ಜಾವಗಲ್ ಸಮೀಪದ ಮಾಚೇನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ

0

ಅರಸೀಕೆರೆ : ಜಾವಗಲ್ ಸಮೀಪದ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೈಯದ್ ಜಮೀರ್ ಹಾಗೂ ಉಪಾಧ್ಯಕ್ಷರಾಗಿ ಶೀಲಾ ಎಸ್.ಆರ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾರಾನಾಥ್ ಶುಕ್ರವಾರ ಘೋಷಿಸಿದರು.
ಈ ಬಗ್ಗೆ ನೂತನ ಅಧ್ಯಕ್ಷ ಸೈಯದ್ ಜಮೀರ್ ಅವರನ್ನು ಮಾತನಾಡಿಸಿದಾಗ ಈ ಗ್ರಾಮ ಪಂಚಾಯಿತಿಯನ್ನು ಭ್ರಷ್ಟ ವಿರೋಧಿ ಗ್ರಾಮ ಪಂಚಾಯಿತಿಯನ್ನಾಗಿಸಿ ಈ ಭಾಗದಲ್ಲೇ ಮಾದರಿ ಪಂಚಾಯಿತಿಯನ್ನಾಗಿಸುತ್ತೇನೆ. ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದರು.
ಸದಸ್ಯರಾದ ದೇವರಾಜ್, ಯೋಗೀಶ್, ನಸೀಂತಾಜ್, ಸುಮಿತ್ರಾ ಬಾಯಿ, ನೇತ್ರಾವತಿ,
ಪಿಡಿಒ ಪ್ರವೀಣ್ ಇದ್ದರು.
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಸೈಯದ್ ಜಮೀರ್ ಹಾಗೂ ಉಪಾಧ್ಯಕ್ಷರಾದ ಶೀಲಾ ಅವರನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮುಖಂಡರಾದ ಡಾ.ವಿನಾಯಕ್, ಲಕ್ಯಾ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಾನಾಯ್ಕ್, ಕಾಂಗ್ರೆಸ್ ಮುಖಂಡರಾದ ಮಹಡಿ ಮನೆ ಸತೀಶ್, ಕೆಂಗೇಗೌಡ. ಹಾಗೂ ಮಾಚೇನಹಳ್ಳಿ ಮಹ್ಮದ್ ಷಫೀ ಅಭಿನಂದಿಸಿದ್ದಾರೆ.

HAPPY HOME FURNITURES , Hassan
(Independence Day Offer) 🇮🇳👇
Place : Opposite ARK plywood, Near Bharath Manzil,
Vallabhai Road
Hassan – 573201
Contact : +918660614423
+917975218801

LEAVE A REPLY

Please enter your comment!
Please enter your name here