ಇದು ಶಾಸಕ ಸಿಮೆಂಟ್ ಮಂಜು ತೋಟಗಾರಿಕೆ ಇಲಾಖೆಯ ಅಧಿಕಾರಿಯ ಮೇಲೆ ಗುಡುಗಿದ ಘಟನೆ ನೆಡೆಯಿತು.ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಕುನಿಗಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಹೋಬಳಿ ತೋಟಗಾರಿಕೆ ಇಲಾಖೆ ಅಧಿಕಾರಿಯ ಉಡಾಫೆ ಉತ್ತರಕ್ಕೆ ಶಾಸಕರು ಗರಂ ಪ್ರಸಂಗ ಜರುಗಿತು. ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಹುಣಸೆ ಗ್ರಾಮದ ರೈತ ರಾಜೀವ್ ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿಯಲ್ಲಿ ಗಿಡಗಳನ್ನು ಪಡೆದಿದ್ದರು.
ಯೋಜನೆ ಅಡಿಯಲ್ಲಿ ರೈತರಿಗೆ ಬರಬೇಕಾಗಿದ್ದ ಸಹಾಯಧನ ಬೇರೊಬ್ಬರ ಖಾತೆಗೆ ಜಮಾವಣೆಯಾಗಿರುವ ಬಗ್ಗೆ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು. ಒಟ್ಟು ಮೂರು ಕಂತುಗಳಲ್ಲಿ ಬಿಡುಗಡೆಯಾಗುವ ಹಣ ಕಿರುಹುಣುಸೆ ಗ್ರಾಮದ ರಾಜೀವ್ ಅವರಿಗೆ ಎರಡು ಕಂತುಗಳಲ್ಲಿ ಈಗಾಗಲೇ ಬಂದಿದ್ದು ಮೂರನೇ ಕಂತು ಬೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬನಹಳ್ಳಿ ಗ್ರಾಮದ ರಾಜೀವ್ ಎಂಬುವರಿಗೆ ಜಮಾ ಆಗಿದೆ . ಇದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಪ್ಪಿನಿಂದ ಆಗಿದೆ ಎಂದು ರೈತರು ಆರೋಪಿಸಿದ್ದರು.
ಈ ಕುರಿತಂತೆ ಇಲಾಖೆಯ ದೇವರಾಜ್ ಅವರಿಗೆ ಈ ಕುರಿತು ಸ್ಪಷ್ಟನೆ ಕೇಳಿದ ಶಾಸಕರಿಗೆ ಉಡಾಫೆ ಉತ್ತರ ನೀಡಲು ಮುಂದಾದ ದೇವರಾಜ್ ಗೆ ತರಾಟೆಗೆ ತೆಗೆದುಕೊಂಡರು. ಹಣ ವರ್ಗಾವಣೆಯಾಗುವಾಗ ಆಧಾರ್ ಕಾರ್ಡ್ ಲಿಂಕ್ ಆಗಿದ್ದರು ಹೇಗೆ ಹಣ ಹೋಗುತ್ತದೆ ಎಂದು ಪ್ರಶ್ನಿಸಿದರು.ಇನ್ನು ಮೂರ್ನಾಲ್ಕು ದಿನದಲ್ಲಿ ರೈತರಿಗೆ ಆಗಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಹೋಬಳಿಯಲ್ಲಿ ನಡೆದಿರುವ ನರೇಗಾ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಪಟ್ಟಿಯಾಗು ಹಣ ಸಂದಾಯವಾಗಿರುವ ಬಗ್ಗೆ ವರದಿ ನೀಡಬೇಕೆಂದು ಎಂದು ಖಡಕ್ ಸೂಚನೆ ನೀಡಿದರು.