ಒಳ್ಳೆಯ ರುಚಿ ಮಾತ್ರವಲ್ಲ ಒಳ್ಳೆಯ ಆರೋಗ್ಯವನ್ನು ನೀಡುವುದರಲ್ಲೂ ಉತ್ತಮ. ಯಾವ ಹಣ್ಣಿದು?

0

ಸೀತಾಫಲದ ರುಚಿಯಿಂದ ಇದು ಬಹುತೇಕ ಜನರ ನೆಚ್ಚಿನ ಹಣ್ಣು ಆಗಿದೆ. ಇದರಲ್ಲಿರುವ ವಿಟಮಿನ್ ಸಿ ,ವಿಟಮಿನ್ ಎ ,ಮೆಗ್ನೀಸಿಯಂ, ಪೊಟ್ಯಾಸಿಯಂ ಅಂಶಗಳು ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಚರ್ಮಕ್ಕೆ, ಕೂದಲಿಗೆ ಕೂಡ ಬಹಳ ಒಳ್ಳೆಯದು.

ಪ್ರಯೋಜನಗಳು:

• ಹೃದಯಾಘಾತಗಳಿಂದ ದೂರವಿರಬಹುದು:
ಈಗಿನ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ವಿಚಾರ ಅಂತಹ ಸಮಯದಲ್ಲಿ ನಾವು ಆರೋಗ್ಯಕರವಾದ ಹಣ್ಣುಗಳನ್ನು ಸೇವಿಸಬೇಕು.ಸೀತಾಫಲ ದಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಕಾಪಾಡಲು ಪೂರಕವಾಗುತ್ತದೆ.ಇದರಲ್ಲಿರುವ ಮೆಗ್ನೀಶಿಯಂ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ.

• ಜೀರ್ಣಕ್ರಿಯೆಯ ಕೆಲಸಕ್ಕೆ ಸಹಾಯಕಾರಿ:
ಅಜೀರ್ಣತೆಯಿಂದ ಬಹಳಷ್ಟು ತೊಂದರೆ ಗಳಾಗುವುದು ಸಹಜ ಹೊಟ್ಟೆಯುರಿ,ಹುಳಿತೇಗು, ಕರುಳಿನ ಹುಣ್ಣು ಹೀಗೆ ಹಲವಾರು ತೊಂದರೆಗಳನ್ನು ನಾವು ಅನುಭವಿಸುತ್ತೇವೆ.ಸೀತಾಫಲದ ತಿರುಳು ಸುಲಭವಾಗಿ ಜೀರ್ಣವಾಗುವುದು ರಿಂದ ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ದೂರ ಮಾಡುತ್ತದೆ.

• ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುತ್ತದೆ:
ಸೀತಾಫಲದಲ್ಲಿರುವ ಕರಗುವ ನಾರು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಮ್ಮಿ ಮಾಡುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತವೆ. ಹಾಗೆಯೇ ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣವಾದ ಫ್ರೀ ರಾಡಿಕಲ್ಸ್ ಎಂಬ ಕಣಗಳಿಂದಲೂ ರಕ್ಷಣೆ ಒದಗಿಸುತ್ತದೆ.

• ಆಸ್ತಮ ರೋಗದಿಂದ ಮುಕ್ತಿ ನೀಡುತ್ತದೆ:
ಸೀತಾಫಲದಲ್ಲಿ ವಿಟಮಿನ್ ಬಿ ಸ್ಟಿಕ್ಸ್ ವಿಶೇಷವಾಗಿ ಶ್ವಾಸಕೋಶಗಳಿಗೆ ಉಪಯೋಗವಾಗುತ್ತದೆ.ಹಾಗಾಗಿ ಇದು ಶ್ವಾಸಕೋಶಗಳಲ್ಲಿರುವ ತೊಂದರೆಗಳನ್ನು ಸರಿಪಡಿಸಿ ಒಳ್ಳೆಯ ಆರೋಗ್ಯ ನೀಡಲು ಸಹಾಯ ಮಾಡುತ್ತದೆ.


ಸೀತಾಫಲದ ಉಪಯೋಗಗಳು ತಿಳಿದು ಕೂಡ ಇದನ್ನು ಉಪಯೋಗಿಸಿದೆ ಇರಬೇಡಿ.

-ತನ್ವಿ. ಬಿ

LEAVE A REPLY

Please enter your comment!
Please enter your name here