ಕೃಷ್ಣೇಗೌಡರ ಬರ್ಬರ ಕೊಲೆ ಪ್ರಕರಣ : ಭವಾನಿ ರೇವಣ್ಣ ಭೇಟಿ ಕುಟುಂಬಸ್ಥರಿಗೆ ಸಾಂತ್ವನ, ಮಾಧ್ಯಮಕ್ಕೆ ನೀಡಿದರು ಈ ಬಗ್ಗೆ ಮೊದಲ ಪ್ರತಿಕ್ರಿಯೆ

0

ಭವಾನಿ ರೇವಣ್ಣನವರು ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಕೃಷ್ಣಣ್ಣ ರವರು ಹತ್ಯೆ ಆಗಿರುವುದು ಬಾರಿ ಬೇಸರದ ಸಂಗತಿ. ಅವರು ನಮಗೂ ಮತ್ತು ನಮ್ಮ ಕುಟುಂಬಕ್ಕೆ ಮತ್ತು ರೇವಣ್ಣ ಅವರಿಗೆ ಆತ್ಮೀಯವಾಗಿದ್ದು, ಹಾಸನದಲ್ಲಿ ಅವರಿಗೆ ಯಾರು ವೈರಿಗಳು ಇದ್ದಾರೆ ಎಂಬುದೆ ನನಗೆ ಗೊತ್ತಿಲ್ಲ. ಯಾವಾಗಲು ಮಾತು ಕಡಿಮೆ ಜೊತೆಗೆ ಯಾರ ಬಳಿನು ವಿರೋಧ ಮಾಡಿಕೊಳ್ಳುವ ಸ್ವಭಾವದವರಲ್ಲ. ಏನಾದರೂ ಹೇಳಿದರೇ ಆಯಿತು ಎನ್ನುವ ಉತ್ತರ ಅವರಿಂದ ಬರುತಿತ್ತು. ಅವರ ಹತ್ಯೆಯಾದ ವಿಚಾರವಾಗಿ ಸ್ವರೂಪ್ ಮತ್ತು ನಮ್ಮ ಪಿಎ ಕೂಡ ಕರೆ ಮಾಡಿದಾಗ ವಿಷಯ ತಿಳಿದು ಹಾಸನದಲ್ಲಿ ಈತರ ಘಟನೆಗಳು ಒಂದರ ಮೇಲೊಂದು ನಡೆಯುತ್ತಿದೆ ಎಂದು ನನಗೆ ಶಾಕ್ ಆಯಿತು.

ಮೃತರಾದ ಕುಟುಂಬದವರು ತುಂಬ ದುಃಖರಾಗಿರುವಾಗ ನಾನು ಏನು ಹೇಳುವುದು ಎಂಬುದು ತೋಚಲಿಲ್ಲ. ಕೃಷ್ಣಣ್ಣ ಅವರನ್ನು ಹತ್ಯೆ ಮಾಡಿದ ಯಾರೆ ಆಗಿರಲಿ, ಪ್ರಭಾವಿ ಆಗಿರಲಿ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣದಲ್ಲಿ ಕ್ರಮ ತೆಗೆದುಕೊಂಡು ಅವರ ಯಾರು ಎಂಬುದನ್ನು ಕಂಡು ಹಿಡಿದು ಬಂಧಿಸಿ ತಕ್ಕ ಶಿಕ್ಷೆಯನ್ನು ಕೊಡಿಸಬೇಕು ಎಂಬುದು ನನ್ನ ಮನವಿಯಾಗಿದೆ ಎಂದರು. ಕೃಷ್ಣಣ್ಣನವರ ಆತ್ಮಕ್ಕೆ ಶಾಂತಿ ಸಿಗಲೆಂದು ಹೇಳುತ್ತೇನೆ. ಆಗೇ ಮೃತ ಕೃಷ್ಣಣ್ಣರವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಕೇಳುತ್ತೇನೆ. ಅವರನ್ನ ಹತ್ಯೆ ಮಾಡಿದವರು ಯಾರೆ ಆಗಿರಲಿ, ಯಾವ ವ್ಯವಹಾರ ಇರಲಿ ಮಾತುಕಥೆಯಲ್ಲಿ ಬಗೆಹರಿಸಿಕೊಳ್ಳಬೇಕಾಗಿತ್ತು. ಇಂತಹ ಘಟನೆವರೆಗೂ ಹೋಗಬಾರದಿತ್ತು.

ಹಾಸನದಲ್ಲಿ ಇಂತಹ ಘಟನೆ ನಡೆದು ಬಿಡುತ್ತಲ ಎಂಬುದು ಭಯ. ಅವರು ರೌಡಿಜಂ ಮಾಡುವುದು, ರೌಡಿಗಳ ಇಟ್ಟುಕೊಳ್ಳುವುದು ಮಾಡಿದರೇ ಅದು ಒಂದು ವರ್ಗವಾಗುತ್ತದೆ. ಆದರೇ ಇವರು ಅವರ ಪಾಡಿಗೆ ಗ್ರಾನೈಟ್ ವ್ಯವಹಾರ ಮಾಡಿಕೊಂಡು ಇದ್ದಂತವರನ್ನು ಈರೀತಿ ಮಾಡಬಾರದು ಎಂದು ಅಭಿಪ್ರಾಯಪಟ್ಟರು. ನನಗೂ ಕೂಡ ಈ ಘಟನೆಯಿಂದ ಬೇಜಾರು ಆಗಿದ್ದು, ಈ ಕೇಸನ್ನು ಪರ್ಸನಲ್ ಆಗಿ ನಿಗಾವಹಿಸಿ ಯಾರು ಹತ್ಯೆ ಮಾಡಿದವರನ್ನು ಕೂಡಲೇ ಕಂಡು ಹಿಡಿದು ತಕ್ಕ ಶಿಕ್ಷೆ ಕೊಡಬೇಕೆಂದು ಮನವಿ ಮಾಡುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here