ಹಳ್ಳಿ ಸೊಡಗಿನ ಸಿನಿಮಾ ಮೂಲಕ ಮತ್ತೆ ಬರ್ತಿದ್ದಾರೆ ‘ರಾಜಹಂಸ’ ಹೀರೋ ಗೌರಿ ಶಂಕರ್

0

ಹೊಸ ಸಿನಿಮಾಗಾಗಿ ತಯಾರಾದ ರಾಜಹಂಸ ಹೀರೋ

‘ಜೋಕಾಲಿ’, ‘ರಾಜಹಂಸ’ ಎನ್ನುವ ಸಿನಿಮಾಗಳು ಕನ್ನಡ ಚಿತ್ರಪ್ರಿಯರಿಗೆ ನೆನಪಿರಬಹುದು. ಸಿನಿಮಾ ಮರೆತಿದ್ದರೂ ‘ಚುಚ್ಚಿ ಚುಚ್ಚಿ ಕೊಂದೆಯಲ್ಲೇ..’ ಎನ್ನುವ ಹಾಡು ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಇದೇ ಹಾಡಿನಲ್ಲಿ ಗೌರಿ ಶಂಕರ್ ನಾಯಕನಾಗಿ ಮಿಂಚಿದ್ದರು. ರಾಜಹಂಸ ಸಿನಿಮಾ ರಿಲೀಸ್ ಆಗಿ 5 ವರ್ಷಗಳ ಮೇಲಾಗಿದೆ. ಇದೀಗ ಆ ಸಿನಿಮಾಗಳ ಬಗ್ಗೆ ಯಾಕೆ ಅಂತಿರ. ನಾಯಕ ಗೌರಿ ಶಂಕರ್ ಇದೀಗ ಮತ್ತೊಂದು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಗೌರಿ ಶಂಕರ್ ಅಭಿನಯದ ‘ರಾಜಹಂಸ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದಭಿರುಚಿಯ ಕೌಟುಂಬಿಕ ಚಿತ್ರವಾಗಿತ್ತು. ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ನಾಯಕ ಗೌರಿ ಶಂಕರ್ ಅಭಿನಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತ್ತು. ಇದೀಗ ಮತ್ತೊಂದು ಉತ್ತಮ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸ್ಜಾಗಿದ್ದಾರೆ. ಗ್ಯಾಪ್‌ನ ಬಳಿಕ ಗೌರಿ ಶಂಕರ್ ಹಳ್ಳಿ ಸೊಗಡಿನ ಸಿನಿಮಾ ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಕನ್ನಡ ಚಿತ್ರರಂದಲ್ಲಿ ವಿನೂತನ ಸಿನಿಮಾಗಳಿಗೇನು ಬರವಿಲ್ಲ. ಇದೀಗ ಗೌರಿ ಶಂಕರ್ ಅವರ ಜನಮನ ಸಿನಿಮಾ ಸಂಸ್ಥೆಯಿಂದ ಮತ್ತೊಂದು ಹಳ್ಳಿ ಸೊಗಡಿನ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ.

ಗೌರಿ ಶಂಕರ್ ಅವರೇ ನಟಿಸಿ ನಿರ್ಮಾಣ ಮಾಡಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಟೈಟಲ್ ಪೋಸ್ಟರ್ ಅಕ್ಟೋಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಬೆಳಗ್ಗೆ 11.11ಕ್ಕೆ ತಮ್ಮ ಸಿನಿಮಾದ ಮೊದಲ ನೋಟವನ್ನು ರಿವೀಲ್ ಮಾಡಲು ಕಾತರರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಗೌರಿ ಶಂಕರ್ ‘ಇದೊಂದು ಅಪ್ಪಟ ಹಳ್ಳಿ ಸೊಗಡಿನ ಸಿನಿಮಾವಾಗಿದೆ. ಇದುವರೆಗೂ ಯಾರು ನೋಡಿರದ, ಮಾಡಿರದ ಸಬ್ಜೆಕ್ಟ್ ಇದಾಗಿದ್ದು ಖಂಡಿತವಾಗಿಯೂ ಕನ್ನಡ ಚಿತ್ರಪ್ರಿಯರಿಗೆ ಇಷ್ಟವಾಗುತ್ತದೆ’ ಎಂದು ಹೇಳಿದರು.

ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ಸಿನಿಮಾತಂಡ ತಂಡ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗದ್ದಾರೆ. ಅಂದಹಾಗೆ ಸಿನಿಮಾ ಹೇಗಿರಲಿದೆ, ಯಾವ ಸಬ್ಜೆಕ್ಟ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಎಂದು ಗೊತ್ತಾಗಬೇಕಾದಿರೆ ಅಕ್ಟೋಬರ್ 24ರ ವರೆಗೂ ಕಾಯಲೇ ಬೇಕು.

LEAVE A REPLY

Please enter your comment!
Please enter your name here