ಗೊಂದಲದ ನಡುವೆಯೂ ನಡೆದ ; ಸಿಟಿ ಆಪರೇಟಿವ್ ಬ್ಯಾಂಕ್ ಚುನಾವಣೆ

0

ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆ ಆವರಣದಲ್ಲಿರುವ ದಿ ಸಿಟಿ ಆಪರೇಟಿವ್ ಬ್ಯಾಂಕ್ 2023- 24ನೇ ಅವಧಿಯ ಆಡಳಿತ ಮಂಡಳಿ ಚುನಾವಣೆಯು ನಗರದ ಎವಿಕೆ ಕಾಲೇಜು ಆವರಣದಲ್ಲಿ ಭಾನುವಾರ ನಡೆಸಲಾಗಿದ್ದು, ಈ ವೇಳೆ ಪರ ವಿರೋಧದ ಮಾತುಗಳು ಕೇಳಿ ಬಂದಿತು. ದಿ ಸಿಟಿ ಆಪರೇಟಿವ್ ಬ್ಯಾಂಕ್ ನ ಈ ವರ್ಷದ ಚುನಾವಣೆಯ ಸಮಯದಲ್ಲಿ ಗೊಂದಲ ಮೂಡಿ ಪರ ವಿರೋಧದ ಹೇಳಿಕೆಗಳು ಕೇಳಿ ಬಂದಿತು. ಅಕ್ರಮವಾಗಿ ಹೊಸದಾಗಿ ಚುನಾವಣೆ ಪ್ರಕ್ರಿಯೆ ಕಾನೂನು ಬಾಹಿರ.

500 ಮಂದಿ ಮತದಾರರನ್ನು ಸೇರಿಸಲಾಗುತ್ತಿದೆ. ಚುನಾವಣೆ ಇರುವ ಎರಡು ದಿನದಲ್ಲಿಯೇ ಈ ಪ್ರಕ್ರಿಯೆ ಮಾಡಲಾಗಿದ್ದು ಇದರ ವಿರುದ್ಧ ಚುನಾವಣಾ ಅಧಿಕಾರಿ ಲೀಲಾ ಅವರಿಗೆ ದೂರನ್ನು ಸಲ್ಲಿಸಲಾಗಿದೆ ಎಂದರು. 9 ಸಾವಿರಕ್ಕೂ ಹೆಚ್ಚು ಮಂದಿಗೆ ಮತದಾನಕ್ಕೆ ಅವಕಾಶವಿದ್ದರೂ ಸಹ ಕೇವಲ 870 ಮಂದಿಯನ್ನು ಸೇರಿಸಲಾಗಿದೆ. ಇದೀಗ ಹೊಸದಾಗಿ ತಮಗೆ ಬೇಕಾದವರನ್ನು ಹಾಗೂ ಹಾಸನ ನಗರದಲ್ಲಿ ವಾಸ ಇಲ್ಲದ 500 ಮಂದಿಯನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

ಈ ಮೂಲಕ ಹಾಲಿ ಆಡಳಿತ ಮಂಡಳಿಯ ಸದಸ್ಯರು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅಕ್ರಮವೆಸಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಈ ಬ್ಯಾಂಕಿನಲ್ಲಿ ಸದಸ್ಯರಾಗಿರುವ ಅನೇಕರ ಹೆಸರನ್ನು ತೆಗೆದು ಹಾಕಲಾಗಿ ಬೇಕಾದವರನ್ನು ಉಳಿಸಿಕೊಳ್ಳಲಾಗಿ ಮೋಸ ಮಾಡಲಾಗಿದೆ ಎಂದು ಈಗಾಗಲೇ ಒಂದು ತಂಡವು ಹೇಳಿಕೆ ಕೂಡ ನೀಡಲಾಗಿತ್ತು. ಇಷ್ಟೆಲ್ಲಾ ವಿರೋಧದ ನಡುವೆಯು ಚುನಾವಣೆ ದಿನಾಂಕ ನಿಗಧಿಯಾಗಿ ಭಾನುವಾರದಂದು ಎವಿಕೆ ಕಾಲೇಜು ಆವರಣದಲ್ಲಿ ನಡೆಸಲಾಯಿತು. ಕೊನೆಯ ಕಸರತ್ತತಿನ ಪ್ರಚಾರದ ವೇಳೆ ಕೆಲ ಸದಸ್ಯರಿಂದ ವಾಗ್ವಾದ ನಡೆದು ಕೂಗಾಟ ಕೇಳಿ ಬಂದಿದೆ. ಬೆಳಿಗ್ಗೆ 9ಕ್ಕೆ ಪ್ರಾರಂಭವಾದ ಚುನಾವಣೆ ಸಂಜೆ 4 ಗಂಟೆಗೆ ಅಂತ್ಯಗೊಳಿಸಲಾಯಿತು.

LEAVE A REPLY

Please enter your comment!
Please enter your name here