ಅಂತರರಾಜ್ಯ ಕಾರು ಕಳ್ಳರ ಬಂಧಿಸುವಲ್ಲಿ ಪೊಲೀಸ್ರ ಯಶಸ್ವಿ ಕಾರ್ಯಚರಣೆ ೪ ಕಾರು, ೨ ಲಕ್ಷದ ೭೫ ಸಾವಿರ ನಗದು ವಶ

0

ಹಾಸನ: ಅಂತರ್ ರಾಜ್ಯ ಕಾರು ಕಳ್ಳರ ಬಂಧಿಸಿ ವಿಚಾರಣೆಯಲ್ಲಿ ಅವರಿಂದ ನಾಲ್ಕು ಕಾರು ಮತ್ತು ೨ ಲಕ್ಷದ ೭೫ ಸಾವಿರ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿ ಕಾರ‍್ಯಚರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಜುಲೈ ೮ ರಂದು ಮೈಸೂರು ಜಿಲ್ಲೆ. ಪಿರಿಯಾಪಟ್ಟಣ ತಾ. ಹುಣಸೆಕೊಪ್ಪಲು ಗ್ರಾಮದ ವಾಸಿಯಾದ ಶಶಿಕುಮಾರ ಅವರು ತನ್ನ ಸ್ನೇಹಿತನ ಊರಾದ ಸಕಲೇಶಪುರ ತಾ. ಬಾಳುಪೇಟೆಯ ಸುನೀಲ್‌ರವರ ಮನೆಗೆ ತಮ್ಮ ಬಾಬು ಏಂ೦೪ಒಃ೧೬೯೪ ಮಾರುತಿ ಆಲ್ಲೊ ಕಾರಿನಲ್ಲಿ ಬಂದು ಸಂe ೭ರ ಸಮಯದಲ್ಲಿ ಮನೆಯ ಮುಂದೆ ಕಾರು ನಿಲ್ಲಿಸಿ

ಜು.೯ರಂದು ಬೆಳಿಗ್ಗೆ ಸುಮಾರು ೦೭:೦೦ ಗಂಟೆಗೆ ಎದ್ದು ನೋಡಲಾಗಿ ಕಾರು ಇರಲಿಲ್ಲ.ಎಲ್ಲಾ ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಕಳುವಾಗಿರುವ ಕಾರನ್ನು ಹುಡುಕಿಕೊಡುವಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆಯೂ ಪ್ರಕರಣವೂ ದಾಖಲು ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಕಲೇಶಪುರ ತಾಲ್ಲೂಕು ಹಾಗು ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾರುಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಿತ್ತು. ಈ ಬಗ್ಗೆ ಸಕಲೇಶಪುರ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ಅಪರಾಧ ಪತ್ತೆ ಉಸ್ತುವಾರಿ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಚಿಸಿದ್ದು, ಈ ತಂಡದಿಂದ ತನಿಖೆ ವೇಳೆ ಆರೋಪಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪುದಿಯ ತೆರವು ತಾಲೂಕಿನ ಉಡುತುರಿ ಹೌಸ್ ನಿವಾಸಿ ಸೆಂಟ್ರಿಂಗ್ ಕೆಲಸ ಮಾಡುವ ಕೆ.ಎಸ್. ದಿಲೀಶ್ ೩೯ ವರ್ಷ ಎಂಬುವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನಿಂದ ಬಾಳ್ಳುಪೇಟೆ ಗ್ರಾಮದಲ್ಲಿ ಕಳುವಾಗಿದ್ದ ಮಾರುತಿ ಅಲ್ಟೋ ಕಾರು, ಆಲೂರಿನಲ್ಲಿ ಕಳುವಾಗಿದ್ದ ಮಾರುತಿ ಓಮಿನಿ ಕಾರು, ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ಮಾರುತಿ ಓಮಿನಿ ಕಾರು ಮತ್ತು ಒಂದು ಮಹೀಂದ್ರ ಬುಲೆರೋ ವಾಹನಗಳನ್ನು ವಪಡಿಸಿಕೊಳ್ಳಲಾಗಿದೆ. ಕಳುವಾಗಿದ್ದ ವಾಹನಗಳ ಒಟ್ಟು ಮೌಲ್ಯ ರೂ ೫,೪೩,೦೦೦ ಆಗುತ್ತದೆ ಎಂದು ಅಂದಾಜಿಸಲಾಗಿದೆ. ಆರೋಪಿಯು ಇನ್ನಿತರ ಕಡೆಗಳಲ್ಲಿ ಕಾರುಗಳನ್ನು ಕಳ್ಳತನ ಮಾಡಿ ಬಿಡಿಭಾಗಗಳನ್ನು ಮಾರಾಟ ಮಾಡಿ ಕೂಡಿಟ್ಟಿದ್ದಂತಹ ರೂ ೨,೭೫,೦೦೦ ನಗದು ಹಣವನ್ನು ಹಾಗು ಕಳ್ಳತನ ಮಾಡಲು ಬಳಸುತ್ತಿದ್ದ ಒಂದು ಸೆನ್ಸಾರ್ ಮಿಶಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಅಂತರ್ ರಾಜ್ಯ ಕಾರು ಕಳ್ಳರನ್ನು ಸೆರೆ ಮಾಡುವಲ್ಲಿ ಶ್ರಮಿಸಿದ ಸಕಲೇಶಪುರ ಉಪ ವಿಭಾಗದ ಸಹಾಯಕ ಪೊಲೀಶ್ ಅಧೀಕ್ಷಕ ಹೆಚ್.ಎನ್. ಮಿಥುನ್, ಪೊಲೀಸ್ ವೃತ್ತ ನಿರೀಕ್ಷಕ ಚೈತನ್ಯ, ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ. ಗಂಗಾಧರ್, ಅಪರಾಧ ಪತ್ತೆ ಉಸ್ತುವಾರಿ ತಂಡದ ಅಪರಾಧ ವಿಭಾಗ ಪಿ.ಎಸ್.ಐ. ಯು. ಖತೀಜ, ಸದಾಶಿವ ತಿಪರೆಡ್ಡಿ, ಸುನೀಲ್, ಶಫಿ, ಖಾದರ್ ಆಲಿ, ಸತೀಶ್, ರಾಕೇಶ್, ಸೋಮಶೇಖರ್, ಚಾಲಕರಾದ ಪ್ರದೀಪ್, ವಜೀರ್ ಇವರ ಕಾರ‍್ಯವೈಕರಿಗೆ ಎಸ್ಪಿ ಹರಿರಾಂ ಶಂಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here