ಹಾಸನ : ಜಿಲ್ಲೆಯ ಬಿಲ್ಡರ್ಸ್ ಗಳು ಸರ್ಕಾರದ ವಸತಿ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿ ಬಡವರಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಾಣಮಾಡಿ ತಮ್ಮ ಆರ್ಥಿಕತೆಯನ್ನು ಚುರುಕುಗೊಳಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಗೋಪಾಲಯ್ಯ ರವರು ಕರೆ ನೀಡಿದ್ದಾರೆ.

ನಗರದ ಜ್ಞಾನಕ್ಷಿ ಸಮುದಾಯ ಭವನದಲ್ಲಿ ಬಿಲ್ಡ್‍ರ್ಸ್ ಅಸೊಸಿಯೇಷನ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ಕಟ್ಟಡ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ 19 ಹಿನ್ನೆಯಲ್ಲಿ ದೇಶದ ಎಲ್ಲಾ ವಲಯದಲ್ಲಿ ಅಭಿವೃದ್ದಿ ಕುಂಠಿತವಾಗಿತ್ತು ಇಂತಹ ಪಿರಿಸ್ಥಿಯಲ್ಲಿ ಬಿಲ್ಡರ್ಸ್ ಮತ್ತು ಕೈಗಾರಿಕೋದ್ಯಮಿಗಳು ಸರ್ಕಾರಿ ವಲಯದ ಕಟ್ಟಡ ಮತ್ತಿತರ ನಿರ್ಮಾಣ ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗುವ ಪರಿಸ್ಥಿತಿ ಸುಧಾರಣೆ ಮಾಡಲು ಮೂಲಕ ಪ್ರಯತ್ನಿಸಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತಿ ಯೋಜನೆ ಮೂಲಕ ಸಂಕಷ್ಠದಲ್ಲಿರುವವರ ಶ್ರೇಯಸ್ಸಿಗೆ ನೆರವಾಗಲಾಗುತ್ತದೆ ಅದೇ ರೀತಿ ರಾಜ್ಯ ಸರ್ಕಾರವೂ ಹಲವು ಯೋಜನೆಗಳ ಮೂಲಕ ಸಂಕಷ್ಠ ಪರಿಹಾರಕ್ಕೆ ಮುಂದಾಗಿದೆ ಎಂದು ಸಚಿವರು ಹೇಳಿದರು. ಮುಂದಿನ ಕೆಲವು ತಿಂಗಳಲ್ಲಿ ದೇಶದ ಆರ್ಥಿಕತೆ ಇನ್ನೂ ಉತ್ತಮ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದ್ದು ಇದರಲ್ಲಿ ಬಿಲ್ಡರ್ಸ್ ಮತ್ತು ಕೈಗಾರಿಕೋದ್ಯಮಿ ಪಾತ್ರವೂ ಮುಖ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಶಾಸಕರಾದ ಪ್ರೀತಮ್ ಜೆ ಗೌಡ ರವರು ಮಾತನಾಡಿ ಜಿಲ್ಲೆಯಲ್ಲಿ ನುರಿತ ಕೌಶಲ್ಯಯುತ ಕಟ್ಟಡ ಕಾರ್ಮಿಕರ ಕೊರತೆ ಇದ್ದು ಇದನ್ನು ಸರಿಪಡಿಸಲು ಸ್ಥಳೀಯವಾಗಿ ತರಬೇತಿ ನೀಡುವ ಅಗತ್ಯವಿದೆ. ಉದ್ಯೋಗ ವಿನಿಮಯ ಕಚೇರಿಯಿಂದ ಕೌಶಲ್ಯ ತರಬೇತಿ ನೀಡಲಾಗುತ್ತಿಯಾದರೂ ಅದರ ಮಿತಿ ಸೀಮಿತವಾಗಿದೆ, ಹಾಗಾಗಿ ಕೈಗಾರಿಕೋದ್ಯಮಿಗಳು ಮತ್ತು ಬಿಲ್ಡರ್ಸ್‍ಗಳು ಸ್ಥಳಿಯ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು ಅದಕ್ಕೆ ಸರ್ಕಾರ ಕೌಶಲ್ಯ ತರಬೇತಿ ಯೋಜನೆಯಡಿ ದೊರೆಯುವ ಅನುದಾನವನ್ನು ಬಿಲ್ಡರ್ಸ್ ಅಸೋಷಿಯೇಶನ್‍ಗೆ ಕೊಡಿಸುವುದಾಗಿ ಹೇಳಿದರು.
ಎಫ್.ಕೆ.ಸಿ.ಸಿ.ಐ ಅಧ್ಯಕ್ಷರಾದ ಪೆರಿಕಲ್ ಸುಂದರ್ ರವರು ಮಾತನಾಡಿ ದೇಶದ ಹೆಚ್ಚಿನ ಆರ್ಥಿಕ ಚಟುವಟಿಕೆಯನ್ನೂ ಸ್ಥಗಿತಗೊಳಿಸಿದ ಲಾಕಡೌನ್ ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಷ್ಟಬಂದು ಮಾಡಿದೆ ಹಾಗೂ ಜುಲೈ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಭಾರತದ ಎಂಟು ಪ್ರಮುಖ ನಗರಗಳಲ್ಲಿ ವಸತಿ ಕ್ಷೇತ್ರದಲ್ಲಿನ ಮಾರಾಟವೂ ಶೇ.66% ರಷ್ಟು ಕಡಿಮೆಯಾಗಿದೆ ಭಾರತೀಯ ರಿಯಲ್ ಎಸ್ಟೇಟ್ ಸ್ಥಿತಿಯನ್ನು ಕಾಪಾಡುವುದು ಹಾಗೂ ಜಿ.ಡಿ.ಪಿ ಬೆಳವಣಿಗೆ ದೃಷ್ಟಿಕೋನದಿಂದ ಮಾತ್ರವಲ್ಲದೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್, ರಾಷ್ಟ್ರೀಯ ಕೈಗಾರಿಕೋದ್ಯಮ ಅಧ್ಯಕ್ಷ ಮು.ಮೋಹನ್ ಜಿಲ್ಲಾ ಕೈಗಾರಿಕೋದ್ಯಮಿ ನಾಗೇಂದ್ರ, ಎಫ್.ಕೆ.ಸಿ.ಸಿ.ಐ ಪ್ರಮುಖರಾದ ಕಿರಣ್ ಮತ್ತಿತರರು ಹಾಜರಿದ್ದರು.