ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಸಂಸದ ಪ್ರಜ್ವಲ್ ರೇವಣ್ಣ

0

ಲೋಕಸಭಾ ಕ್ಷೇತ್ರ ಹಾಸನ ಮತ್ತು ಕರ್ನಾಟಕ ರಾಜ್ಯದಲ್ಲಿ ಉಂಟಾಗಿರುವ ಆಕ್ಸಿಜನ್,ಬೆಡ್ ಮತ್ತು ಲಸಿಕೆಗಳ ಅಭಾವದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದು ರಾಜ್ಯದ ಕುಂದು ಕೊರತೆಗಳ ವಾಸ್ತವಾಂಶದ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಾಸನ ಸಂಸದರು -ಪ್ರಜ್ವಲ್ ರೇವಣ್ಣ

ರಾಜ್ಯದಲ್ಲಿರುವ ಪ್ರಸ್ತುತ ವೈದ್ಯಕೀಯ ವ್ಯವಸ್ಥೆಯ ಮೂಲಕ ಕರೋನಾ ವನ್ನು ನಿಯಂತ್ರಣ ಮಾಡುವುದಕ್ಕೆ ರಾಜ್ಯ ಸರ್ಕಾರ ಇನ್ನಷ್ಟು ಸದೃಡವಾಗಬೇಕಿದ್ದು ಈ ಕಾರಣದಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವನ್ನು ನೀಡುವುದರ ಜೊತೆಗೆ ಲಸಿಕೆ ಕಾರ್ಯಕ್ರಮವನ್ನು ರಾಷ್ಟ್ರೀಯ ಅಭಿಯಾನವನ್ನಾಗಿ ಘೋಷಿಸಬೇಕು , ಕೋವಿಡ್ ಫ್ರಂಟ್ ಲೈನ್ ಕೆಲಸಗಾರರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ವಿಮಾ ಯೋಜನೆಯನ್ನು ಘೋಷಿಸಿ ನೆರವಾಗಬೇಕು ಎಂದು ಸನ್ಮಾನ್ಯ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ ಸಂಸದ

LEAVE A REPLY

Please enter your comment!
Please enter your name here