ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರ ಕಿತ್ತಾಟ

0

ವೇದಿಕೆ ಮೇಲೆ ಪರಸ್ಪರ ಕಿತ್ತಾಡಿಕೊಂಡ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಎಚ್.ಕೆ.ಸುರೇಶ್. ಮದ್ಯದಂಗಡಿ ವಿಚಾರವಾಗಿ ಕಿತ್ತಾಡಿಕೊಂಡ ಶಾಸಕರು. ಶಾಸಕರ ಕಿತ್ತಾಟ ಕಂಡು ಕಕ್ಕಾಬಿಕ್ಕಿಯಾದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ. ಕರಗುಂದ ಗ್ರಾಮದಲ್ಲಿ ಮದ್ಯದಂಗಡಿ ತೆರೆದು ಹೆಣ್ಣುಮಕ್ಕಳ ತಾಳಿ ಕಿತ್ತಕೊಳ್ಳುತ್ತಿದ್ದಾರೆ ಎಂದು ಭಾಷಣ ಮಾಡಿದ ಶಾಸಕ ಎಚ್.ಕೆ.ಸುರೇಶ್. ಇದಕ್ಕೆ ಉತ್ತರ ನೀಡಲು ಮುಂದಾದ ಶಾಸಕ ಕೆ.ಎಂ.ಶಿವಲಿಂಗೇಗೌಡ. ಜನ ಸೇರಿಸುವವನು ನಾನು, ನೀನು‌ ಹದಿನೈದು ಜನ ಕರೆದುಕೊಂಡು ಬಂದು ಸಭೆ ಹಾಳು ಮಾಡಲು ಬಂದಿದ್ದೀಯಾ ಎಂದು ಶಾಸಕ ಶಿವಲಿಂಗೇಗೌಡರ ವಿರುದ್ಧ ಕಿಡಿಕಾರಿದ ಶಿವಲಿಂಗೇಗೌಡ. ಈ ವೇಳೆ ಶಿವಲಿಂಗೇಗೌಡರ ಮೇಲೆ ಸಿಟ್ಟಾದ ಶಾಸಕ ಎಚ್.ಕೆ.ಸುರೇಶ್.

ನನಗೂ ಜಾವಗಲ್ ಗ್ರಾನ ಸೇರುತ್ತೆ, ನನಗೂ ಹಕ್ಕಿದೆ ಎಂದು ಆಕ್ರೋಶ ಹೊರಹಾಕಿದ ಶಾಸಕ ಸುರೇಶ್. ಮದ್ಯದಂಗಡಿ ತೆರೆದಿರುವವನು. ಕೆ.ಎಂ.ಶಿವಲಿಂಗೇಗೌಡರ ಸ್ನೇಹಿತ ಎಂದು ಮೈಕ್‌ನಲ್ಲಿ ಹೇಳಿದ ಸುರೇಶ್. ಇದರಿಂದ ಕೆರಳಿದ ಶಿವಲಿಂಗೇಗೌಡ, ಓವರ್ ಆಗಿ ಆಡಬೇಡ. ನಮ್ಮ ಸರ್ಕಾರ ಬಂದು ಐದು ತಿಂಗಳು ಆಯ್ತು ಒಂದು ಮದ್ಯದಂಗಡಿ. ಒಂದು ಮದ್ಯದಂಗಡಿಗೂ‌ ಅನುಮತಿ ನೀಡಿಲ್ಲ. ಕಳೆದ ಸರ್ಕಾದಲ್ಲಿ ಮದ್ಯದಂಗಡಿಗಳನ್ನು ತೆರೆದಿದ್ದಾರೆ. ಈ ವೇಳೆ ಶಿವಲಿಂಗೇಗೌಡರ ಪರ ಜೈಕಾರ ಕೂಗಿದ ಕಾರ್ಯಕರ್ತರು. ಮತ್ತೊಂದೆಡೆ ಸುರೇಶ್ ಪರ ಜೈಕಾರ ಕೂಗಿದ ಬಿಜೆಪಿ ಕಾರ್ಯಕರ್ತರು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಶಾಸಕರನ್ನು ಸಮಾಧಾನಪಡಿಸಿದ ಅಧಿಕಾರಿಗಳು.

LEAVE A REPLY

Please enter your comment!
Please enter your name here