ಗ್ರಾ.ಮ ಪಂಚಾಯಿತಿ ಚುನಾವಣೆ ಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

0

ಹಾಸನ : ಹಾಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಯಾವುದೇ ಲೋಪವಿಲ್ಲದಂತೆ ಪಾರದರ್ಶಕವಾಗಿ ನಡೆಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಎಲ್ಲಾ ತಾಲ್ಲೂಕು ತಹಶೀಲ್ದಾರರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಅತ್ಯಂತ ಜಾಗೃತಿಯಿಂದ ಚುನಾವಣೆ ನಡೆಸುವಂತೆ ಸೂಚಿಸಿದರು.

ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳ ಕೈಪಿಡಿಯಲ್ಲಿ ವಿವರಿಸಿರುವ ಸೂಚನೆಗಳ ಅನುಸರಿಸಿ ಅಭ್ಯರ್ಥಿಗಳ ಅರ್ಹತೆ ಮತ್ತು ಅನರ್ಹತೆ ಕುರಿತು ಕ್ರಮವಹಿಸುವಂತೆ ತಿಳಿಸಿದರು.

ನಾಮಪತ್ರಗಳ ಸ್ವೀಕೃತಿ, ಪರಿಶೀಲನೆ ಹಾಗೂ ಉಮೇದುವಾರಿಕೆ ಹಿಂಪಡೆದ ನಂತರ ಪ್ರಪತ್ರ-10 ರಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿವರಗಳನ್ನು ಪ್ರಕಟಿಸಬೇಕು ಹಾಗೂ ನಾಮಪತ್ರಗಳ ಸ್ವೀಕೃತಿ, ಪರಿಶೀಲನೆ,ಹಿಂಪಡೆಯುವುದು ಹಾಗೂ ಸ್ಪರ್ಧಿಸುವ ಅಭ್ಯರ್ಥಿಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ಪ್ರತಿದಿನ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಚುನಾವಣೆ ಘೋಷಣೆಯನ್ನು ಪ್ರಪತ್ರ-17 ರಲ್ಲಿ ಘೋಷಿಸಿ ವರದಿಯನ್ನು ತಮ್ಮ ಕಚೇರಿ ಹಾಗೂ ಚುನಾವಣೆ ಶಾಖೆಗೆ ತಲುಪಿಸಬೇಕು ಎಂದರು.

ಒಂದಕ್ಕಿಂತ ಹೆಚ್ಚು ಸದಸ್ಯ ಸ್ಥಾನವಿರುವ ಕ್ಷೇತ್ರದಲ್ಲಿ ಸಾಮಾನ್ಯ ಸ್ಥಾನಕ್ಕೆ ಒಬ್ಬ ಅಭ್ಯರ್ಥಿ ಇದ್ದರೂ ಸಹ ಅಂತಹ ಸ್ಥಾನವನ್ನು ಅವಿರೋಧ ಆಯ್ಕೆ ಎಂದು ಘೋಷಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಅಂಚೆ ಮತಪತ್ರಗಳನ್ನು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಸಿದ್ಧವಾದ 24ಗಂಟೆಗಳ ಚುನಾವಣಾಧಿಕಾರಿಗಳ ಕೈಪಿಡಿ ಅಧ್ಯಾಯ-8 ರಲ್ಲಿ ತಿಳಿಸಿರುವಂತೆ ರವಾನೆ ಮಾಡಲು ಕ್ರಮವಹಿಸಿ ಎಂದು ಅವರು ನಿರ್ದೇಶನ ನೀಡಿದರು.

ಚುನಾವಣೆ ನಡೆಯುವ ಪಂಚಾಯಿತಿಗಳಲ್ಲಿ ಮತಪೆಟ್ಟಿಗೆ ಮುಖಾಂತರ ನಡೆಸಲಾಗುತ್ತಿರುವ ಕಡೆಯಲ್ಲಿ ಚುನಾವಣಾ ಅಧಿಕಾರಿಗಳ ಕೈಪಿಡಿ ಅಧ್ಯಾಯ -9 ರಲ್ಲಿ ತಿಳಿಸಿರುವಂತೆ ಮತಪತ್ರವನ್ನು ಮುದ್ರಿಸಿಕೊಳ್ಳುವುದು ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡ ನಂತರ ಪ್ರಪತ್ರ-10 ಹಾಗೂ ಮುದ್ರಣ ಮಾಡುವ ಮುನ್ನ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳ ಪರಿಶೀಲನೆಗೆ ಹಾಜರುಪಡಿಸಿ ಮತ್ತು ಈ ಕಚೇರಿಯಿಂದ ತಿಳಿಸಲಾಗುವ ಗ್ರಾಮ ಪಂಚಾಯಿತಿಗಳ ಪ್ರÀಪತ್ರ- 10 ನ್ನು ಪರಿಶೀಲನೆಗೆ ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತಪತ್ರದಲ್ಲಿ ನೋಟ ಮುದ್ರಿಸಲು ಅವಕಾಶವಿರುವುದಿಲ್ಲ. ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ ಹಾಗೂ 3 ಮತಗಟ್ಟೆಗೆ ಅಧಿಕಾರಿಗಳನ್ನು ನೇಮಕ ಮಾಡಬೇಕು ಮತಗಟ್ಟೆ ಅಧ್ಯಕ್ಷಾಧಿಕಾರಿಗೆ ಮತ್ತು ಮೊದಲನೇ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಈ ಬಗ್ಗೆ ದಿನಾಂಕ ನಿಗಧಿಪಡಿಸಿ ವಿವರಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಸಂತೆ ಜಾತ್ರೆ ನಿಷೇಧದ ಕುರಿತು ತಮ್ಮ ಕಚೇರಿಗೆ ಕೂಡಲೇ ವಿವರಗಳನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here