ಹಾಸನ: ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ವಿಯಾಗಿ ಅಂಗಳಕ್ಕೆ ಇಳಿದ ಹಿನ್ನಲೆಯಲ್ಲಿ ರೋಟರಿ ಇಸ್ರೋ ಮುಖ್ಯಸ್ಥರಿಗೆ ಶುಭಾಶಯಗಳನ್ನು ಕೋರಲು ಸನ್ ರೈಸ್ ಶಾಲೆ ಮತ್ತು ಮೇಪಲ್ ಬೇರ್ ಕೆನಡಿಯನ್ ಶಾಲೆ ಇವರ ವತಿಯಿಂದ ಶಾಲಾ ಮಕ್ಕಳು ಮತ್ತು ಸಿಬ್ಬಂದಿಗಳು ಸೇರಿ ಜಿಲ್ಲಾಡಳಿತದ ಆವರಣಕ್ಕೆ ಉಡಾವಣೆಯಾದ ಮಾಡಲ್, ಧ್ವಜಾದೊಂದಿಗೆ ಮತ್ತು ಭಾರತ ನಕ್ಷೆಯ ಜೊತೆಯಲ್ಲಿ ಬಂದು ಶುಭಾಶಯದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಈ ಪತ್ರವನ್ನು ವಿಕ್ರಂ ಲ್ಯಾಂಡರ್ ಯಶಸ್ವಿಗೆ ಶ್ರಮಿಸಿದವರಿಗೆ ತಲುಪಿಸಲು ಕೋರಿ ನಂತರ ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಇದೆ ವೇಳೆ ಶಾಲಾ ಟ್ರಸ್ಟಿ ಪುಷ್ಪಲತಾಗೌಡೇಗೌಡ, ಮುಖ್ಯ ಉಪಾಧ್ಯಯರು ಹಾಗೂ ಶಾಲಾ ಆಡಳಿತವರ್ಗ ಉಪಸ್ಥಿತರಿದ್ದರು.