ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ

0
  • ಹದಿನೈದುಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ
  • ಐವರು ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯ.
  • ಗಾಯಾಳುಗಳು ಸಕಲೇಶಪುರ ಹಾಗೂ ಹಾಸನ ಆಸ್ಪತ್ರೆಗೆ ರವಾನೆ

ಸಕಲೇಶಪುರ: ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್ಅಪ್ ವಾಹನ ಪಲ್ಟಿಯಾಗಿ ಹದಿನೈದಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆಬ್ಬಸಾಲೆ ಗ್ರಾಮದ ಬಳಿ ನಡೆದಿದೆ.

ಸಕಲೇಶಪುರ ಪಟ್ಟಣದ ಸಮೀಪವಿರುವ ಕುಡಗರಗಳ್ಳಿ, ಆಚಂಗಿ, ಗ್ರಾಮದಿಂದ ಮಹಿಳಾ ಕಾರ್ಮಿಕರನ್ನು ಹಾರ್ಲೆ ಕಾಫಿ ತೋಟದ ಕೆಲಸಕ್ಕೆ ಪಿಕ್ಅಪ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಹೆಬ್ಬಸಾಲೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಹನ ಪಲ್ಟಿಯಾಗಿದೆ.

ಪಿಕ್ಅಪ್ ವಾಹನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿದ್ದು, ಐವರು ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸಕಲೇಶಪುರ ಹಾಗೂ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here