ಬಂಗಾರದ ಬದುಕು

0

ಶ್ರೀನಾಥ್ ಎಂಬ ವ್ಯಕ್ತಿ ಪೋಸ್ಟ್ ಮ್ಯಾನ್ ಆಗಿದ್ದ. ಅವನು ಸಣ್ಣ ವಯಸ್ಸಿನಲ್ಲಿಯೇ ತಂದೆ-ತಾಯಿ ಕಳೆದುಕೊಂಡಿದ್ದನ್ನು. ಶ್ರೀನಾಥ್ ನನ್ನ ಹಾಕಿದವರು ಚರ್ಚಿನ ಫಾದರ್ ರವರು. ಫಾದರ್ ಅವರು ಶ್ರೀನಾಥ್ ಗೆ ತಂದೆ-ತಾಯಿ, ಸ್ನೇಹಿತ ಎಲ್ಲಾ ರೀತಿಯ ರಕ್ತ ಸಂಬಂಧ ರೀತಿ ಆದರೂ ಹಾಗೂ ಅವನಿಗೆ ಪೋಸ್ಟ್ ಮ್ಯಾನ್ ಕೆಲಸ ಕೊಡಿಸಿದವರು ಫಾದರ್. ಶ್ರೀನಾಥ್ ಗೆ ಸ್ವಲ್ಪ ಬುದ್ಧಿ ಮಾನ್ಯವಾಗಿತ್ತು .ಒಂದು ದಿನ ಫಾದರ್ ರವರು ಶ್ರೀನಾಥ್ ಕರೆದು “ಯಾರನ್ನಾದರೂ ಹುಡುಗಿಯನ್ನು ಮದುವೆ ಮಾಡಿಕೋ “ಎಂದು ಹೇಳಿದಾಗ ಶ್ರೀನಾಥ್ “ನಾನು ಮದುವೆಯಾಗಲ್ಲ “ಎಂದು ಹೇಳಿ ಅಲ್ಲಿಂದ ಹೊರಟು ಹೋದನು. ನಂತರ ಸಿಟ್ಟಿನಿಂದ ಒಂದು ಕಡೆ ಸೈಕಲ್ ನಿಲ್ಲಿಸಿ ಕುಳಿತುಕೊಂಡನು. ಐದು ನಿಮಿಷದ ನಂತರ ಒಂದು ಕಸದತೊಟ್ಟಿಯಲ್ಲಿ ಯಾವುದು ಮಗು ಕಿರುಚುವ ಶಬ್ದ ಕೇಳಿಸುತ್ತದೆ. ಶ್ರೀನಾಥ ಕಸದ ತೊಟ್ಟಿಯ ಹತ್ತಿರ ಹೋದನು. ಆ ಕಸದ ತೊಟ್ಟಿಯಲ್ಲಿ ಒಂದು ನವಜಾತ ಶಿಶುವನ್ನು ಇಟ್ಟಿ ಹೋಗಿದ್ದರು. ಅದನ್ನು ನೋಡಿ

ಶ್ರೀನಾಥ್ ದೂರ ಸರಿಯುತ್ತಾನೆ. ನಂತರ ಅದೇ ಸಮಯಕ್ಕೆ ಅದೇ ದಾರಿಯಲ್ಲಿ ಫಾದರ್ ಬರುತ್ತಿರುತ್ತಾರೆ. ಫಾದರ್ ಶ್ರೀನಾಥ್ ನನ್ನ ನೋಡಿದಾಗ ಅವನು ತುಂಬಾ ಭಯದ ರೀತಿಯಲ್ಲಿ ಇದನ್ನು. ತಕ್ಷಣ ಫಾದರ್ ಓಡಿಹೋಗಿ ಶ್ರೀನಾಥ್ ನನ್ನ ಸಮಾಧಾನ ಪಡಿಸುತ್ತಾರೆ. ನಂತರ ಫಾದರ್ ಗೆ ಮತ್ತೆ ಆ ಮಗುವಿನ ಶಬ್ದ ಕೇಳಿಸುತ್ತದೆ. ಫಾದರ್ ಆ ತೊಟ್ಟಿಯ ಪಕ್ಕಕ್ಕೆ ಹೋಗಿ ಮಗುವನ್ನು ಎತ್ತಿಕೊಂಡು ಶ್ರೀನಾಥ ಹತ್ತಿರ ಬಂದರು. ಶ್ರೀನಾಥ್ “ಇದು ಏನು? ಯಾಕೆ ಕಿರುಚಿದೆ ?”ಎಂದು ಕೇಳಿದನು . ಫಾದರ್ ಹೇಳುತ್ತಾರೆ “ಇದು ಒಂದು ಮಗು .ಈ ಮಗುವಿಗೆ ಏನು ಮಾತನಾಡಲು ಬಾರದು. ಈ ಸಮಯ ಮಗುವಿಗೆ ಹಸಿವಾಗಿದೆ . ಇವಾಗ ಹಾಲು ಕೊಡಬೇಕು” ಎಂದು ಹೇಳಿದರು. ಶ್ರೀನಾಥ್ ನ ಬ್ಯಾಗಿನಲ್ಲಿ ಒಂದು ಬಾಟಲ್ ಹಾಲಿತ್ತು .ಫಾದರ್ ಕೈಕೊಟ್ಟು ಕುಡಿಸಲು ಹೇಳಿದನು. ಫಾದರ್ ಹಾಲು ಕುಡಿಸುವುದನ್ನು ನೋಡುತ್ತಿದ್ದನು. ನಂತರ ಮಗುವನ್ನು ತೆಗೆದುಕೊಂಡು ಚರ್ಚಿಗೆ ಹೊರಟಾಗ ಶ್ರೀನಾಥ್ ಫಾದರ್ ಗೆ ಹೇಳುತ್ತಾನೆ” ನಾನು ನಿಮಗೂ ಸಾಕುತ್ತೇನೆ ಹಾಗೂ ಈ ಮಗುವಿಗೆ ಏನು ತಿನ್ನಲು ಕೊಡಬೇಕು ಎಂದು ಹೇಳಿ. ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಹೇಳಿದನು .ನಂತರ ಫಾದರ್ ಯೋಚಿಸಿ ಶ್ರೀನಾಥ್ ಕೈಗೆ ಕೊಟ್ಟು ಹೋದರು. ಶ್ರೀನಾಥ್ ನಂತರ ಮಗುವನ್ನು ತೆಗೆದುಕೊಂಡು ಮನೆಗೆ ಹೊರಟನು. ನಂತರ ಮಗುವಿಗೆ ಸ್ನಾನ ಮಾಡಿಸಬೇಕಿತ್ತು. ಸ್ನಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದನು. ಆ ಕಡೆಯಿಂದ ಫಾದರ್ ಬರುತ್ತಿದ್ದರು. ಆಗ ಶ್ರೀನಾಥ್ ಮಗುವನ್ನು ಸ್ಥಾನಕ್ಕೆ ಬಿಟ್ಟು ಹೋದನು .ಆ ಮಗು ಅಳುತ್ತಿತ್ತು ಆಗ ಶ್ರೀನಾಥ್ ಓಡಿ ಬಂದು ಕೇಳುತ್ತಾನೆ ” ಮಗು ಯಾಕೆ ಹೇಳುತ್ತಿದ್ದೀಯ .ಸ್ನಾನ ಮಾಡಿಕೋ ಪಕ್ಕದಲ್ಲಿ ಇದೆ ಸೊಪ್ಪು , ಬಿಚ್ಚಿ ಗಿರುವ ಬಿಸಿ ನೀರು ಇದೆ ಬೇಗ ಬೇಗ ಸ್ನಾನ ಮಾಡಿಕೊಂಡು ಬಾ ಊಟ ಮಾಡಿಸಬೇಕು ನಿನಗೆ” ಎಂದು ಹೇಳುತ್ತಾನೆ .ಅಲ್ಲಿ ಫಾದರ್ ಮುಗುಳುನಗೆ ಕೊಡುತ್ತಾ ಶ್ರೀನಾಥ್ ಮತ್ತು ಮಗುವಿನ ಹತ್ತಿರ ಬಂದು ಶ್ರೀನಾಥಗೆ ಹೇಳುತ್ತಾರೆ “ಶ್ರೀನು ಮಗುಗೆ ನಮ್ಮ ರೀತಿ ಸ್ನಾನ ಮಾಡಿಕೊಳ್ಳಲು ಬರುವುದಿಲ್ಲ. ನಾವೇ ಸ್ನಾನ ಮಾಡಿಸಬೇಕು .ನಾನು ಇವತ್ತು ಸ್ನಾನ ಮಾಡಿಸುವುದು ಹೇಗೆ ಹೇಳಿಕೊಡುತ್ತೇನೆ. ನಾಳೆಯಿಂದ ನೀನೇ ಸ್ನಾನ ಮಾಡಿಸಬೇಕು. ದಿನನಿತ್ಯ ಬಿಸಿನೀರಿನಲ್ಲಿ ಸ್ನಾನ ಮಾಡಿಸಬೇಕು” ಎಂದು ಹೇಳಿ ಮಗುವಿಗೆ ಸ್ನಾನ ಮಾಡಿಸಿದರು. ನಂತರ ಶ್ರೀನಾಥ್ ಗೆ ಚಿಂತನೆ ಆಯ್ತು .ಮತ್ತೆ ಮಗುವನ್ನು ತೆಗೆದುಕೊಂಡು ಚರ್ಚಿಗೆ ಓಡಿ ಹೋದನು. ಅಲ್ಲಿ ಫಾದರ್ ಗಾಬರಿಗೊಂಡು ಶ್ರೀನಾಥ್ ಹತ್ತಿರ ಬಂದು “ಏನಾಯ್ತು ಶ್ರೀನಾಥ್ ಮಗುವಿಗೆ “ಎಂದು ಫಾದರ್ ಕೇಳಿದರು. ಶ್ರೀನಾಥ್ ಹೇಳುತ್ತಾನೆ “ಫಾದರ್ ಮಗುವಿಗೆ ಏನು ಆಗಿಲ್ಲ. ಈ ಮಗು ಗಂಡು ಮಗು ಅಥವಾ ಹೆಣ್ಣು ಮಗುನ ಫಾದರ್. ಮಗುವಿಗೆ ಬಟ್ಟೆ ಹಾಕಬೇ”ಕು ಎಂದು ಕೇಳಿದನು. ಫಾದರ್ ಸಮಾಧಾನವಾಗಿ ಹೇಳುತ್ತಾರೆ “ಅಯ್ಯೋ ದಡ್ಡ ಈ ಮಗು ಹೆಣ್ಣು ಮಗು” ಎಂದು ಹೇಳಿದರು. ಶ್ರೀನಾಥ್ ಮತ್ತೆ ಫಾದರ್ ಕೇಳುತ್ತಾನೆ “ಈ ಮಗುವಿಗೆ ಏನಂತ ಹೆಸರಿಡಲಿ ಫಾದರ್ “ಎಂದು ಕೇಳಿದನು . ಫಾದರ್ ಹೇಳುತ್ತಾರೆ “ಅವಳಿಗೆ ಲಕ್ಷ್ಮಿ ಎಂದು ಹೆಸರು ಚೆನ್ನಾಗಿದೆ .ಅವಳಿಗೆ ಲಕ್ಷ್ಮಿ ಎಂದೇ ಕರೆಯಬೇಕು “ಎಂದು ಹೇಳಿದರು. ಅಂದಿನಿಂದ ಶ್ರೀನಾಥ್ ಲಕ್ಷ್ಮಿ ಎಂದು ಕರೆಯುತ್ತಿದ್ದನು. ಲಕ್ಷ್ಮಿ ಅತ್ತರೆ ಶ್ರೀನಾಥ್ ಅವಳನ್ನು ಖುಷಿಪಡಿಸಲು ಹರಸಾಹಸ ಮಾಡುತ್ತಿದ್ದನು. ಶ್ರೀನಾಥ ಒಂಟಿಯಾಗಿದ್ದ ಆದರೆ ಅವನಿಗೆ ಲಕ್ಷ್ಮಿ ಸಹಪಾಠಿಯಾದ್ದಳು. ಅವನು ಏನು ತಿನ್ನುತ್ತಿದ್ದ ಲಕ್ಷ್ಮಿಗೆ ಅದನ್ನೇ ತಿನ್ನಿಸುತ್ತಿದ್ದ . ಶ್ರೀನಾಥ್ ಕೆಲಸಕ್ಕೆ ಹೋಗುವಾಗ ಲಕ್ಷ್ಮಿಯನ್ನು ಕೂಡ ಕರೆದುಕೊಂಡು ಹೋಗುತ್ತಿದ್ದನು.
ಲಕ್ಷ್ಮಿಗೆ ನಾಲ್ಕು ವರ್ಷವಾಗಿತ್ತು. ಲಕ್ಷ್ಮಿ
ತಾನೇ ಮುಖ ತೊಳೆಯುವುದನ್ನು ಕಲಿತಿದ್ದಳು. ಅಂದರೆ ಒಂದು ದಿನ ಶ್ರೀನಾಥ್ ಗೆ ತುಂಬಾ ಆತಂಕವಾಗುತ್ತದೆ .ತಕ್ಷಣ ಲಕ್ಷ್ಮಿಯನ್ನು ಕರೆದುಕೊಂಡು ಚರ್ಚಿಗೆ ಹೋಗುತ್ತಾನೆ .ಅಲ್ಲಿ ಫಾದರ್ ಶ್ರೀನಾಥ್ ಗೆ ಏನಾಯ್ತು ಎಂದು ಕೇಳುತ್ತಾರೆ .ಶ್ರೀನಾಥ್ ಹೇಳುತ್ತಾನೆ “ಫಾದರ್ ಯಾಕೋ ಗೊತ್ತಿಲ್ಲ ನಾಲ್ಕು ವರ್ಷವಾಯಿತು. ಲಕ್ಷ್ಮಿಗೆ ಇಷ್ಟು ದಿನ ನಾನು ಸುಮ್ಮನೆ ಇದ್ದೆ .ಇನ್ನೂ ಲಕ್ಷ್ಮಿ ಸಣ್ಣ ಮಗು ಎಂದುಕೊಂಡೆ ಇದ್ದೆ. ಆದರೆ ಇವಾಗ ಲಕ್ಷ್ಮಿಗೆ 4ವರ್ಷ ಮಾತನಾಡುತ್ತಿಲ್ಲ‌” ಎಂದು ಹೇಳಿದನು. ಫಾದರ್ ರಿಗೂ ಕೂಡ ಆತಂಕವಾಗುತ್ತದೆ .ನಂತರ ಲಕ್ಷ್ಮಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ನಂತರ ಡಾಕ್ಟರ್ ಏನಾಯ್ತು ಎಂದು ಕೇಳಿದಾಗ ಫಾದರ್ ಹೇಳುತ್ತಾರೆ “ಲಕ್ಷ್ಮಿ ಯಾಕೋ ಮಾತನಾಡುತ್ತಿಲ್ಲ” ಎಂದು ಹೇಳಿದರು .ನಂತರ ಡಾಕ್ಟರ್ ಆಪರೇಶನ್ ರೂಮ್ ಗೆ ಕರೆದುಕೊಂಡು ಹೋಗುತ್ತಾರೆ. ಶ್ರೀನಾಥ್ ತುಂಬಾ ಅಳುತ್ತಿದ್ದಾನೆ. ಎರಡು ಗಂಟೆ ನಂತರ ಡಾಕ್ಟರ್ ಹೊರಗೆ ಬಂದು ಫಾದರ್ ಗೆ ಹೇಳುತ್ತಾರೆ “ನೋಡಿ ಫಾದರ್ ಇನ್ನು ಮುಂದೆ ಲಕ್ಷ್ಮಿ ಮಾತನಾಡಲು ಬರುವುದಿಲ್ಲ ಹಾಗೂ ಕೇಳಿಸುವುದಿಲ್ಲ .ಯಾಕೆಂದರೆ ಈ ಮಗು ಹುಟ್ಟಿನಿಂದಲೇ ಕಿವಿ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಬರುವುದಿಲ್ಲ” ಎಂದು ಹೇಳಿದರೆರು. ಫಾದರ್ ಡಾಕ್ಟರ್ ಗೆ ಕೇಳುತ್ತಾರೆ “ಹಾಗಾದರೆ ನಾವು ಇವಳಿಗೆ ಏನಾದರೂ ಕೇಳಬೇಕಾದರೆ ಏನು ಮಾಡಬೇಕು” ಎಂದು ಕೇಳಿದಾಗ ಡಾಕ್ಟರ್ ಹೇಳುತ್ತಾರೆ “ಏನು ಇಲ್ಲ ಕೈ ಚಲನೆಯಿಂದ ಅವಳನ್ನು ಮಾತನಾಡಿಸಿ .ಅವಳಿಗೆ ನಾನು ಸ್ವಲ್ಪ ಹೇಳಿ ಕೊಟ್ಟಿದ್ದೇನೆ. ಒಂದು ವಾರದ ನಂತರ ಒಂದು ಕಿಲೋಮೀಟರ್ ದೂರದಲ್ಲಿ ಅಂಗವಿಕಲರ ಶಾಲೆ ಇದೆ .ಅಲ್ಲಿಗೆ ಕಲಿಸಿ ಎಲ್ಲಾ ಹೇಳಿಕೊಡುತ್ತಾರೆ” ಎಂದು ಹೇಳಿ ಹೋದರು. ನಂತರ ಲಕ್ಷ್ಮಿಯನ್ನು ಮನೆಗೆ ಕರೆದುಕೊಂಡು ಹೋದರು. ಅನಂತ್ ತುಂಬಾ ದುಃಖಿತನಾಗಿರುತ್ತಾನೆ. ಶ್ರೀನಾಥ್ ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಒಂದು ವಾರದ ನಂತರ ಲಕ್ಷ್ಮಿಯನ್ನು ಶಾಲೆಗೆ ಕಳಿಸುತ್ತಾನೆ. ಅಲ್ಲಿ ಎಲ್ಲಾ ಅಭ್ಯಾಸ ಮಾಡಿಸುತ್ತಾರೆ. ಶ್ರೀನಾಥ್ ಕೂಡ ಶಾಲೆಗೆ ಹೋಗಿ ಸ್ವಲ್ಪ ಸ್ವಲ್ಪ ಕೈ ಚಲನೆಯ ಅಭ್ಯಾಸ ಕಲಿಯುತ್ತಾನೆ. ದಿನಕಳೆದು ಬಂದಂತೆ ಲಕ್ಷ್ಮಿ ಮತ್ತು ಶ್ರೀನಾಥ್ ಕೈ ಚಲನೆಯ ಅಭ್ಯಾಸ ಬೇಗ ಬೇಗ ಕಲಿತರು. ನಂತರ ಶ್ರೀನಾಥ್ ಶಾಲೆಗೆ ಹೋಗುವುದನ್ನು ಬಿಟ್ಟು ಕೆಲಸಕ್ಕೆ ಹೋಗುವುದಕ್ಕೆ ಶುರುಮಾಡಿದರು. ಒಂದು ದಿನ ಒಬ್ಬ ಅಂಗವಿಕಲರ ಶಿಕ್ಷಕರು ಶ್ರೀನಾಥ್ ಮನೆಯ ಪಕ್ಕ ಇದ್ದ ಒಂದು ಮನೆಗೆ ಬಾಡಿಗೆ ಅಂತ ಬಂದರು. ಎರಡು ಮೂರು ದಿನಗಳ ನಂತರ ಶ್ರೀನಾಥ ಶಿಕ್ಷಕರಿಗೆ ಮಾತನಾಡಿಸುತ್ತಾ ಕೇಳುತ್ತಾನೆ”ನೀವು ಯಾವ ಶಿಕ್ಷಕರು” ಎಂದು ಕೇಳಿದನು. ಶಿಕ್ಷಕರು ಹೇಳುತ್ತಾರೆ “ನಾನು ಅಂಗವಿಕಲರಿಗೆ ಪಾಠ ಮಾಡುತ್ತೇನೆ” ಎಂದು ಹೇಳಿದರು. ಅನಂತ್ ಶಿಕ್ಷಕರಿಗೆ ಹೇಳುತ್ತಾನೆ “ಸರ್ ನನ್ನ ಮಗಳಿಗೆ ಕೇಳಲು ಮತ್ತು ಮಾತನಾಡ ಬಾರದು. ನನ್ನ ಮಗಳು ಶಾಲೆ ಮುಗಿಸಿದ ನಂತರ ಸಂಜೆ ಹೊತ್ತು ನೀವು ಪಾಠ ಮಾಡುತ್ತೀರಾ “ಎಂದು ಹೇಳಿದರು. ಶಿಕ್ಷಕರು ಶ್ರೀನಾಥ್ ಗೆಒಪ್ಪಿಗೆ ಕೊಟ್ಟರು .ನಂತರ ಶ್ರೀನಾಥ್ ಓಡಿಹೋಗಿ ಲಕ್ಷ್ಮಿಗೆ ಕೈ ಚಲನೆಯಲ್ಲಿ ಹೇಳುತ್ತಾನೆ “ಲಕ್ಷ್ಮಿ ನಮ್ಮ ಮನೆ ಹತ್ತಿರ ಒಬ್ಬ ಅಂಗವಿಕಲರಿಗೆ ಪಾಠ ಮಾಡುವ ಶಿಕ್ಷಕರು ಬಂದಿದ್ದಾರೆ. ಅವರ ಪರಿಚಯ ಆಗಿದ್ದಾರೆ .ನೀನು ಬೆಳಗ್ಗೆ ಶಾಲೆಗೆ ಹೋಗಿ ಸಂಜೆ ಹೊತ್ತು ನೀನು ಆ ಶಿಕ್ಷಕರ ಹತ್ತಿರ ಪಾಠ ಕೇಳಲು ಹೋಗು” ಎಂದು ಹೇಳಿದನು. ಲಕ್ಷ್ಮಿ ಕೈ ಚಲನೆಯಲ್ಲಿ ಹೇಳುತ್ತಾಳೆ ” ಆಯ್ತು ಅಪ್ಪ ನಾನು ದಿನನಿತ್ಯ ಹೋಗುತ್ತೇನೆ” ಎಂದಳು. ನಂತರ ಶ್ರೀನಾಥ್ ಲಕ್ಷ್ಮಿಯನ್ನು ಶಾಲೆಗೆ ಬಿಟ್ಟು ಕೆಲಸಕ್ಕೆ ಹೋದನು. ಶ್ರೀನಾಥ್ ಒಂದು ಹುಡುಗಿಯನ್ನು ನೋಡುತ್ತಿದ್ದಾಗ ಅಷ್ಟರಲ್ಲಿ ಸೈಕಲ್ ನ ಬ್ರೇಕ್ ಫೇಲ್ಯೂರ್ ಆಗಿ ಕೆಳಗೆ ಬೀಳುತ್ತಾನೆ .ಎದ್ದು ನಿಂತು ನೋಡುತ್ತಾನೆ ಆ ಹುಡುಗಿ ಅಲ್ಲಿ ಕಾಣುತ್ತಿರಲಿಲ್ಲ. ಸೈಕಲ್ ತೆಗೆದುಕೊಂಡು ಲಕ್ಷ್ಮಿಯನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದನು. ಸಂಜೆಯಾಗಿತ್ತು ಲಕ್ಷ್ಮಿಯನ್ನು ಶಿಕ್ಷಕರ ಮನೆಗೆ ಬಿಟ್ಟು ಬರಲು ಹೋದನು. ಶಿಕ್ಷಕರ ಮನೆ ಹತ್ತಿರ ಶ್ರೀನಾಥ್ ಹೋದಾಗ ಮನೆಯೊಳಗಿಂದ ಒಂದು ಹುಡುಗಿಯ ದ್ವನಿ ಕೇಳಿಸುತ್ತದೆ. ಆ ದ್ವನಿ ಕೋಗಿಲೆಯಂತೆ ಧ್ವನಿ, ಕಣ್ಣುಗಳು ನವಿಲಿನಂತೆ ಆ ಹುಡುಗಿಯನ್ನು ಶ್ರೀನಾಥ್ ನೋಡಿ ನಿಂತುಬಿಟ್ಟ. ಲಕ್ಷ್ಮಿ ಶ್ರೀನಾಥ್ ನ ಕೈ ಎಳೆದರು ಒಳಗೆ ಬರುತ್ತಿರಲಿಲ್ಲ. ಆಗ ಪಕ್ಕದಲ್ಲಿ ಇದ್ದ ನೀರನ್ನು ಮುಖಕ್ಕೆ ಚಿಮ್ಮಿಸಿದಾಗ ಶ್ರೀನಾಥ್ ಮುಜುಗರದಿಂದ ಆ ಹುಡುಗಿಯನ್ನು ನೋಡಿದನು. ನಂತರ ಶಿಕ್ಷಕರ ಮನೆಯೊಳಗೆ ಹೋದರು. ಶ್ರೀನಾಥ್ ಮತ್ತು ಶಿಕ್ಷಕರು ಮಾತನಾಡುವಾಗ ಆ ಹುಡುಗಿ ಕಾಫಿ ತಂದು ಕೊಟ್ಟಳು. ಶ್ರೀನಾಥ್ ಶಿಕ್ಷಕರ ಕೇಳುತ್ತಾನೆ “ಸರ್ ಈ ಹುಡುಗಿ ಯಾರು?” ಎಂದು ಕೇಳಿದಾಗ ಶಿಕ್ಷಕರು ಹೇಳುತ್ತಾರೆ “ಇವಳು ನನ್ನ ಮಗಳು ಮಾನಸ” ಎಂದು ಹೇಳಿದರು .ಶ್ರೀನಾಥ್ ನೋಡಿದ ಹುಡುಗಿ ಮಾನಸ ಕೂಡ ಶ್ರೀನಾಥ್ ಇಷ್ಟಪಟ್ಟಳು. ನಂತರ ಶ್ರೀನಾಥ್ ಮುಗುಳುನಗೆ ಕೊಡುತ್ತಾ ಲಕ್ಷ್ಮಿ ಅಲ್ಲೇ ಬಿಟ್ಟು ಮನೆಗೆ ಬಂದನು. ದಿನ ಕಳೆದು ಬಂದಂತೆ ಶ್ರೀನಾಥ್ ಮತ್ತು ಮಾನಸಳ ಪ್ರೀತಿ ಲಕ್ಷ್ಮಿಗೆ ಗೊತ್ತಾಗುತ್ತದೆ. ಒಂದು ದಿನ ಶ್ರೀನಾಥ್ ಲಕ್ಷ್ಮಿ ಹತ್ತಿರ ಬಂದು ಕೈ ಚಲನೆಯಲ್ಲಿ ಹೇಳುತ್ತಾನೆ” ನನಗೆ ಮಾನಸ ಎಂದರೆ ಇಷ್ಟ. ನಿನಗೂ ಕೂಡ ಇಷ್ಟವಾಗಿದ್ದಾಳೆ ಎಂದುಕೊಂಡಿದ್ದೇನೆ .ಮನಸ ನಿನಗೆ ಒಳ್ಳೆಯ ತಾಯಿ ಆಗುತ್ತಾಳೆ” ಎಂದು ಹೇಳಿದನು. ಲಕ್ಷ್ಮಿ ಕೈ ಚಲನೆಯಲ್ಲಿ ಹೇಳುತ್ತಾಳೆ “ಅಪ್ಪ ನೀನು ಒಂಟಿಯಾಗಿದ್ದಾಗ ನಾನು ಬಂದೆ. ಇವಾಗ ನನಗೆ ತಾಯಿ ಇಲ್ಲ ನೀನು ಮಾನಸ ಅಕ್ಕನನ್ನು ನನಗೆ ತಾಯಿಯ ರೂಪದಲ್ಲಿ ಕರೆದುಕೊಂಡು ಬರುತ್ತಿದ್ದೀಯಾ. ಮೊದಲು ಅವರ ತಂದೆಗೆ ಕೇಳು” ಎಂದು ಹೇಳಿದಳು .ಶ್ರೀನಾಥ್ “ಸರಿ ನಾಳೆ ಹೋಗಿ ಕೇಳಿಕೊಂಡು ಬರುತ್ತೇನೆ “ಎಂದು ಹೇಳಿದನು. ಮಾರನೇ ದಿನ ಶ್ರೀನಾಥ್ ಮಾನಸ ತಂದೆಯನ್ನು ಭೇಟಿಯಾಗಿ “ಸರ್ ನಿಮ್ಮ ಮಗಳನ್ನು ನಾನು ಇಷ್ಟಪಟ್ಟಿದ್ದೇನೆ .ನೀವು ಒಪ್ಪಿಗೆ ಕೊಟ್ಟರೆ ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುವೆ” ಎಂದು ಹೇಳಿದನು. ಮಾನಸ ತಂದೆ ಹೇಳುತ್ತಾರೆ “ಇಂಥ ಖುಷಿಯ ವಿಚಾರ ಹೇಳಿದ್ದೀರಿ ಅಳಿಯಂದಿರೆ. ನಿಮ್ಮ ಪ್ರೀತಿಯನ್ನು ನನಗೆ ಲಕ್ಷ್ಮಿ ಮೊದಲೇ ಹೇಳಿದ್ದಳು .ನೀವು ಬಂದು ಕೇಳದಿದ್ದರೆ ನಾನೇ ಬಂದು ಕೇಳುತ್ತಿದ್ದೆ . ನಾನು ಫಾದರ್ ಗೆ ಕೇಳಿ ಮದುವೆ ದಿನಾಂಕ ಗೊತ್ತು ಮಾಡಿದ್ದೇನೆ. ಮುಂದಿನ ವಾರ ಮದುವೆ ಇಟ್ಟುಕೊಳ್ಳೋಣ “ಎಂದು ಹೇಳಿದರು .ಒಂದು ವಾರದ ನಂತರ ಶ್ರೀನಾಥ್ ಮತ್ತು ಮಾನಸಳ ಮದುವೆ ಆಯ್ತು. ಮಾನಸ ಲಕ್ಷ್ಮಿಗೆ ಒಳ್ಳೆಯ ತಾಯಿಯಾದಳು ಹಾಗೂ ಶ್ರೀನಾಥ್ ಗೆ ಒಳ್ಳೆಯ ಧರ್ಮ ಪತ್ನಿಯಾದಳು. ಒಂದು ದಿನ ಶ್ರೀನಾಥ್ ,ಮಾನಸ ಮತ್ತು ಲಕ್ಷ್ಮಿ ಮೂವರು ಸಂತೆಗೆ ಹೋದರು. ಅಲ್ಲಿ ಕಿಡಿಗೇಡಿಗಳು ಎಲ್ಲರಿಗೂ ಹೊಡೆಯುತ್ತಿದ್ದರು. ಯಾಕೆಂದರೆ ದುಡ್ಡು ವಸೂಲಿ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಲಕ್ಷ್ಮಿಗೆ ಏಟು ಬೀಳುತ್ತದೆ .ಲಕ್ಷ್ಮಿ ಆ ಜಾಗದಲ್ಲಿ ಕುಸಿದು ಬೀಳುತ್ತಾಳೆ .ಆಗ ಶ್ರೀನಾಥ್ ನಿಗೆ ತುಂಬಾ ಸಿಟ್ಟು ಬಂದು ಆ ವ್ಯಕ್ತಿಯನ್ನು ತುಂಬಾ ಜೋರಾಗಿ ಹೊಡೆಯುತ್ತಾನೆ. ಅಲ್ಲಿದ್ದ ಜನರು ಶ್ರೀನಾಥ್ ನನ್ನು ಬಿಡಿಸಿ ಲಕ್ಷ್ಮಿಯನ್ನು ಆಸ್ಪತ್ರೆಗೆ ಸೇರಿಸಿದರು .ನಂತರ ಆಸ್ಪತ್ರೆಗೆ ಪೊಲೀಸ್ ಬಂದು ಶ್ರೀನಾಥ್ ನನ್ನು ಪೊಲೀಸ್ ಠಾಣೆಗೆ ಹಾಕಿದರು. ಶ್ರೀನಾಥ್ ಮೇಲೆ ಎಫ್ .ಐ. ಆರ್ ಹಾಕಿದರು. ಲಕ್ಷ್ಮಿ ಮೂರ್ಛೆ ಯಿಂದ ಹೊರಗೆ ಬಂದುಳು. ಮಾನಸ ಲಕ್ಷ್ಮಿಗೆ “ಶ್ರೀನಾಥ್ ನನ್ನು ಪೊಲೀಸ್ ಕರೆದುಕೊಂಡು ಹೋದರು” ಎಂದು ಹೇಳಿದಳು‌. ಮಾರನೇ ದಿನ ಮಾನಸ ಮತ್ತು ಲಕ್ಷ್ಮಿ ಇಬ್ಬರು ಕೋರ್ಟ್ ಗೆ ಬಂದಿದ್ದರು. ನಂತರ ಎಲ್ಲಾ ಸಾಕ್ಷಿಯೂ ಶ್ರೀನಾಥ್ ನ ವಿರೋಧವಿತ್ತು. ನ್ಯಾಯಾಧೀಶರು ಶ್ರೀನಾಥ್ ಗೆ ಎರಡು ತಿಂಗಳ ಜೈಲುವಾಸ ಕೊಟ್ಟರು.. ತಕ್ಷಣ ಲಕ್ಷ್ಮಿ ಓಡಿ ಬಂದು ಕೈ ಚಲನೆಯಲ್ಲಿ ಹೇಳುತ್ತಾಳೆ “ಅಪ್ಪ ನಿನ್ನು ನನ್ನ ಬಿಟ್ಟು ಹೋಗಬೇಡ .ನಿನ್ನ ಬಿಟ್ಟು ನಾನು ಹೇಗೆ ಇರಲಿ “ಎಂದು ಹೇಳಿದಳು .ಮಂಜಪ್ಪ ಹೇಳುತ್ತೇನೆ “ನೋಡು ಮಗಳೇ ನಾನು ತಪ್ಪು ಮಾಡಿದ್ದೇನೆ . ಅದಕ್ಕೆ ನನಗೆ ಶಿಕ್ಷೆ ಕೊಟ್ಟಿದ್ದಾರೆ ‌.ನಾನು ಇಲ್ಲದಿದ್ದರೇನು ನಿನ್ನ ತಾಯಿ ಮಾನಸ ಇದ್ದಾಳೆ. ಕೇವಲ ಎರಡು ತಿಂಗಳು ಮಾತ್ರ ಬೇಗ ಬರುತ್ತೇನೆ ಮಗಳೇ ಹಾಗೂ ನಿನ್ನ ಅಮ್ಮನ ಮಾತನ್ನು ಕೇಳಬೇಕು. ಅಮ್ಮನಿಗೆ ನೋವು ಕೊಡಬೇಡ “ಎಂದು ಹೇಳಿದನು. ಅವರಿಬ್ಬರ ಕೈ ಚಲನೆ ಮಾತು ಎಲ್ಲರ ಹೃದಯ ಕರಗುವಂತೆ ಮಾಡಿತು‌ ಆದರೆ ನ್ಯಾಯಧೀಶರ ಮಾತನ್ನು ಎಲ್ಲರೂ ಪಾಲಿಸಬೇಕಿತ್ತು. ನಂತರ ಶ್ರೀನಾಥ್ ನನ್ನು ಜೈಲಿಗೆ ಹಾಕಿದ್ದರು. ಎಲ್ಲರೂ ತಮ್ಮ ಮನೆಗೆ ಹೋದರು. ಎರಡು ತಿಂಗಳ ನಂತರ ಶ್ರೀನಾಥ್ ತನ್ನ ಮನೆಗೆ ಬಂದನು. ಶ್ರೀನಾಥ್ ಲಕ್ಷ್ಮಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಒಳ್ಳೆಯ ಹುದ್ದೆ ಕೊಡಿಸಿದನು.

LEAVE A REPLY

Please enter your comment!
Please enter your name here