ಕೋವಿಡ್-19 ತಡೆಗಟ್ಟುವಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಿ: ಡಾ||ರಮೇಶ್

0

ಹಾಸನ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರು ಕೋವಿಡ್-19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಡಾ|| ರಮೇಶ್ ಅವರು ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಹಾಗೂ ಹಾಸನದ ಹಸಿರು ಭೂಮಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ದೊಡ್ಡ ಕೊಂಡಗೊಳ ಗ್ರಾಮದ ಸರ್ಕಾರಿ ಪ್ರೌಡ ಶಾಲಾ ಮಕ್ಕಳಿಗೆ ಉಚಿತ ಮೊಬೈಲ್ ವಿತರಣಾ ಕಾರ್ಯಕ್ರಮದಲ್ಲಿಂದು ಭಾಗವಹಿಸಿ ಅವರು ಮಾತನಾಡಿದರು.

ಪರಿಸರಕ್ಕೆ ಪೂರಕವಾದ ಎಲ್ಲಾ ರೀತಿಯ ಕೆಲಸಗಳಿಂದ ಹಾಸನದ ಹಸಿರು ಭೂಮಿ ಪ್ರತಿಷ್ಠಾನ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಖ್ಯಾತ ಶಸ್ತ್ರ ಚಿಕಿತ್ಸಕರು ಆದ ಡಾ|| ರಮೇಶ್ ಅವರು ಹೇಳಿದರು.
ಸಾಧಕರೆಲ್ಲ ಗ್ರಾಮೀಣ ಪ್ರದೇಶದಿಂದಲೇ ಬಂದವರು ಹಾಗಾಗಿ ಕೀಳರಿಮೆ ಬಿಡಬೇಕು ಎಂದರಲ್ಲದೆ, ಇಂತಹ ಕೆಲಸಗಳಿಗೆ ತಾವು ಕೂಡ ಕೈ ಜೋಡಿಸುವೆ ಮತ್ತು ಸಾರ್ವಜನಿಕರು ಕೂಡ ಬಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.
ಡಾ|| ಸಾವಿತ್ರಿ ಅವರು ಮಾತನಾಡಿ ಕೊರೋನ ಬಗ್ಗೆ ಭಯ ಬೇಡ ಜವಾಬ್ದಾರಿ ಇರಲಿ ಎಂದರು.
ಭಾ. ವೈ. ಸಂ. ಕಾರ್ಯದರ್ಶಿ ಡಾ|| ವಾಗೀಶ ಭಟ್ ಅವರು ಶಿಕ್ಷಣ ಮತ್ತು ಪರಿಸರದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಹಸಿರು ಭೂಮಿ ಪ್ರತಿಷ್ಠಾನ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಅವರು ಮಾತನಾಡಿ ದೃಶ್ಯಮಾಧ್ಯಮಗಳು ಬಹುಬೇಗ ಗಮನ ಸೆಳೆಯುವುದರಿಂದ ಸಮಾಜಕ್ಕೆ ಸಕಾರಾತ್ಮಕ ವಿಷಯಗಳನ್ನು ಬಿತ್ತರಿಸಬೇಕು. ಕೊರೋನ ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ನಿವೃತ್ತ ಪ್ರಾಂಶುಪಾಲರಾದ ಅಪ್ಪಾಜಿಗೌಡ ಅವರು ಮಾತನಾಡಿ ಮೊಬೈಲ್‍ಗಳು ಸದ್ಬಳಕೆ ಆಗಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕೊರೋನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು. ಅದರ ನೇತೃತ್ವವನ್ನು ಡಾ|| ತೇಜಸ್ವಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ|| ಪೂರ್ಣಿಮಾ ಮಹೇಶ್, ಹಸಿರು ಭೂಮಿ ಪ್ರತಿಷ್ಠಾನದ ವೆಂಕಟೇ ಗೌಡ. ಡಾ|| ಶ್ರೀವಿದ್ಯಾ, ಡಾ|| ವಿದ್ಯಾ ಲೋಕೇಶ್, ಡಾ|| ಸುಜಾತ, ವಾಸು, ಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here