ಹಾಸನದ ಈ ದಿನದ ಸುದ್ದಿ

  0

  ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ ಜಿಲ್ಲಾಧಿಕಾರಿ ಆರ್.ಗಿರೀಶ್

  ಹಾಸನ ಸೆ.18 :

  ದೇಶ ಸ್ವಾತಂತ್ರ್ಯೋತ್ಸವಕ್ಕೆ ಬಂದು 75 ವರ್ಷಗಳು ಪೂರೈಸಿದ್ದು, ಇದರ ಹಿಂದೆ ಸಾವಿರಾರು ಮಹನೀಯರ ತ್ಯಾಗ, ಬಲಿದಾನಗಳಿವೆ. ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಸ್ಮರಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

  ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿv,À ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿರಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕ ಸಂಘ(ರಿ), ವಾಲ್ಮೀಕಿ ಮಹಿಳಾ ಸಾಂಸ್ಕೃತಿಕ ಸಂಸ್ಥೆ(ರಿ), ಜಿಲ್ಲೆಯ ವಿವಿಧ ಯುವಕ, ಯುವತಿ ಮಹಿಳಾ ಮಂಡಳಿಗಳು, ಎನ್.ಎಸ್.ಎಸ್ ಘಟಕಗಳು. ಎನ್.ಸಿ.ಸಿ ಘಟಕಗಳು ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು, ಭಾರತ ಸೇವಾದಳ, ಯುವ ಸ್ಪಂದನ ಕೇಂದ್ರ ಹಾಸನ ಇವರ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ ಫಿಟ್ ಇಂಡಿಯಾ ಓಟ 0.2 ಚಾಲನೆ ನೀಡಿ ಅವರು ಮಾತನಾಡಿದರು.

  ಯಾವುದೇ ದೇಶ ಆರೋಗ್ಯಕರವಾಗಿರಬೇಕಾದರೇ ಜನರು ಸದೃಢವಾಗಿರಬೇಕು ಆಗ ಮಾತ್ರ ದೇಶದ ಸುಬಧ್ರ ರಾಷ್ಟ್ರ ನಿರ್ಮಾಣ ಸಾಧ್ಯ ಈ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕಳೆದ ವರ್ಷದಿಂದ ಫಿಟ್ ಇಂಡಿಯಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

  ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚು ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿರುವುದರಿಂದ ದುಡಿಯುವ ಸಾಮಥ್ರ್ಯ ಕಡಿಮೆಯಾಗುತ್ತಿದೆ. ಹಾಗಾಗಿ ಆರೋಗ್ಯವಂತ ದೇಶ ನಿರ್ಮಾಣ ಮಾಡಬೇಕಾದರೆ ನಮ್ಮ ಜೀವನದಲ್ಲಿ ವ್ಯಾಯಮ, ಯೋಗ, ಓಟ ಮತ್ತಿತರ ಭೌತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರೆ ದೇಹ ಸದೃಢರಾಗಿರಲು ಸಾಧ್ಯವಾಗುತ್ತದೆ ಎಂದರು.

  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಆಗಸ್ಟ್ 15 ರಿಂದ ಅಕ್ಟೋಬರ್ 2 ರ ವರೆಗೆ ದೇಶದ ವಿವಿಧ ಜಿಲ್ಲೆಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

  ಯುವಕರು ಮುಖ್ಯವಾಗಿ ದೈಹಿಕ ಸಾಮಥ್ರ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕನಿಷ್ಠ 30 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಟ್ಟು, ಅದನ್ನು ಜೀವನ ಶೈಲಿಯಲ್ಲಿ ರೂಢಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

  ಯುವಕರು ನಮ್ಮ ದೇಶದ ಆಸ್ತಿ ವಿವಿಧ ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರಲ್ಲದೆ ಫಿಟ್ ಇಂಡಿಯ ಓಟ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

  ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆಜಾದಿ ಕಾ ಅಮೃತ್ ಮಹೋತ್ಸವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

  ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
  .

  ಕಾರ್ಯಕ್ರಮದಲ್ಲಿ ಡಿ.ವೈ.ಎಸ್ಪಿ ಪುಟ್ಟ ಸ್ವಾಮಿ, ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಅಭಿಷೇಕ್ ಚವರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಹರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಸುದರ್ಶನ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಮಹಾಂತಪ್ಪ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಬಿ.ಟಿ ಮಾನವ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು. ವಿದ್ವನ್ ಮುರುಳಿ, ಭನುಮೋಶ್ರೀ, ಪ್ರಸಾದ್, ನಾಗಶ್ರೀ ಮತ್ತು ತಂಡದಿಂದ ಪ್ರಾರ್ಥನೆ ಗ್ಯಾರೆಂಟಿ ರಾವiಣ್ಣ ತಂಡದಿಂದ ಜಾಗೃತಿ ಗೀತೆಗಳ ಗಾಯನ ನಡೆಯಿತು. ಇದೇ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಫಿಟ್ ಇಂಡಿಯಾ 0.2 ಓಟ ಗಮನಸೆಳೆಯಿತು.

  ಕೋವಿಡ್ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಲು ಸೂಚನೆ
  ಹಾಸನ ಸೆ.18 : ಎಲ್ಲಾ ರಾಜ್ಯಗಳು ಕೋವಿಡ್ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದರ ಮೂಲಕ ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಲು ಶ್ರಮಿಸುವಂತೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಸೂಚನೆ ನೀಡಿದ್ದಾರೆ.

  ರಾಜ್ಯಗಳ ಎಲ್ಲಾ ಕಾರ್ಯದರ್ಶಿಗಳು ಹಾಗೂ ವಿವಧ ಪ್ರಮುಖ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣದ ಕುರಿತು ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು ದೇಶ ವ್ಯಾಪ್ತಿ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಕರ್ನಾಟಕದ ಬೆಂಗಳೂರು ನಗರ, ಉಡುಪಿ ಹಾಗೂ ಕಲಬುರ್ಗಿಯಲ್ಲಿ 2143 ಪ್ರಕರಣಗಳು ಕಂಡು ಬಂದಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚಿಸಿದರು.

  ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮಾತನಾಡಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ನೀಡುವುದರ ಮೂಲಕ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸಾದ್ಯ ಎಂದರು.

  ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಬೆಡ್ , ಆಕ್ಸಿಜನ್ ವೆಂಟಿಲೇಟರ್ ಮತ್ತು ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸುವಂತೆ ತಿಳಿಸಿದರು.

  ದೇಶದಲ್ಲಿ ಕಳೆದ ಒಂದು ವಾರದಲ್ಲಿ 3.41 ಲಕ್ಷದಷ್ಟು ಕೋವಿಡ್ ಸಕ್ರಿಯ ಪ್ರಕರಣಗಳಿದ್ದು ಪಾಸಿಟಿವಿಟಿ ದರವು 1.91 ರಷ್ಟಿದೆ. ಸಾವಿನ ಪ್ರಮಾಣ 4.44 ಲಕ್ಷ ದಷ್ಟಿದೆ. ಸಾವಿನ ದರ 1.06 ರಷ್ಟಿದೆ. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದರು.

  ದೇಶದಲ್ಲಿ 17 ರಾಜ್ಯಗಳ 36 ಜಿಲ್ಲೆಗಳಲ್ಲಿ ಶೇ.5 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. 34 ಜಿಲ್ಲೆಗಳಲ್ಲಿ ಶೇ 10 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಿದೆ ಎಂದರು.

  ಕರ್ನಾಟಕ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಶೇಕಡ 76 ರಷ್ಟು ಲಸಿಕೆ ನೀಡಲಾಗಿದ್ದು, 60 ವರ್ಷ ಮೇಲ್ಪಟ್ಟ ಶೇಕಡ 78 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಶೇಕಡ 47 ರಷ್ಟು ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇಕಡ ನೂರರಷ್ಟು ಲಸಿಕೆ ನೀಡುವಂತೆ ಹೇಳಿದರು.

  ವೀಡಿಯೋ ಸಂವಾದದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಜಿಲ್ಲೆಯಿಂದ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಪಾಲ್ಗೊಂಡಿದ್ದರು.

  ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಸ್ಪಷ್ಟೀಕರಣ
  ಹಾಸನ ಸೆ.: ಕೆ.ಎಸ್.ಆರ್.ಟಿ.ಸಿ ವಾಹನದಲ್ಲಿ ಒಂದು ದಿನದ ಪ್ರವಾಸ ಎಂಬ ಶೀರ್ಷಿಕೆಯಡಿಯಲ್ಲಿ ಪ್ರವಾಸ ಸ್ಥಳಗಳಾದ ಶಿರಾಡಿ-ಉಪ್ಪಿನಂಗಡಿ- ಪೊಳಲಿ-ಹೊಸನಾಡು-ಕಟೀಲು-ಪಣಂಬೂರು-ಕುದ್ರೋಳಿ-ಧರ್ಮಸ್ಥಳ-ಸೌತಡ್ಕಗಳಿಗೆ ಪ್ರವಾಸದ ಜಾಹೀರಾತು ತುಣುಕು ಸೆ.29 ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸದರಿ ಜಾಹೀರಾತಿಗೂ ಹಾಗೂ ಕೆಎಸ್‍ಆರ್‍ಟಿಸಿ ನಿಗಮಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಕೆ.ಎಸ್.ಆರ್.ಟಿ.ಸಿಯ ಹಾಸನ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ

  ವಿಕಲ ಚೇತನರ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆ
  ಹಾಸನ ಸೆ.18 : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಜಿಲ್ಲೆಯ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಹಿರಿಯ ನಾಗರಿಕರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2021 ರ ಪ್ರಯುಕ್ತ ಜಿಲ್ಲೆಯ ಹಿರಿಯ ನಾಗರಿಕರಿಗಾಗಿ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಸೆ.21 ರಂದು ಜಿಲ್ಲಾ ನಿವೃತ್ತ ನೌಕರರ ಸಂಘ, ಕಲಾ ಭವನ ಹತ್ತಿರ, ಹಾಸನ ಇಲ್ಲಿ ಏರ್ಪಡಿಸಿದ್ದು, ಹಿರಿಯ ನಾಗರಿಕರು ಕೋವಿಡ್-19 1 ಮತ್ತು 2ನೇ ಲಸಿಕೆ ಪಡೆದು, ಮಾಸ್ಕ್ ಧರಿಸಿ ಭಾಗವಹಿಸಿ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

  ವಯೋಮಿತಿ ಆಧಾರದ ಮೇಲೆ ಏರ್ಪಡಿಸಲಾಗಿದೆ : ಸಾಂಸ್ಕøತಿಕ ಸ್ಪರ್ಧೆಯಲ್ಲಿ 60-69, 70-79, 80 ವರ್ಷ ಮೇಲ್ಟಟ್ಟ ಪುರುಷರು, ಮಹಿಳೆಯರು, ಏಕಪಾತ್ರ ಅಭಿನಯದಲ್ಲಿ. ಗಾಯನ ಸ್ಪರ್ಧೆ (ಜಾನಪದ ಗೀತೆ) ಚಿತ್ರಕಲೆಯಲ್ಲಿ ಭಾಗವಹಿಸಬಹುದಾಗಿದೆ

  ಕ್ರೀಡಾ ಸ್ಪರ್ಧೆಯಲ್ಲಿ 60-69, 70-79, 80 ವರ್ಷ ಮೇಲ್ಟಟ್ಟ ಪುರುಷರು, ಮಹಿಳೆಯರು, ನಡಿಗೆ, ರಿಂಗನ್ನು ಬಕೆಟ್ ನಲ್ಲಿ ಎಸೆಯುವುದು, ಕೇರಂನಲ್ಲಿ ಭಾಗವಹಿಸಬಹುದಾಗಿದ್ದು, ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರೀಕರು ಮತ್ತೊಂದು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಹಾಗೂ ಚಿತ್ರಕಲೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರತಕ್ಕದ್ದು, ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

  ಆರೋಪಿಗೆ ಜೀವಾವಧಿ ಶಿಕ್ಷೆ

  ಹಾಸನ ಸೆ.18 : ಸಕಲೇಶಪುರ ತಾಲ್ಲೂಕು ಸಕಲೇಶಪುರ ನಗರ ಪೊಲೀಸ್ ಠಾಣಾ ಸರಹದ್ದಿನ ಬೈಕೆರೆ ಜಾರ ಗಲ್ಲು ಗ್ರಾಮದ ಆರೋಪಿತ ಚಂದ್ರ.ಜಿ @ ಮುತ್ತು ಶಾಂತಿ ಎಂಬುವವರನ್ನು 2012ನೇ ಸಾಲಿನಲ್ಲಿ ಮದುವೆ ಮಾಡಿದ್ದು ಮದುವೆಯಾದ ನಂತರದಲ್ಲಿ ಅನ್ಯೋನ್ಯವಾಗಿದ್ದ ದಂಪತಿಯರಿಗೆ ಎರಡು ಜನ ಮಕ್ಕಳಿದ್ದು ಕೂಲಿ ಕೆಲಸ ಮಾಡಿಕೊಂಡು ಗಂಡ-ಹೆಂಡತಿ ನಡುವೆ ಜಗಳವಾಗುತ್ತಿದೆ ತವರುಮನೆಯವರು ಅನೇಕ ಬಾರಿ ಬುದ್ಧಿ ಹೇಳಿ ಕಳಿಸಿದ್ದು ಆರೋಪಿ ತನ್ನ ತಪ್ಪನ್ನು ತಿದ್ದಿಕೊಳ್ಳದೇ ತನ್ನ ಹೆಂಡತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿ 15-11-2018 ರ ರಾತ್ರಿ ಸುಮಾರು ಎಂಟು ಗಂಟೆಯ ಸಮಯದಲ್ಲಿ ಮನೆಯಲ್ಲಿದ್ದ ಹೆಂಡತಿ ಶಾಂತಿಯೊಂದಿಗೆ ಜಗಳ ಮಾಡಿ ಆರೋಪಿತ ಮರದ ತುಂಡಿನಿಂದ ತನ್ನ ಹೆಂಡತಿಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುತ್ತಾರೆ.

  ಈ ಬಗ್ಗೆ ಪಿರ್ಯಾದಿ ಅವರು ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದು, ಆ ಪ್ರಕಾರ ಪೊಲೀಸರು ಆರೋಪಿ ಚಂದ್ರಜಿ ಈತನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಿದ ವೃತ್ತ ನಿರೀಕ್ಷಕರಾದ ವಸಂತ ಎಸ್. ಹೆಚ್ ರವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

  ಪ್ರಾಸಿಕ್ಯೂಶನ್ ಪರವಾಗಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿದಾರರ ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳಿಂದ ಪ್ರಕರಣ ವಾಗಿದ್ದರಿಂದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು ಶ್ರೀ ಇ.ಡಿ. ಶ್ರೀನಿವಾಸ್ ರವರು ವಾದ ಮಂಡಿಸಿ ರುತ್ತಾರೆ.

  ಇದನ್ನು ಪರಿಗಣಿಸಿದ ಹಾಸನದ ಐದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ವಿತ್ತಲ್ ವಿಷ್ಣು ಪಂತ್ ಜೋಶಿಯವರು ಆರೋಪಿಯ ಮೇಲಿರುವ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿ ಚಂದ್ರಜಿ ಇವರಿಗೆ ಭಾರತ ದಂಡ ಸಂಹಿತೆ ಕಲಂ 302 ರಡಿ ಅಪರಾಧಕ್ಕಾಗಿ ಜೀವಾವಧಿ ಸಜೆ ಮತ್ತು ಹತ್ತು ಸಾವಿರ ರೂ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಆರು ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿ ಸೆಪ್ಟೆಂಬರ್ 17ರಂದು ತೀರ್ಪು ನೀಡಿ ಆದೇಶಿಸಿರುತ್ತಾರೆ ಎಂದು ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಈ. ಡಿ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

  ಬೇಲೂರು ತಾಲ್ಲೂಕು ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
  ಹಾಸನ ಸೆ.18 : ಬೇಲೂರು ಶಿಶು ಅಭಿವೃದ್ಧಿ ಯೋಜನೆ ಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕರ ಸ್ಥಾನಗಳನ್ನು ಮೆರಿಟ್ ಆಧಾರದ ಮೇಲೆ ಈ ಕೆಳಕಂಡ ನಿಬಂಧನೆಗಳನ್ನು ಮಯವತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 13 ಸಂಜೆ 5.30 ರೊಳಗೆ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ತಿಳಿಸಿದ್ದಾರೆ.

  ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಾಲೂರು ಕಾಂಪ್ಲೆಕ್ಸ್ ಡಾಕ್ಟರ್ ಬಿಆರ್ ಅಂಬೇಡ್ಕರ್ ವೃತ್ತ ಬೇಲೂರು ದೂರವಾಣಿ ಸಂಖ್ಯೆ 08177-222269 ಇವರನ್ನು ಸಂಪರ್ಕಿಸಬಹುದಾಗಿದೆ.

  ಆಲೂರು ತಾಲ್ಲೂಕು ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

  ಹಾಸನ ಸೆ.18 : ಆಲೂರು ತಾಲ್ಲೂಕಿನ ಬ್ಯಾಬಾ ಕಾಲೋನಿ ಅಂಗನವಾಡಿ ಕೇಂದ್ರ (ಪ.ಜಾತಿ) ಹಾಗೂ ಕವಳಿಕೆರೆ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

  ಆಸಕ್ತರು ಅ.13 ರೊಳಗೆ ಆನ್ ಲೈನ್ ಮೂಲಕ ವೆಬ್ ಸೈಟ್ ತಿತಿತಿ.ಚಿಟಿgಚಿಟಿಚಿತಿಚಿಜiಡಿeಛಿuiಣ.ಞಚಿಡಿ.ಟಿiಛಿ.iಟಿ ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಆಲೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ: 08170-218220 ಸಂಪರ್ಕಿಸಬಹುದಾಗಿರುತ್ತದೆ ಎಂದು ಆಲೂರು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.
  LEAVE A REPLY

  Please enter your comment!
  Please enter your name here