ಪೊಲೀಸ್ ಇಲಾಖೆ ಮತ್ತು ಜನರ ನಡುವೆ ಸ್ನೇಹತ್ವ ಅಗತ್ಯ: ವಿಪುಲ್ ಕುಮಾರ್.

0

ಪೊಲೀಸ್ ಇಲಾಖೆ ಮತ್ತು ಜನರ ನಡುವೆ ಭಯದ ಬದಲು ಸ್ನೆಹತ್ವ ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ರಾದ ವಿಪುಲ್ ಕುಮಾರ್ ಅವರು ತಿಳಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿಂದು ಅವರು ಜನ ಸಂಪರ್ಕ ಸಭೆ ನಡೆಸಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಆಲಿಸಿದರು.

ಕಾನೂನು ಸೇವೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸ್ ಇಲಾಖೆ ಸದಾ ಸಿದ್ದವಿದ್ದು ಜನಸಾಮಾನ್ಯರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿ
ಅವರು ಜನರು ಸಂಚಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಹೆಲ್ಮೆಟ್ ಹಾಗೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಸಿಗ್ನಲ್ ಗಳಲ್ಲಿ ತಾಳ್ಮೆಯಿಂದ ವರ್ತಿಸಬೇಕು ಎಂದರು.

ಜಿಲ್ಲೆಯಲ್ಲಿ ಅಪರಾಧಿಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ ಸಾರ್ವಜನಿಕರು ತಮ್ಮಲ್ಲಿರುವ ಮಾಹಿತಿ ಹಂಚಿಕೊಂಡು ಅಪರಾಧಿಗಳ ಪತ್ತೆಗೆ ಸಹಕರಿಸಬೇಕು ಎಂದು ವಿಪುಲ್ ಕುಮಾರ್ ತಿಳಿಸಿದರು.

ಸಭೆಯಲ್ಲಿದ್ದ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು ಇದಕ್ಕೆ ದಕ್ಷಿಣ ವಲಯ ಮಹಾನಿರೀಕ್ಷಕರಾದ ವಿಪುಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರವರು ಉತ್ತರಿಸಿದರು.

ಸಭೆಯಲ್ಲಿ ಡಿ.ವೈ.ಎಸ್ಪಿ. ಪುಟ್ಟಸ್ವಾಮಿಗೌಡ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here