ಸಕಲೇಶಪುರದ ಕಾಫಿ , ಅಕ್ಕಿ ರೊಟ್ಟಿಗೆ ಮನಸೋತ ಬಹು ಭಾಷಾ ನಟ ಆಶೀಶ್ ವಿದ್ಯಾರ್ಥಿ

0

ಹಾಸನ(ಜ.): ಮಲೆನಾಡ ಕಾಫಿ / ಅಕ್ಕಿರೊಟ್ಟಿಗೆ ಮರುಳಾದ ಪಾನ್ ಇಂಡಿಯಾ ಸ್ಟಾರ್ ನಟ .

ಮಲೆನಾಡ ಸೊಗಡಿನ ಮತ್ತೆ ಮತ್ತೆ ಬೇಕೆನಿಸುವ ಸಕಲೇಶಪುರದ ಫಿಲ್ಟರ್ ಕಾಫಿಗೆ ಎಲ್ಲರೂ ಅಭಿಮಾನಿಗಳೇ. ಆ ಘಮ, ಬಣ್ಣ, ರುಚಿ ಎಲ್ಲರನ್ನೂ ಮೋಡಿ ಮಾಡುತ್ತದೆ. ಇದಕ್ಕೆ ಬಾಲಿವುಡ್ ಕೂಡಾ ಹೊರತಲ್ಲ. ಬಾಲಿವುಡ್ ಮಂದಿಗೂ ಮಲೆನಾಡು ಕಾಫಿ ಅಂದರೆ ಅಚ್ಚುಮೆಚ್ಚು. ಮಲೆನಾಡು ಸಕಲೇಶಪುರದ ಫಿಲ್ಟರ್ ಕಾಫಿ ಸವಿದು ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಅದರ ಸ್ವಾದವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ,

ಇದೇ ಜನವರಿ ತಿಂಗಳಿನಲ್ಲಿ ಮಂಗಳೂರಿನತ್ತ ಕಾರಿನಲ್ಲಿ ಪಯಣ ಬೆಳೆಸಿದ ಪ್ರಖ್ಯಾತ ಖಳನಟ ಆಶೀಶ್ ವಿದ್ಯಾರ್ಥಿ ಮಂಗಳೂರಿನತ್ತ ಪಯಣ ಬೆಳೆಸಿದಾಗ ಹಾಸನ ದಾಟುತ್ತಿದ್ದಂತೆ ಸಕಲೇಶಪುರದ ಫಿಲ್ಟರ್ ಕಾಫಿ ಕುಡಿಯಲು ಹುಡುಕಾಡಿ ಸ್ಥಳೀಯರ ಬಳಿ ವಿಚಾರಿಸಿ ಒಂದೆಡೆ ನಿಲ್ಲಿಸಿ ಕುಡಿದು, ವಂಡರ್ ಫುಲ್ ಎಂದ ಆಶಿಶ್ ವಿದ್ಯಾರ್ಥಿ ಕಾಫಿಯ ರುಚಿಗೆ ಮನಸೋತಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ಇದ್ದಾಗಲೇ ಸಕಲೇಶಪುರದಲ್ಲಿ ಓಡಾಡಿ ಊರಿನ ಸೌಂದರ್ಯ ಕಣ್ತುಂಬಿಕೊಂಡ ನಟ ಕಾಫಿ ಕುರಿತ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಸಿನಿಮಾ ಒಂದರ ಶೂಟಿಂಗ್ ಸಂಬಂಧ ಮಂಗಳೂರಿನಿಂದ ಸಕಲೇಶಪುರಕ್ಕೆ ಬರುವಾಗ ಆನೆಮಹಲ್ ಬಳಿಯ ಅಕ್ಕಿ ರೊಟ್ಟಿ ಹೊಟೇಲ್ ಗೆ ಭೇಟಿ ಕೊಟ್ಟು ಅಕ್ಕಿರೊಟ್ಟಿ , ಫುಲಾವ್ ತಿಂದು ಹೊಟೇಲ್ ನಡೆಸುತ್ತಿದ್ದ ಕುಟುಂಬಕ್ಕೆ ಶುಭ ಹಾರೈಸಿ ಮುನ್ನಡೆದಿದ್ದಾರೆ., ಆಶಿಶ್ ಸಕಲೇಶಪುರವನ್ನು ಎಕ್ಸ್‌ಪ್ಲೋರ್ ಮಾಡಿದ್ದು. ಸಕಲೇಶಪುರ ಜನತೆಗೆ ಖುಷಿ ತಂದಿದೆ., ಸಕಲೇಶಪುರ ಸಮೀಪದ ಹೊಸೂರು ಎಸ್ಟೇಟ್‌ ಹೋಟೆಲ್‌ಗೆ ಭೇಟಿ ನೀಡಿದ್ದು, ಸಕಲೇಶಪುರ ಪಟ್ಟಣದಲ್ಲಿ ಕೆಲ ಸ್ಥಳೀಯರನ್ನು ಮಾತನಾಡಿಸಿ ಹೊರಟಿದ್ದಾರೆ. ಸಕಲೇಶಪುರ ಸೌಂದರ್ಯ ವರ್ಣಿಸಿರುವ ನಟ ಆಶಿಶ್ ವಿದ್ಯಾರ್ಥಿ ವಿಶೇಷವಾಗಿ ಮತ್ತೆ ಕಾಫಿ ರುಚಿ ಸವಿಯಲು ಬರುತ್ತೇನೆ ಎಂದಿದ್ದಾರೆ.

celebritieshassan ashishvidhyarthi cinemanewshassan sakleshpur

LEAVE A REPLY

Please enter your comment!
Please enter your name here