಾದರಿಯಾಗಿದ್ದಾರೆ.

” ಕೆ ಇ ಬಿ ಕೆಲಸ ಅಷ್ಟು ಸುಲಭದಲ್ಲ , ಬೆಳಿಗ್ಗೆ ಹೋದರೆ ರಾತ್ರಿ ಮನೆಗೆ ಬರುತ್ತಾರೆ ಎಂಬ ಗ್ಯಾರಂಟಿ ಇರೋದಿಲ್ಲ , ಅಂತಹ ಕರೆಂಟ್ ಕೆಲಸ ನಮ್ಮದು , ಅದರ ನಡುವೆ ಇಂತಹ ದುರಂತ ಬೇಸರ ತರಿಸಿದೆ ”  – ಸೆಸ್ಕ್ ನೌಕರ

#cescom #cescomupdateshassan

LEAVE A REPLY

Please enter your comment!
Please enter your name here