ಕರ್ನಾಟಕ ರಾಜ್ಯ ಮುಕ್ತ ವಿ ವಿ ಹಾಸನ ಪ್ರಾದೇಶಿಕ ಕೇಂದ್ರದ ಪರೀಕ್ಷೆ ಮುಂದೂಡಿಕೆ

0

ಹಾಸನ: ಪ್ರತಿಭಟನೆ ಹಾಗೂ ಬಂದ್ ಹಿನ್ನೆಲೆಯಲ್ಲಿ 25.9.2020 ಮತ್ತು 28.9.2020 ರಂದು ಕರ್ನಾಟಕ ರಾಜ್ಯ ಮುಕ್ತ ವಿ ವಿ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಬೇಕಿದ್ದ ಎಲ್ಲಾ ಪದವಿ ಪರೀಕ್ಷೆ ಮುಂದೂಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹಾಸನ ಪ್ರಾದೇಶಿಕ ನಿರ್ದೇಶಕ ಡಾ. ಪಿ.ಹರೀಶ್‌ ಅವರು, ಪ್ರತಿಭಟನೆ ಹಾಗೂ ಬಂದ್ ಇರುವ ಹಿನ್ನೆಲೆಯಲ್ಲಿ ಇದೇ ತಿಂಗಳು ೨೫ ಮತ್ತು ೨೮ ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮಾತ್ರ ತಾತ್ಕಾಲಿಕ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಪರೀಕ್ಷೆಗಳ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುವ ವೇಳೆ ಅವರಿಗೆ ಯಾವುದೇ ಅನಾನುಕೂಲ ಆಗಬಾರದೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here