ಹಾಸನ / ಬೆಂಗಳೂರು : ಟೀ ಕುಡಿದು ರಸ್ತೆ ದಾಟುತ್ತಿದ್ದ ಅಶೋಕ ಲೈಲ್ಯಾಂಡ್ ಚಾಲಕನಿಗೆ ಗೂಡ್ಸ್ ಲಾರಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೊಳೇನರಸೀಪುರ ತಾಲುಕು ಚಿಗಳ್ಳಿ ಗ್ರಾಮದ ಪಜ್ವಲ್, ತಂದೆ ಕೊಡಿಸಿದ ಅಶೋಕ ಲೈಲ್ಯಾಂಡ್ ವಾಹನ ಇಟ್ಟುಕೊಂಡು ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದರು.
ನಿನ್ನೆ ಹಾಸದಿಂದ ಬೆಂಗಳೂರಿಗೆ ಬಾಡಿಗೆ ಇದೆ ಎಂದು ಹೇಳಿ ಹೋಗಿದ್ದು, ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಗೂಡ್ಸ್ ತುಂಬಿಕೊಂಡು ಬರುವಾಗ ಶಾಂತಿಗ್ರಾಮದ ಟೋಲ್ ಬಳಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದರು.
ರಸ್ತೆ ದಾಟಿ ಟೀ ಕುಡಿದು ನಂತರ ಮೂತ್ರ ವಿಸರ್ಜನೆ ಮಾಡಿ, ಎನ್.ಹೆಚ್75 ಬಿ.ಎಂ ರಸ್ತೆ, ಕೆ 75 ರಸ್ತೆ ಎದುರು ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕಂಟೈನರ್ ಗೂಡ್ಸ್ ಲಾರಿ ಗುದ್ದಿದೆ. ರಸ್ತೆ ಮೇಲೆ ಬಿದ್ದ ರಭಸಕ್ಕೆ ತಲೆಗೆ ಬಲವಾದ ಪೆಟ್ಟಾಗಿ ಪ್ರಜ್ವಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ