ಯಾವುದೇ ಕ್ಷಣದಲ್ಲಿ ಯಗಚಿ ಜಲಾಶಯದಿಂದ ನದಿಗೆ ನೀರನ್ನು ಹೊರಬಿಡುವ ಸಂಭವವಿರುತ್ತದೆ

0

ಯಗಚಿ ಜಲಾನಯನ ಪ್ರದೇಶದಲ್ಲಿ (ಮೂಡಿಗೆರೆ, ಚಿಕ್ಕಮಗಳೂರು ಮತ್ತು ಬೇಲೂರು ತಾಲ್ಲೂಕು) ಮಳೆ ಸುರಿಯುತ್ತಿರುವುದರಿಂದ ಒಳ ಹರಿವು ಏರುಗತಿಯಲ್ಲಿ ಬರುತ್ತಿದ್ದು, ಪ್ರಸ್ತುತವಾಗಿ ಜಲಾಶಯವು ತುಂಬುವ ಹಂತದಲ್ಲಿದ್ದು ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಯಗಚಿ ನದಿಗೆ ನೀರನ್ನು ಹೊರಬಿಡುವ ಸಂಭವವಿರುತ್ತದೆ. ಆದ್ದರಿಂದ ಅಣೆಕಟ್ಟೆಯ ಕೆಳಭಾಗದ ಹಾಗೂ ನದಿ ಪಾತ್ರದ ಪ್ರದೇಶದಲ್ಲಿ ಬರುವ ಎಲ್ಲಾ ಹಳ್ಳಿಗಳ ಸಾರ್ವಜನಿಕರು ಮತ್ತು ರೈತ ಬಾಂಧವರು ಜನ ಜಾನುವಾರು ಹಾಗೂ ಆಸ್ತಿ ಪಾಸ್ತಿ ವಗೈರೆಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿಕೊಳ್ಳುವಂತೆ ವಿನಂತಿಸಲಾಗಿದೆ.

ಮುಂದುವರೆದು ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದ ಸರ್ಕಾರದ ಸ್ಥಳೀಯ ಇಲಾಖಾ ಅಧಿಕಾರಿಗಳಿಗೆ ಈ ಮೂಲಕ ವಿನಂತಿಸಲಾಗಿದೆ.

(ಎಸ್.ಡಿ.ತಿಮ್ಮೇಗೌಡ) ಬೇಲೂರು ಯಗಚಿ ಡ್ಯಾಂ

LEAVE A REPLY

Please enter your comment!
Please enter your name here