ಹಾಸನ ಜಿಲ್ಲೆಗೆ ಲಾಕ್ ಡೌನ್ ಹೊಸ ಗೈಡ್ ಲೈನ್ಸ್ ಜೂನ್ 21 ರಿಂದ ಜುಲೈ 5 ರವರೆಗೂ ಹೀಗಿದೆ

  0

  ಪ್ರಸ್ತುತ ರಾಜ್ಯದಲ್ಲ ಕೋವಿರ್-19 ಸೋಂಕು ಹರಡುವಿಕೆ. ಉಲ್ಬಣವಾಗಿದ್ದು, ನಿಯಂತ್ರಣ ಕಾರ್ಯ ಅತ್ಯಾವಶ್ಯಕವಾಗಿರುವ ಹಿನ್ನೆಲೆಯಲ್ಲ. ಕೋವಿಡ್-19ರ ಎರಡನೇ ಅಲೆಯ ಸೋಂಕಿನ ಸರಪಳಿಯನ್ನು ಮುರಿಯುವ ಸಂಬಂಧ ವಿಪತ್ತು ನಿರ್ವಹಣೆ ಕಾಯ್ದೆ 2005ರಲ್ಲನ ಸೆಕ್ಷನ್ 24ರಲ್ಲ. ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಾದ್ಯಂತ ಕೆಲವು ಆಯ್ದ ಚಟುವಟಕ ಕಾರ್ಯಚರಣೆಯನ್ನು ದಿನಾಂಕ 21.06.2021ರ ಬೆಳಗ್ಗೆ 6.00ಗಂಟೆಯಿಂದ ದಿನಾಂಕ: 05.07.2021ರ ಬೆಳಗ್ಗೆ 5.00 ಗಂಟೆಯ ವರಗೆ ನಿರ್ಭಂಧಿಸಿ ಮತ್ತು ಅನುಮತಿಸಿ ಉಲ್ಲೇಖ(1)ರಲ್ಲಿ ಹೊರಡಿಸಿರುವ ಆದೇಶದಂತೆ ಜಿಲ್ಲೆಯಲ್ಲ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೊವಿಡ್-19ರ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿರುತ್ತದೆ.

  ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 158 ಟಿಎನ್‌ಆರ್ 2020, ದಿನಾಂಕ: 19/06/2021 ರಲ್ಲನ ಪರಿಷ್ಕೃತ ಮಾರ್ಗಸೂಚಿಯಂತೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ 21.06.2021 ರಿಂದ ಜಾರಿಗೆ ಬರುವಂತೆ ದಿನಾಂಕ: 05.07.2021ರ ಬೆಳಗ್ಗೆ 5.00 ಗಂಟೆಯ ವರಗೆ ವಾರದ ಮೂರು ದಿನಗಳು ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಉಲ್ಲೇಖ (1) ರಿಂದ (6)ರ ಮಾರ್ಗಸೂಚಿಯಲ್ಲಿ ವಿವರಿಸಿರುವ ಚಟುವಟಕಗಳಗೆ ಬೆಳಗ್ಗೆ 6.00 ರಿಂದ 2.00 ಗಂಟೆಯವರೆಗೆ ಮಾತ್ರ ಅನುಮತಿ ನೀಡಿ ಹಾಗೂ ಈ ಕೆಳಕಂಡ ಚಟುವಟಕಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಸೂಕ್ತವೆಂದು ನನಗೆ ಮನವರಿಕೆಯಾಗಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

  ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣದಿಂದ ಆರ್. ಗಿರೀಶ್, ಭಾ.ಆ.ಸೇ., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಹಾಸನ ಜಿಲ್ಲೆ, ಹಾಸನ ಆದ ನಾನು ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್‌ನ ಎರಡನೇ ಆಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ Disaster Management Act 2005 Section 24 ಹಾಗೂ ಸಿ.ಆರ್.ಪಿ.ಸಿ ಸೆಕ್ಷನ್ 144 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರೋನಾ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಗಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದಿನಾಂಕ 21.06.2021 ರಿಂದ ಜಾರಿಗೆ ಬರುವಂತೆ ದಿನಾಂಕ: 05.07.2021ರ ಬೆಳಗ್ಗೆ 5.00 ಗಂಟೆಯ ವರಗೆ ವಾರದ ಮೂರು ದಿನಗಳು ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಉಲ್ಲೇಖ (1) ರಿಂದ (6)ರ ಮಾರ್ಗಸೂಚಿಯಲ್ಲ ವಿವರಿಸಿರುವ ಚಟುವಟಕಗಳಗೆ ಬೆಳಗ್ಗೆ 6.00 ರಿಂದ 2.00 ಗಂಟೆಯವರೆಗೆ ಮಾರ್ಗಸೂಚಿಯಲ್ಲ(Standard Operation Procedure) ತಿಳಿಸಿರುವಂತೆ ಪಾಲಸಲು ಷರತ್ತಿಗೆ ಒಳಪಡಿಸಿ ಅನುಮತಿ ನೀಡಿದೆ. ಹಾಗೂ ಈ ಕೆಳಕಂಡ ಚಟುವಟಿಕೆಗಳಿಗೆ ವಿನಾಯಿತಿ ನೀಡಿ, ಉಳದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶಿಸಿದ.

  * ವೈದ್ಯಕೀಯ ಸೇವೆಗಳು, ನ್ಯಾಯಬೆಲೆ ಅಂಗಡಿಗಳು, ರೈತ ಸಂಪರ್ಕ ಕೇಂದ್ರ ಮತ್ತು ಎಲ್ಲಾ ಡೈರಿ ಹಾಗೂ ಹಾಲನ ಬೂತುಗಳು, * ಬ್ಯಾಂಕ್ ಹಾಗೂ ಭಾರತೀಯ ಸಮಾ ಯೋಜನೆಯ ವ್ಯವಹಾರಗಳನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಬೆಳಗ್ಗೆ 8.00 ರಿಂದ 1.00 ಗಂಟೆಯವರೆಗೆ ಸಾರ್ವಜನಿಕ ಸೇವೆಗಳಿಗೆ ಹಾಗೂ 2,00 ಗಂಟೆಯವರೆಗೆ ಕಛೇರಿ ಕೆಲಸಕ್ಕೆ ಮಾತ್ರ ಅನುಮತಿ ನೀಡಿದೆ.

  > ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಅಂಚೆ ಕಛೇರಿಯ ವ್ಯವಹಾರಗಳನ್ನು ಬೆಳಗ್ಗೆ 8.00 ರಿಂದ 1.00 ಗಂಟೆಯವರೆಗೆ ಸಾರ್ವಜನಿಕ ಸೇವೆಗಳಗೆ ಹಾಗೂ 2.00 ಗಂಟೆಯವರೆಗೆ ಕಛೇರಿ ಕೆಲಸ ಕಾರ್ಯಗಳಿಗೆ ಮಾತ್ರ ಅನುಮತಿ ನೀಡಿ, ಉಳದ ವಾರದ ದಿನಗಳಾದ ಮಂಗಳವಾರ.ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ರೀತಿಯ ಅಂಚೆ ಕಛೇರಿಯ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. > ಪ್ರತಿ ದಿನ ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ದಿನಸಿ ಅಗತ್ಯ ವಸ್ತುಗಳು ಹೋಮ್ ಡೆಲವರಿಗೆ ಮಾತ್ರ ವಿನಾಯಿತಿ

  ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆಗಳು ಮತ್ತು ಕೃಷಿಯಂತ್ರೋಪಕರಣ ಮಳಗೆ ವ್ಯವಹಾರಗಳನ್ನು

  ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 8.00 ರಿಂದ 200 ಗಂಟೆಯವರೆಗೆ ಮಾತ್ರ ನಡೆಸಲು ವಿನಾಯಿತಿ ನೀಡಿದೆ. > ಉದ್ಯಾನವನಗಳಲ್ಲ ವಾಕಿಂಗ್ ಮತ್ತು ಜಾಗಿಂಗ್‌ಗಾಗಿ ಬೆಳಗ್ಗೆ 5.00 ರಿಂದ 10.00 ಗಂಟೆಯವರೆಗೆ ತೆರೆದಿರುತ್ತದೆ. ಮತ್ತು ವಾಕಿಂಗ್ ಮಾಡುವ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದು. ಉದ್ಯಾನವನಗಳಲ್ಲಿ ಜನಸಾಮಾನ್ಯರ ಗುಂಪು ಸೇರುವಿಕೆಯನ್ನು ನಿರ್ಬಂಧಿಸಿದೆ.

  > ಟ್ಯಾಕ್ಸಿ ಮತ್ತು ಆಟೋರಿಕ್ಷಗಳಗೆ ಗರಿಷ್ಠ 2 ಮಂದಿ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ನೀಡಿದೆ.

  > ಆಪ್ಟಿಕಲ್ ಅಂಗಡಿಗಳಿಗೆ ಪ್ರತಿ ದಿನ ಬೆಳಗ್ಗೆ 6,00 ರಿಂದ ಮಧ್ಯಾಹ್ನ 200 ರ ವರೆಗೆ ಕಾರ್ಯನಿರ್ವಹಿಸಲು

  ಅನುಮತಿಸಿದೆ. * ಎಲ್ಲಾ ಉತ್ಪಾದನ ಘಟಕಗಳು/ಕೈಗಾರಿಕೆಗಳಲ್ಲಿ ಶೇಕಡಾ 50% ಸಿಬ್ಬಂದಿಯನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಲು

  ಅನುಮತಿಸಿದೆ, ಕೆಲಸದ ಸಮಯದಲ್ಲ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಸತಕ್ಕದ್ದು .

  > ಎಲ್ಲಾ ಗಾರ್ಮೇಂಟ್ಸ್‌ಗಳಲ್ಲಿ ಶೇಕಡಾ 30 ಸಿಬ್ಬಂದಿಯನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ.

  ಕೆಲಸದ ಸಮಯದಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಸತಕ್ಕದ್ದು –

  > ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳು(Public Distribution System Shops ) ವಾರದ ಎಲ್ಲಾ ದಿನ ಬೆಳಗ್ಗೆ 6.00 ರಿಂದ ಮಧ್ಯಾಹ್ನ 2.00 ರ ವರೆಗೆ ಕಾರ್ಯನಿರ್ವಹಿಸಲು ಅನುಮತಿಸಿದೆ. > ತಳ್ಳುಗಾಡಿಗಳಲ್ಲಿ ತರಕಾರಿ/ಹಣ್ಣು ಮಾರಾಟ ಮಾಡಲು ಪ್ರತಿ ದಿನ ಬೆಳಗ್ಗೆ 6.00 ರಿಂದ ಮಧ್ಯಾಹ್ನ 2.00 ರ ವರೆಗೆ

  ಕಾರ್ಯನಿರ್ವಹಿಸಲು ಅನುಮತಿಸಿದೆ.

  ಮದ್ಯದಂಗಡಿಗಳು ಮತ್ತು ಔಟ್‌ಲೆಟ್‌ಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 6.00 ರಿಂದ

  2.00 ಗಂಟೆಯವರೆಗೆ ತೆರೆಯಲು ಮತ್ತು ಪಾರ್ಸಲ್ ಕೊಂಡೊಯ್ಯಲು ಮಾತ್ರ ಅನುಮತಿಸಿದೆ. > ಕಟ್ಟಡ ಕಾಮಗಾರಿಗಳ ಸಾಮಗ್ರಿ ಮಳಗೆಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 6.00 ರಿಂದ 2.00 ಗಂಟೆಯವರೆಗೆ ತೆರೆಯಲು ಅನುಮತಿಸಿದೆ. > ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 6.00 ರಿಂದ 2.00 ಗಂಟೆಯವರೆಗೆ ತೆರೆಯಲು ಅನುಮತಿಸಿದೆ.

  ನಿಷೇದಾಜ್ಞೆ ಅವಧಿಯಲ್ಲ ಸರಕು ಸಾಗಾಟದ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಸಂಚಾರ ಹಾಗೂ

  ವ್ಯಕ್ತಿಗಳ ಓಡಾಟ ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ರ ಉಪಬಂಧಗಳು

  ಭಾರತೀಯ ದಂಡ ಸಂಹಿತೆ ಸೆಕ್ಷನ್ ’88ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರ ಕಾನೂನು

  ಉಪಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. – ಹಾಸನ ಜಿಲ್ಲಾಧಿಕಾರಿ

  LEAVE A REPLY

  Please enter your comment!
  Please enter your name here