ಚುನಾವಣೆ ನಂತರ ಹಾಸನ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪರಾಜಿತ ಅಭ್ಯರ್ಥಿ ಅಗಿಲೆ ಯೊಗೇಶ್ ಹಾಸನ ನಗರಸಭೆಯಿಂದ ನಗರಪಾಲಿಕೆ ಅಧಿಕೃತ ಆಗದೆ ಇರುವ ಹಳ್ಳಿಗಳ ಸಮಸ್ಯೆಗಳ ಹೊತ್ತು ಬಂದದು ಹೀಗೆ …

0

ಹಾಸನ : ನಗರಪಾಲಿಕೆ ಮಾಡುವುದಾಗಿ ನಗರ ಸುತ್ತಮುತ್ತ ಇರುವ ೨೫ ಹಳ್ಳಿಗಳನ್ನು ನಗರಸಭೆಗೆ ಸೇರಿಸಿರುವುದು ಪೂರ್ಣಗೊಂಡು ಕಾರ್ಯರೂಪಕ್ಕೆ ಬರುವುದು ವಿಳಂಬವಾದ ಹಿನ್ನಲೆಯಲ್ಲಿ ಪ್ರಸ್ತುತ ಬಡ ವರ್ಗದವರು ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಯಾರು ಕೂಡ ತಲೆ ಕೆಡಿಸಿಕೊಳ್ಳದೇ ಸುಮ್ಮನಾಗಿದ್ದು, ಶೀಘ್ರ ಸರಿಪಡಿಸದಿದ್ದರೇ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹಾಸನ ನಗರಸಭೆಗೆ ೨೫ ಹಳ್ಳಿಗಳ ಸೇರ್ಪಡೆಯಿಂದ ಯಾವ ಖಾತೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಭೂಮಿ ಮಾರಾಟ ಮತ್ತು ಕೊಳ್ಳಲು ಆಗದೇ ಅತಂತ್ರ ಸ್ಥಿತಿಯಲ್ಲಿ ಸಾರ್ವಜನಿಕರು ಸಂಕಷ್ಟದಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ನಗರಸಭೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಕಳೆದ ಬಾರಿಯ ಬಿಜೆಪಿ ಸರ್ಕಾರ ಏಕಾಏಕಿ ೨೫ ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿತು ಆದರೆ ಮೂಲಸೌಕರ್ಯ ಸೇರಿದಂತೆ ಇತರೆ ಅಭಿವೃದ್ಧಿಗೆ ಇದು ಮಾರಕವಾಗಿದ್ದು ಅತ್ತ ಪಂಚಾಯಿತಿಗೂ ಸೇರದೆ ಇತ್ತ ನಗರ ಸಭೆಯಿಂದ ಅಭಿವೃದ್ಧಿ ಕಾಣದೆ ಜನರು ಪರಿತಪಿಸುವಂತಾಗಿದೆ ಎಂದು ದೂರಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ೨೫ ಗ್ರಾಮದ ನಿವಾಸಿಗಳೆಲ್ಲ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಕೂಡ ರಾಜ್ಯ ಸರಕಾರದ ಗಮನಸೆಳೆಯುವಲ್ಲಿ ವಿಫಲರಾಗಿದ್ದು, ಶಾಸಕ ರೇವಣ್ಣ ಕೂಡ ಮೌನದಲ್ಲಿದ್ದಾರೆ. ಇವರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಎಎಪಿ ಪಕ್ಷದ ಮಂಜುನಾಥ್, ನಸೀರ್, ರೆಹಮನ್ ಇತರರು ಉಪಸ್ಥಿತರಿದ್ರು.

LEAVE A REPLY

Please enter your comment!
Please enter your name here