ಡಿ. 12 ಭಾನುವಾರ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ : ಫಲಿತಾಂಶ ಡಿ 15 ಬುಧವಾರ ಫಲಿತಾಂಶ

0

ಹಾಸನ ಜಿಲ್ಲೆಯಿಂದ ಮೂವರು ಒಕ್ಕಲಿಗರ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದ್ದು, ಈ ಬಾರಿ ಹನ್ನೊಂದು ಮಂದಿ ಕಣದಲ್ಲಿದ್ದಾರೆ. 
• ಹಾಸನ ಜಿಲ್ಲೆಯಲ್ಲಿ ಒಟ್ಟು 53,134 ಒಕ್ಕಲಿಗ ಅಧಿಕೃತ ಮತದಾರರು
• ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹಾಸನ ತಾಲ್ಲೂಕಿಗಿಂತ ಹೆಚ್ಚು ಅಂದರೆ ಬರೋಬ್ಬರಿ 19,948 ಮತಗಳು
• ಹಾಸನ ತಾಲ್ಲೂಕಿನಲ್ಲಿ 16,098 ಮತದಾರರು
• ಅರಕಲಗೂಡು 2,921
• ಅರಸೀಕೆರೆ 4,054
• ಬೇಲೂರು 2,694
• ಹೊಳೆನರಸೀಪುರ 2,717
• ಆಲೂರು 1,061
• ಹಾಸನ, ಚನ್ನರಾಯಪಟ್ಟಣ ತಾಲ್ಲೂಕಿನ ಮತದಾರ ನಿರ್ಧಾರವೇ ವಿಜೇತ ಪಟು ನೇಮಕಕ್ಕೆ ನಿರ್ಣಾಯಕ ಎನ್ನಲಾಗಿದೆ
• ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ C.N.ಬಾಲಕೃಷ್ಣ, ಜೆಡಿಎಸ್ ಮುಖಂಡ, ಕಾಂಗ್ರೆಸ್‌ ಮುಖಂಡ ಬಾಗೂರು ಮಂಜೇಗೌಡ, M.ಶಂಕರ್ , ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಎಂ.ಶಂಕರ್‌ (ತೆಂಕನಹಳ್ಳಿ), SS.ರಘುಗೌಡ , C.S.ಯುವರಾಜ್‌, A.N.ಮಂಜೇಗೌಡ, H.M.ರವಿ, M.K.ರವಿಶಂಕರ್‌, J.M.ಶಿವಕುಮಾರ ಜಾಗಟೆ, JPಶೇಖರ್ ಈ ಬಾರಿಯ ಗೌಡರ ರಣರಂಗದ ಅಂಕಣದ ಒಳಗಿದ್ದಾರೆ.

• ಹಾಸನ ಜಿಲ್ಲೆಯಲ್ಲಿ ಒಟ್ಟು 107 ಮತಗಟ್ಟೆ ಚನ್ನರಾಯಪಟ್ಟಣದಲ್ಲಿ 40, ಹಾಸನ 32, ಹೊಳೆನರಸೀಪುರ, ಬೇಲೂರು, ಅರಕಲಗೂಡು ಆರು, ಅರಸೀಕೆರೆ , ಸಕಲೇಶಪುರದಲ್ಲಿ 7  ಆಲೂರಿನಲ್ಲಿ ಎರಡು ಮತಗಟ್ಟೆಯಲ್ಲಿ ಅಧಿಕೃತ ಚೀಟಿ ಇದ್ದವರು ತಲಾ 3 ಮತ ಚಲಾಯಿಸಬಲ್ಲರು.

ಮತ ಎಣಿಕೆ ಕಾರ್ಯ ಡಿ.15 ರಂದು ಬೆಳಗ್ಗೆ 9 ರಿಂದ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ನಡೆಯಲಿದೆ ಗೆದ್ದವರು ಬೆಂಗಳೂರಿನ ಒಕ್ಕಲಿಗರ ಭವನದಿಂದ ಒಕ್ಕಲಿಗರ ಏಳಿಗೆಗೆಗಾಗಿ ಶ್ರಮಿಸಬಹುದು.

LEAVE A REPLY

Please enter your comment!
Please enter your name here