ಚುನಾಯಿತರಾದ ಪ್ರಜ್ವಲ್ ರೇವಣ್ಣರವರು, ಎನ್.ಆರ್.ಸಿ. ಸಂಬಂಧಿತವಾಗಿ ಪಾರ್ಲಿಮಂಟರಿ ಅಧಿವೇಶನದಲ್ಲಿ ಚರ್ಚೆ, ಅನುಮೋದನೆಯ ಸಂಧರ್ಭದಲ್ಲಿ ಗೈರು ಹಾಜರಾಗಿ ಮಾನ್ಯ ಮೋದಿಜಿಯವರ ನಿರ್ಣಯಕ್ಕೆ ಬೆಂಬಲಿಸಿದರು. ? ಇದೂ ಮುಸ್ಲಿಮ್ ಸಮುದಾಯ ತಮಗೆ ನಿರಂತರವಾಗಿ ಕಾಲು ಶತಮಾನದಿಂದ ಓಟು ನೀಡಿ, ಬೆಂಬಲಿಸಿ ಪಡೆದ ಪ್ರತಿಫಲ ಎಂದು ದೂರಿದರು.
ತಮ್ಮ ಕುಟುಂಬದವರನ್ನು ಪ್ರೀತಿಸಿ, ಗೌರವಿಸಿ ಎರಡುವರೆ ದಶಕಗಳಿಗಿಂತ ಮಿಗಿಲಾಗಿ ಯಾವುದೇ ನಿರೀಕ್ಷೆ ಇಲ್ಲದೆ ಮುಸ್ಲಿಮ್ ಸಮುದಾಯ ಬೆಂಬಲಿಸಿದಂತೆ ಮುಂದಿನ ದಿನಗಳಲ್ಲಿ ತಮಗೆ ಬಿಜೆಪಿ ಪಕ್ಷದಲ್ಲು ಸಹ ಬೇಷರತ್ತಾಗಿ ಬೆಂಬಲಿಸಿ ಇನ್ನು ಹೆಚ್ಚಿನ ಸ್ಥಾನ ಮಾನ ದೊರೆಯಲಿ ಎಂದು ಈ ಮೂಲಕ ಹಾರೈಸುತ್ತೇವೆ ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರಾದ ಅಮ್ಹಾದ್ ಖಾನ್, ಅಬ್ದಲ್ ರಬ್, ದಾವುದ್, ಜಮೀರ್, ಮುಜಾಮುಲ್ ಇತರರು ಉಪಸ್ಥಿತರಿದ್ದರು.