ನಗರದ 14 ನೇ ವಾರ್ಡಿನ ಬನ್ನಿಮಂಟಪ ಅವರಣ ಪಾರ್ಕ್ ಹಾಗು ದೇವಸ್ಥಾನ ಸ್ವಚ್ಛತೆ

0

ಹಾಸನ : (ಹಾಸನ್_ನ್ಯೂಸ್) ; ಸನ್ಮಾನ್ಯ ಪ್ರಧಾನಮಂತ್ರಿಗಳಾದ
ಶ್ರೀ ನರೇಂದ್ರ ಮೋದಿ ಯವರ 70 ನೇ ಜನ್ಮದಿನದ ಅಂಗವಾಗಿ ಮಾನ್ಯ ಶಾಸಕರಾದ ಪ್ರೀತಂ ಗೌಡ ಅವರ ನೇತೃತ್ವದಲ್ಲಿ ಹಾಸನ ಬಿಜೆಪಿ ಮಂಡಲ ವತಿಯಿಂದ ಇಂದು ನಗರದ 14 ನೇ ವಾರ್ಡಿನ ಬನ್ನಿಮಂಟಪ ಅವರಣ ಪಾರ್ಕ್ ಹಾಗು ದೇವಸ್ಥಾನ ಸ್ವಚ್ಛತೆ ಮಾಡದರು , ಅತ್ಯಂತ ಕಲುಷಿತವಾಗಿದ್ದ ಅವರಣವನ್ನು 100 ಜನ ಕಾರ್ಯಕರ್ತರು ಎಲ್ಲೆಂದರಲ್ಲಿ ಎಸೆದ ಬಾಟಲ್ ಗಳು ಪ್ಲಾಸ್ಟಿಕ್ ಕವರ್ ದೊಡ್ಡದಾಗಿ ಬೆಳೆದಿದ್ದ ಗಿಡಗಳು ಎಲ್ಲವನ್ನು ತೆಗೆದು ರಾಶಿಮಾಡಿ ಸ್ವಚ್ಛ ಮಾಡಿದರು .ಈ ಸಂಧರ್ಭದಲ್ಲಿ ದೇವಸ್ಥಾನವನ್ನು ತೊಳೆದು ಸ್ವಚ್ಛ ಮಾಡಿ ಬಿಳಿ ಬಣ್ಣ ಬಳೆದರು ಮತ್ತು ಈ ಸಂಧರ್ಭದಲ್ಲಿ ಹಾಜರಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಲಾಟ್ ಮೂರ್ತಿರವರು ಇತಿಹಾಸವುಳ್ಳ ಬನ್ನಿ ಮಂಟಪ್ಪ ಗೇಟ್ ಇಲ್ಲದಿರುವ ಕಾರಣ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದ್ದನ್ನು ಗಮನಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಗೇಟ ಮಾಡಿಸಿ
ಕೊಡುವುದಾಗಿ ತಿಳಿಸಿದ್ದಾರೆ.ದೇವಸ್ಥಾನಕ್ಕೆ ಬಣ್ಣ ಬಳಿಯಲು ಸಹಕರಿಸಿದ ಪೈಂಟರ್ ದರ್ಮಣ್ಣ ಆಟೋ ಕುಮಾರಣ್ಣ ಅವರಿಗೆ ಹಾಸನ ನಗರ ಬಿಜೆಪಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು . ಎಂದು ತಿಳಿಸಿದ್ದಾರೆ ,
ಈ ಸಂಧರ್ಭದಲ್ಲಿ ಬನ್ನಿ ಮಂಟಪದ ಆವರಣದಲ್ಲಿ ನಗರಸಭಾ ಸದಸ್ಯರಾದ ಮೋಹನ್ ,ಚಂದ್ರು,ರಕ್ಷಿತ,
ದಯಾನಂದ,ಸಂತೋಷ,
ವಿಕ್ರಮ ರವರು ಗಳು ಸಸಿ ನೆಟ್ಟು ಪರಿಸರ ಕಾಳಜಿ ಮೆರೆದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಧಾದಿಕಾರಿಗಳು ,ನಗರ ಪಧಾದಿಕಾರಿಗಳು,ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.ವಿಶೇಷವಾಗಿ ಸ್ವಚ್ಛತೆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಬನ್ನಿ ಮಂಟಪವನ್ನು ಅಚ್ಚುಕಟ್ಟಾಗಿ ಮಾಡಿರುವ 14 ನೇ ವಾರ್ಡಿನ ನಗರಸಭಾ ಸದಸ್ಯರಾದ ವಿಕ್ರಂ ಹಾಗು ವಾರ್ಡಿನ ಪ್ರಮುಖರಾದ ಗೋಪಾಲಣ್ಣ ಬಸಂತ ಗಗನ ಗಾಂದಿ ಕೃಷ್ಣಕುಮಾರ ಗುರು ಕಾಮತ್ ರವರಿಗೆ ಹಾಗು ವಾರ್ಡಿನ ಜನತೆಗೆ ನಗರ ಬಿಜೆಪಿ ವತಿಯಿಂದ ಹೃತ್ಪೂವರ್ಕ ಧನ್ಯವಾದಗಳು .
ವೇಣುಗೋಪಾಲ್
ಅಧ್ಯಕ್ಷ ರು ಅರ್ಪುಸಿದರು @narendramodi @preethamjgowdaofficial #hassan #HassanNewsUpdstes

LEAVE A REPLY

Please enter your comment!
Please enter your name here