ನೀರು ಬಿಟ್ಟಿದ್ದು ನೀವೇ , ಈಗ ಪ್ರತಿಭಟನೆ ಮಾಡ್ತಿರೋದು ನೀವೇ , ರಾಜಕೀಯ ಲಾಭ , ಪಕ್ಷದ ಉಳಿವಿಗಾಗಿ ರೇವಣ್ಣ ಅವರು ಹೀಗೆ ಮಾಡುತ್ತಿದ್ದಾರೆ ” – ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆರೋಪಿಸಿದರು

0

ಹಾಸನ : ಉಸ್ತುವಾರಿ ಸಚಿವರ, ಸ್ಥಳೀಯ ಶಾಸಕರ ಗಮನಕ್ಕೂ ತರದೆ ಮಾಜಿ ಸಚಿವ ಹೆಚ್.ಡಿ. ರೇವಣ್ಣರವರು ಬಟನ್ ಹೊತ್ತಿ ಹೇಮಾವತಿ ಜಲಾಶಯದಿಂದ ನದಿಗೆ ಮತ್ತು ನಾಲೆಗೆ ಏಕಾಏಕಿ ನೀರು ಹರಿಸಲಾಗಿದೆ. ಯಾವ ಪುರುಶ್ವತ್ತಕ್ಕಾಗಿ ಹೇಮಾವತಿ ಅಣೆಕಟ್ಟು ಮುಂದೆ ಜೆಡಿಎಸ್ ಪ್ರತಿಭಟನೆ ಮಾಡುತ್ತಿರುವುದು ಖಂಡನಿಯ. ಈ ಬಗ್ಗೆ ಪ್ರಕರಣ ದಾಖಲಿಸುವುದಾಗಿ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜೆ.ಡಿ.ಎಸ್. ಮುಖಂಡರುಗಳು ಸೋಮವಾರದಂದು ಕಾವೇರಿ ಜಲವಿವಾದದ ವಿಚಾರವಾಗಿ ಹೇಮಾವತಿ ಜಲಾಶಯದ ಮುಂಭಾಗ ಪ್ರತಿಭಟನೆ ಮಾಡಲಾಗುತ್ತಿದೆ.

ಜೆ.ಡಿ.ಎಸ್. ಮುಖಂಡರುಗಳಿಗೆ ಒಂದು ಪ್ರಶ್ನೆ ಹಾಸನದಲ್ಲಿ ಉಸ್ತುವಾರಿ ಸಚಿವರ ಗಮನಕ್ಕೂ ಕೊಡದೆ ಸ್ಥಳೀಯ ಶಾಸಕರ ಗಮನಕ್ಕೂ ತರದೇ ಏಕಾ-ಏಕಿ ಹೇಮಾವತಿ ಜಲಾಶಯದಿಂದ ನದಿಗೆ ನಾಲೆಗೆ ನೀರು ಹರಿಸಲು ಗುಂಡಿ ಹೊತ್ತಿ ನೀರು ಬಿಟ್ಟು ಈಗ ಜನರ ಕಣ್ಣು ಒರೆಸಲು ಪ್ರತಿಭಟನೆ ಮಾಡುತ್ತಿರುವುದು ಯಾವ ಮತ್ತು ಪುರುಷಾರ್ಥಕ್ಕಾಗಿ ? ಎಂದು ಪ್ರಶ್ನೆ ಮಾಡಿದರು. ನಿಮ್ಮ ತೋಟಕ್ಕೆ ನೀರು ಬೇಕೆಂದು ಸರ್ಕಾರದ ಗಮನಕ್ಕೆ ತರದಂತೆ ನೀರು ಬಿಟ್ಟು ಈಗ ಹಾಸನ ಜನತೆಗೆ ಕುಡಿಯಲು ಸಹ ನೀರಿಲ್ಲದಂತೆ ಮಾಡಿದ್ದೀರಿ. ನಿಮ್ಮ ಉದ್ದಟತನದ ದೋರಣೆಯಿಂದ ನಿರಂತರವಾಗಿ ಜಿಲ್ಲೆಯ ಜನತೆ ಅಪರ ಕಷ್ಟ ನಷ್ಟಗಳನ್ನು ನೋವುಗಳನ್ನು ಅನುಭವಿಸುತ್ತಿದ್ದಾರೆ. ಇನ್ನು ಎಷ್ಟು ದಿನ ಜಿಲ್ಲೆಯಲ್ಲಿ ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತೀರಾ ? ಆ ದಿನಗಳು ಮುಗಿದಿರುತ್ತವೆ ಪಕ್ಷ ಅವನತಿ ಹೊಂದುತ್ತಿದೆ ಇನ್ನಾದರೂ ಜಿಲ್ಲೆಯ ಜನತೆಯ ಕ್ಷೇಮಾಭಿವೃದ್ಧಿಗಾಗಿ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟ ಮಾಡಲು ಕೇಳಿಕೊಳ್ಳುತ್ತೇವೆ.

ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಪಕ್ಷದಲ್ಲಿ ನಿಮ್ಮ ಜೊತೆ ನಾವು ಕೂಡ ಕೈ ಜೋಡಿಸುತ್ತೇವೆ ಎಂದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಸಂಬಂಧಪಟ್ಟ ಇಂಜಿನಿಯರ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದರು. ಈಗಾಗಲೇ ಶಕ್ತಿ, ಅನ್ನಭಾಗ್ಯ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ’ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಈ ಯೋಜನೆಗಳನ್ನು ಜನತೆ ಹೆಚ್ಚಾಗಿ ಸಂತೋಷದಿಂದ ಸ್ವೀಕರಿಸಿ ಈ ಎಲ್ಲಾ ಯೋಜನೆಗಳನ್ನು ಒಪ್ಪಿಕೊಂಡಿರುವ ಜನತೆ ಉತ್ತಮ ರೀತಿಯ ಸ್ಪಂದನೆ ಕೊಡುವ ಮೂಲಕ ಪಕ್ಷದ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಸರ್ಕಾರದ ಕೂಡ ಈ ಯಶಸ್ಸನ್ನು ಸಹಿಸದೆ ವಿರೋಧ ಪಕ್ಷಗಳು ಅನಗತ್ಯವಾಗಿ ಒಂದಲ್ಲಾ ಒಂದು ಕಾರಣದಿಂದ ವೃಥಾ ಆರೋಪಗಳನ್ನು ಮಾಡುತ್ತಿದ್ದಾರೆ. ಹವಮಾನದ ವೈಫರಿತ್ಯದಿಂದಾಗಿ ವಾತಾವರಣ ಏರು ಪೇರಾಗಿರುತ್ತದೆ. ಮಳೆಗಾಲ ಕ್ಷೀಣಿಸಿದೆ, ಬರಗಾಲ ತಲೆದೋರುವ ಲಕ್ಷಣಗಳು ಜಿಲ್ಲೆಯಲ್ಲಿ ಅವಕವಾಗಿವೆ.

ಇಂತಹ ಸಂದರ್ಭದಲ್ಲಿ ಬಿ.ಜೆ.ಪಿ ಮತ್ತು ಜೆಡಿಎಸ್ ಮುಖಂಡರುಗಳು ಕಾವೇರಿ ನೀರಿನ ವಿಚಾರವಾಗಿ ಪಕ್ಷದ ಜೊತೆ ಕೈ ಜೋಡಿಸುವ ಮೂಲಕ ರಾಜ್ಯದ ಒಳಿತಿಗೆ ಕಾರಣಿ ಭೂತರಾಗಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ ೫ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಉಳಿದ ಮೂರು ತಾಲ್ಲೂಕು ಗಳಲ್ಲಿಯೂ ಬರ ಆವರಿಸಿದೆ. ಇವುಗಳನ್ನು ಸಹ ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲು ಈಗಾಗಲೇ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಜೆ.ಡಿ.ಎಸ್‌ನ ಹಲವಾರು ಮುಖಂಡರುಗಳು ಪ್ರತಿನಿತ್ಯ ಒಂದಲ್ಲಾ ಒಂದು ಹೇಳಿಕೆಗಳನ್ನು ಕೊಡುವ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಪರ್ಯಾಸವಾಗಿದೆ.

ಬೇಲೂರು ಶಾಸಕರು ಉಸ್ತುವಾರಿ ಸಚಿವರನ್ನು ಬದಲಾಯಿಸಿ ಜಿಲ್ಲೆಯ ಶಾಸಕರನ್ನೆ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಕೇಳಿಕೊಂಡಿರುವುದು, ಹೊಂದಾಣಿಕೆ ರಾಜಕೀಯಕ್ಕಾಗಿ ಏನಃ ಅನ್ಯ ಉದ್ದೇಶದಿಂದಲ್ಲಾ ಇದು ಅವರ ಕನಸಾಗಿರುತ್ತದೆ. ಆದರೆ ಶಿವಲಿಂಗೇಗೌಡರು ಕೂಡ ಜೆ.ಡಿ.ಎಸ್. ಪಕ್ಷದ ತಾರತಮ್ಯವನ್ನು ಖಂಡಿಸಿ ಹೊರ ಬಂದಿರುತ್ತಾರೆ. ಅವರು ಕೂಡ ಹೊಂದಾಣಿಕೆ ರಾಜಕೀಯ ಮಾಡಲು ಸಾಧ್ಯವಿರುವುದಿಲ್ಲ, ಹಾಸನದ ಶಾಸಕರು ಅಂತರರ್ಜಲ ಕುಸಿಯುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ಮಾನ್ಯ ಶಾಸಕರಲ್ಲಿ ಒಂದು ಮನವಿ ಚನ್ನಪಟ್ಟಣ ಕೆರೆಯನ್ನು ಹಾಳು ಮಾಡಿ ಬೋರ್‌ವೆಲ್‌ಗಳಲ್ಲಿ ಅಂತರರ್ಜಲ ಕಡಿಮೆಯಾಗುವಂತೆ ಮಾಡಿರುವ ಹಾಗೂ ಅವೈಜ್ಞಾನಿಕವಾಗಿ ಹಲವಾರು ಕಾಮಗಾರಿಗಳನ್ನು ನಗರದ ಮಧ್ಯ ಭಾಗದಲ್ಲಿ ಕೈಗೊಂಡು ನಗರದ ಅಭಿವೃದ್ಧಿಗೆ ತೊಡಕಾಗುವಂತೆ ಮತ್ತು ಹಾಸನ ಕ್ಷೇತ್ರದ ಜನತೆ ನೋವಿನಲ್ಲಿ ನರಳುವಂತೆ ಮಾಡಿರುವ ನಿಮ್ಮ ಪಕ್ಷದ ಮುಖಂಡರುಗಳ ವಿರುದ್ಧ ಮಾತನಾಡಿ ನಿಮ್ಮ ಸ್ವಂತಿಕೆಯನ್ನು ಬೆಳೆಸಿಕೊಳ್ಳಿ ಅದನ್ನು ಬಿಟ್ಟು ಪಕ್ಷದ ಮುಖಂಡರುಗಳು ಹೇಳಿಕೆ ಕೊಡುವ ಕಾಲಕ್ಕೆ ಪಕ್ಕದಲ್ಲಿ ಕುಳಿತುಕೊಂಡು ಮೂಕ ಬಸವನಂತೆ ಒಪ್ಪಿಗೆ ಸೂಚಿಸುವುದನ್ನು ನಿಲ್ಲಿಸಿ, ಕ್ಷೇತ್ರದ ಜನತೆ ನಿಮ್ಮ ಮೇಲೆ ಅಪರ ಭರವಸೆಗಳನ್ನು ಇಟ್ಟಿದ್ದಾರೆ. ಹಿಂದಿನ ಶಾಸಕರ ಅಹಂಕಾರವನ್ನು ಮುರಿಯಲು ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಹಾಸನ ಸ್ಥಳಿಯ ಶಾಸಕರು ಮಾಜಿ ಶಾಸಕರು, ಸಂಸದರು ಜೊತೆ ಕುಳಿತುಕೊಳ್ಳುವದ ಬಿಟ್ಟು ಸ್ವಂತಿಕೆಯನ್ನು ಬೆಳೆಸಿಕೊಂಡು ಇಲ್ಲಿನ ಸಮಸ್ಯೆ ಅರಿತು ಅಭಿವೃದ್ಧಿ ಕಡೆ ಗಮನಕೊಡಲು ಮುಂದಾಗುವಂತೆ ಸಲಹೆ ನೀಡಿದರು.

LEAVE A REPLY

Please enter your comment!
Please enter your name here