ಬೆಂಗಳೂರಿನ ಮೂಲದ ಬಾಲಕಿ ಎಸ್. ನಿಖಿತಾ ಅವರ ಯೋಗಾಸನ ಪ್ರದರ್ಶನವು ನಡೆದು ನೋಡುಗರ ಗಮನ ಸೆಳೆಯಿತು

0

ನಮ್ಮ ನಾಡು ಎಂದರೇ ಕವಿಗಳ ಬೀಡು. ಪ್ರಸ್ತುತದಲ್ಲಿ ವೈಜ್ಞಾನಿಕತೆಗಳು ಹೆಚ್ಚಾಗಿ ಪುಸ್ತಕ ಓದುವವರ ಸಂಖೆಯಲ್ಲಿ ಇಳಿಮುಖವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಮುಂಬಾಯಿಯ ಹಿರಿಯ ಸಾಹಿತಿ ಡಾ. ಅಮರೇಶ್ ಪಾಟೀಲ್ ಬೇಸರವ್ಯಕ್ತಪಡಿಸಿದರು. ನಗರದ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನ, ಹಾಸನ ವತಿಯಿಂದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಸಹಕಾರದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಏಳನೇ ವರ್ಷದ ರಾಜ್ಯಮಟ್ಟದ ಕವಿಕಾವ್ಯ ಸಂಭ್ರಮ ಉದ್ಘಾಟನಾ ಸಮಾರಂಭ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ನುಡಿಯಲ್ಲಿ ಮಾತನಾಡಿದ ಅವರು, ಕಾವ್ಯ ಎಂದರೇ ಒಂದಕ್ಕೊಂದು ಸಂಬಂದ ಕೂಡುವಾಗೆ ಇರಬೇಕು. ನಮ್ಮ ಕರ್ನಾಟಕ ಎಂದರೆ ಕವಿಗಳ ಬೀಡು.

ಪುಸ್ತಕಗಳ ಓದುವ ಸಂಖ್ಯೆ ಕಡಿಮೆ ಆಗುತ್ತಿದೆ. ವೈಜ್ನಾನಿಕಗಳು ಹೆಚ್ಚಾಗಿದೆ. ಕನ್ನಡ ಭಾಷೆ ಎಂದರೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಕನ್ನಡ ಲಿಪಿ ಎಂದರೆ ಎಲ್ಲಾ ಲಿಪಿಗಳ ರಾಣಿ ಆಗಿದೆ. ಭಾಷೆ ಜಾತಿ ಯಾವುದೇ ಆಗಿರಲಿ ಎಲ್ಲಾರು ಕನ್ನಡ ನಾಡಿನಲ್ಲಿ ಇದ್ಧೇವೆ. ಹಾಸನ ಜಿಲ್ಲೆ ಎಂದರೇ ಕವಿಗಳ ಬೀಡು ಎಂದು ಬಣ್ಣಿಸಿದರು. ಮೈಸೂರಿನ ಕವಯಿತ್ರಿ ಡಾ. ಲತಾ ರಾಜಶೇಖರ್ ಮಾತನಾಡಿದ ಅವರು, ಕಾವ್ಯದಿಂದ ಪ್ರಯೋಜನವಿದ್ದು, ಈ ಬಗ್ಗೆ ಅನೇಕ ಕವಿಗಳು ತಮ್ಮದೆಯಾದ ಹೇಳಿಕೆ ನೀಡಿದ್ದಾರೆ. ಬರೆಯುವಾಗ, ಓದುವಾಗ ಆನಂದ ಸಿಗುತ್ತದೆ. ಕವಿತೆ ಲಾಭಗಳಿಗಿಂತ ಅದರಿಂದ ವ್ಯಕ್ತಿತ್ವದ ಪರಿಣಾಮ ಬೀರುತ್ತದೆ ಎಂದರು. ಕವಿತೆ ಓದುತ್ತಲೆ ನಾನಾ ರೀತಿಯ ಪ್ರೇರಣೆ ಸಿಗುತ್ತದೆ. ಕವಿಗಳಿಗೆ ಮುಖ್ಯವಾಗಿ ಪ್ರತಿಭೆ ಅಗತ್ಯ.

ನಿರಂತರ ಅಧ್ಯಾಯನ, ಅಭ್ಯಾಸ ಅವಶ್ಯಕ. ಪ್ರಾಚೀನ ಕಾವ್ಯವನ್ನು ಓದಿದರೇ ಉತ್ತಮ. ನಿರಂತರವಾಗಿ ಕವಿತೆ ರಚನೆ ಮಾಡಬೇಕು. ಒಂದು ಕವಿತೆಯನ್ನುವ ಬರೆದ ಮೇಲೆ ನಾಲ್ಕೈದು ಸಲ ಓದಿ ತಿದ್ದುವ ಅವಶ್ಯಕತೆ ಇದೆ. ನಿರಂತರ ಅಭ್ಯಾಸ ಕೂಡ ಇರಬೇಕು. ಉಸ್ತಕ ಸಂಸ್ಕೃತಿ ಕ್ಷಿಣಿಸುತ್ತ ಇರುವ ವೇಳೆ ಇಂತಹ ಕಾರ್ಯಕ್ರಮಗಳು ಪ್ರಮುಖ. ಕವಿಯಾದವರು ಚಿಂತನೆ ಮಾಡುವುದನ್ನು ಬೆಳೆಸಿಕೊಂಡು ಆಲೋಚಿಸುವ ಮನಸ್ಸು ಇರಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಮೂಲದ ಬಾಲಕಿ ಎಸ್. ನಿಖಿತಾ ಅವರ ಯೋಗಾಸನ ಪ್ರದರ್ಶನವು ನಡೆದು ನೋಡುಗರ ಗಮನಸೆಳೆಯಿತು. ಭರತನಾಟ್ಯ ಪ್ರದರ್ಶನ ಆಕರ್ಷಿಸಿತು. ಇದೆ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಉಪಾಧ್ಯಕ್ಷ ಟಿ.ಸತೀಶ್ ಜವರೇಗೌಡ, ಉಪಾಧ್ಯಕ್ಷ ನಾಗರಾಜು ದೊಡ್ಡಮನಿ, ಸಮಾಜ ಸೇವಕ ಗಣೇಶ್ ತಮ್ಲಾಪುರ, ಸಾಹಿತಿ, ಪತ್ರಕರ್ತ ನಾಗರಾಜ್ ಹೆತ್ತೂರ್, ಸಾಹಿತಿ ಬಸವರಾಜು, ವಾಸುದೇವ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here