ಬೆಂಗಳೂರು ಕಾರವಾರ ನಡುವಿನ ಹಗಲು ರೈಲು ಆಗಸ್ಟ್ 16 ರಿಂದ ವಿಸ್ಟಾಡೋಮ್ ಕೋಚ್ ಸಹಿತ ಪುನಾರಂಭ

0

ಹಾಸನ / ಬೆಂಗಳೂರು : ಕೋವಿಡ್ ಭೀತಿ/ಮಳೆ ಕಾರಣ ದಿಂದಾಗಿ ಭಾಗಶಃ ಸಂಚಾರ ಮೊಟಕುಗೊಳಿಸಿದ್ದ ಬೆಂಗಳೂರು ಹಾಸನ ಕಾರವಾರ ನಡುವಿನ (06211/06212) ಹಗಲು ರೈಲು ಆಗಸ್ಟ್ 16 ರಿಂದ ಹೊಸ ವಿಸ್ಟಾಡೋಮ್ ಕೋಚ್ ಸಹಿತ (40ಸೀಟು)ನೊಂದಿಗೆ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ತಿಳಿಸಿದ್ದು, ಬೆಂಗಳೂರು ಕಾರವಾರ ಹಗಲು ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರ ತನಕ ಸ್ಥಗಿತಗೊಳಿಸಲಾಗಿದ್ದು, ರೈಲು ಪುನಾರಂಭಕ್ಕೆ ಪ್ರಯಾಣಿಕರು, ಹಲವು ಸಂಘ ಸಂಸ್ಥೆಗಳು, ಸಾರ್ವಜನಿಕರು ಒತ್ತಾಯಿಸಿದ್ದರು.

ಈ ಸಂಬಂಧ ರೈಲ್ವೆ ಸಚಿವರನ್ನು ಭೇಟಿಯಾದ ಶೋಭಾ ಕರಂದ್ಲಾಜೆ, ಕಾರವಾರ, ಬೆಂಗಳೂರು ನಡುವಿನ ಹಗಲು ರೈಲಿನ ಪುನಾರಂಭಕ್ಕೆ ಮನವಿ ಮಾಡಿದ ನಂತರ ಕೇಂದ್ರ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ರೈಲು ಸಂಚಾರ ಆರಂಭದಿಂದ ಪ್ರಕೃತಿ ರಮಣೀಯ ಪಶ್ಚಿಮ ಘಟ್ಟಗಳ ಹಾಗೂ ಕರಾವಳಿಯ ಅರಬ್ಬಿ ಸಮುದ್ರದ ವಿಹಂಗಮ ನೋಟವನ್ನು ರೈಲ್ವೆ ಪ್ರಯಾಣದ ನಡುವೆ ಪ್ರಯಾಣಿಕರು ಎಂದಿನಂತೆ ಕಣ್ಣುಂಬಿಕೊಳ್ಳಬಹುದು ಎಂದು ಶೋಭಾ ಶುಭ ಹಾರೈಸಿದ್ದಾರೆ.

ಹಾಸನದ ರತ್ನಂ ಸಿಲ್ಕ್ ಮಳಿಗೆಗೆ ಒಂದು ವರ್ಷ ಪೂರೈಸಿದ ಸುಸಂದರ್ಭದಲ್ಲಿ ಆಗಸ್ಟ್14ಮತ್ತು 15ರಂದು 6 ಸಾವಿರಕ್ಕೂ ಮೇಲ್ಪಟ್ಟು ಸೀರೆ ಖರೀದಿ ಮಾಡಿದ ಗ್ರಾಹಕರಿಗೆ ಒಂದು ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿರುವ ಸಿಲ್ಕ್ ಮಾಲೀಕ ದರ್ಶನ್, ತಮ್ಮ ಮಳಿಗೆಯನ್ನು ಹಾಸನದ ನಂಬರ್ ಒನ್ ರೇಷ್ಮೆ ಸೀರೆ ಮಳಿಗೆಯನ್ನಾಗಿಸಿದ ಎಲ್ಲಾ ಗ್ರಾಹಕರಿಗೆ ಮನಃಪೂರ್ವಕ ಧನ್ಯವಾದ ಹೇಳಿದ್ದಾರೆ.

Hassan / Bangalore: Union Railway Minister Shobha Karandlaje on Friday said that the daytime train (06211/06212) between Bangalore Hassan Karavar (06211/06212), which was partially curtailed due to covid/heavy rainfall fears, will resume with the new Vistadome coach (40 seats) from August 16.

LEAVE A REPLY

Please enter your comment!
Please enter your name here