ನಾಳೆಯಿಂದ ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆ ಎಂದ ಮಾಜಿ ಸಚಿವ ರೇವಣ್ಣ: ಯಾಕೆ ಗೊತ್ತೆ..?

0

ಹಾಸನ: ಹಾಸನದಲ್ಲಿ ಜನ ಕೊರೊನಾ ಲಸಿಕೆ ಸಿಗದೆ ಅಳುತ್ತಿದ್ದಾರೆ. ಹೀಗಾಗಿ ಕೊರೋನಾ ಲಸಿಕೆ ಪೂರೈಸಬೇಕು. ಇಲ್ಲದಿದ್ದರೇ ನಾಳೆಯಿಂದ ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆ ಎಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.
ಹಾಸನ ಜಿಲ್ಲೆಗೆ ರೆಮ್ ಡಿಸಿವಿರ್ ಪೂರೈಸದಿದ್ದಕ್ಕೆ ಸರ್ಕಾರದ ವಿರುದ್ಧ ಗರಂ ಆದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಹಾಸನದಲ್ಲಿ ಜನತೆ ಕೊರೋನಾ ಲಸಿಕೆಗಾಗಿ ಗೋಳಾಡುತ್ತಿದ್ದಾರೆ. ಆದರೇ ಲಸಿಕೆಯನ್ನ ಪೂರೈಸುತ್ತಿಲ್ಲ. ಹಾಗಾದ್ರೆ ಹಾಸನವನ್ನ ರಾಜ್ಯದಿಂದ ತೆಗೆದುಬಿಡಿ. ಅಗತ್ಯವಿದ್ರೆ ಸಿಎಂ ಬಿಎಸ್ ವೈ ಮನೆ ಮುಂದೆ ಮಲಗುತ್ತೇನೆ. ಸಿಎಂ ಮನೆ ಮುಂದೆ ನಾಳೆ ಧರಣಿ ಕೂರುತ್ತೇನೆ ಬೇಕಿದ್ದರೇ ಬಂಧಿಸಲಿ ಎಂದು ಕಿಡಿಕಾರಿದರು.
ಮೊನ್ನೆ ಗಲಾಟೆ ಮಾಡಿದ್ದಕ್ಕೆ 450 ಇಂಜಕ್ಷನ್ ಕೊಟ್ಟರು. ಈ ನಡುವೆ ಬಿಜೆಪಿ ಸಂಸದರು ಬೇಕಾದಷ್ಟು ಇಂಜಕ್ಷನ್ ಕೊಂಡೊಯ್ಯುತ್ತಿದ್ದಾರೆ. ಕೂಡಲೇ ಹಾಸನಕ್ಕೆ ಬೇಕಾದಷ್ಟು ರೆಮ್ ಡಿಸಿವಿರ್ ಒದಗಿಸಲಿ. ಇಲ್ಲಿದ್ದರೇ ಧರಣಿ ಕೂರುತ್ತೇನೆ ಎಂದು ಹೆಚ್.ಡಿ ರೇವಣ್ಣ ಒತ್ತಾಯಿಸಿದರು.

LEAVE A REPLY

Please enter your comment!
Please enter your name here