ಮೂರು ಹಂತದಲ್ಲಿ ಸಕಾಲ ಸಪ್ತಾಹ ಆಚರಣೆ

0

ಹಾಸನ : ರಾಜ್ಯದ ನಾಗರೀಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸಕಾಲ ಯೋಜನೆಯನ್ನು 98 ಉಲಾಖೆಗಳೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಸಾರ್ವಜನಕರಿಗೆ ಸೇವೆಗಳನ್ನು ನೀಡಬೇಕು ಎಂದು ಸಕಾಲ ಮಿಷನ್ ಅಪರ ಮಿಷನ್ ನಿರ್ದೇಶಕರಾದ ಡಾ. ಬಿ.ಆರ್. ಮಮತ ಅವರು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಅಪರ ಜಿಲ್ಲಾಧಿಕಾರಿಗಳು ಹಾಗೂ ಮತ್ತಿತರ ಅಧಿಕಾರಿಗಳೊಂದಿಗೆ ಸಕಾಲ ಯೋಜನೆಯಡಿ ಸೇವೆ ಒದಗಿಸುವ ಬಗ್ಗೆ ವಿಡಿಯೋ ಸಂವಾದ ನಡೆಸಿದ ಅವರು ನ. 30 ರಿಂದ ಡಿ. 19 ರವರೆಗೆ ಮೂರು ಹಂತಗಳಲ್ಲಿ ಸಕಾಲ ಸಪ್ತಾಹ ಆಚರಿಸಲಾಗುತ್ತಿದೆ. ಸಕಾಲ ಸಪ್ತಾಹದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ನ 30 ರಿಂದ ಡಿ. 5 ರವರೆಗೆ ಮೊದಲನೇ ಹಂತದಲ್ಲಿ ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಲ್ಲಿ ಸಕಾಲ ಸಪ್ತಾಹ ಆಚರಿಸಲಾಗುವುದು. ಡಿ. 7 ರಿಂದ 11 ರವರೆಗೆ ಎರಡನೇ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಡಿ. 14 ರಿಂದ 19ರವರೆಗೆ ಮೂರನೇ ಹಂತದಲ್ಲಿ ಉಳಿದ ಎಲ್ಲಾ ಇಲಾಖೆಗಳಲ್ಲಿ ಸಪ್ತಾಹವನ್ನು ಆಚರಿಸಲಾಗುವುದು.
ಸಕಾಲ ಯೋಜನೆಯಡಿ ಒದಗಿಸುವ ಸೇವೆಗಳ ಕುರಿತು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ದೊರೆಯುವ ಸೇವೆಗಳ ವಿವರ ಮತ್ತು ಕಾಲವಧಿ ಬಗ್ಗೆ ಕಚೇರಿಗಳಲ್ಲಿ ಬೊರ್ಡ್ ಹಾಕಬೇಕು ಎಂದರಲ್ಲದೆ, ಸಪ್ತಾಹ ಆಚರಣೆ ಸಂಬಂಧ ಬ್ಯಾನರ್ ಹಾಕುವಂತೆ ಸೂಚಿಸಿದರು.
ಸಕಾಲ ಯೋಜನೆಯಡಿ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿ ಕುರಿತು ತಪಾಸಣೆ ಮಾಡಲು ಪ್ರತಿ ಜಿಲ್ಲೆಯಲ್ಲಿ 4 ತಂಡಗಳನ್ನು ರಚಿಸಿ ಕಚೇರಿಗಳಿಗೆ ಖುದ್ದು ಭೇಟಿನೀಡಿ ಪರಿಶೀಲಿಸಿ ಪ್ರತಿ ದಿನ ವರದಿ ನೀಡುವಂತೆ ಸೂಚಿಸಿದರಲ್ಲದೆ, ನಾಗರೀಕರಿಂದ ಪ್ರಶ್ನವಳಿ ತುಂಬಿಸಿ ಸಕಾಲ ಮಿಷನ್‍ಗೆ ಅಪ್‍ಲೋಡ್ ಮಡುವಂತೆ ತಿಳಿಸಿದರು.
2014 ರಿಂದ ನಾನಾ ಕಾರಣಗಳಿಂದ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ, ಇವುಗಳನ್ನು ವಿಲೇವಾರಿ ಮಾಡುವುದು, ಸೂಕ್ತ ಕಾರಣವಿಲ್ಲದೆ ಅರ್ಜಿ ತಿರಸ್ಕರಿಸಿದ್ದರೆ ಅದು ಅಪರಾಧವಾಗುತ್ತದೆ ಎಂದು ತಿಳಿಸಿದರು.
ಸ್ವೀಕೃತವಾದ ಅರ್ಜಿಯಲಲಿ 15 ಅಂಕಿಯ ಜಿ.ಎಸ್. ನಂಬರ್ ಕಡ್ಡಾಯವಾಗಿ ನಮೂಸಬೇಕು. ಸಪ್ತಾಹದ ಸಂದರ್ಭದಲ್ಲಿ ಪರಿಶೀಲನೆಗೆ ಭೇಟಿ ನೀಡಿದ ತಂಡವು ಅರ್ಜಿಯಲ್ಲಿ ಜಿ.ಎಸ್. ನಬಂರ್ ಇದೇಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದರಲ್ಲದೆ, ಓವರ್ ಡ್ಯೂ ಇರುವ ಅರ್ಜಿಗಳ 15 ಅಂಕಿಯ ಜಿ.ಎಸ್ ನಂಬರ್ ಹಾಕಿ ಸಕಾಲ ಮಿಷನ್‍ಗೆ ಕಳುಹಿಸಿದರೆ ಪರಿಶೀಲಿಸಲಾಗುವುದು ಎಂದು ಅಪರ ಮಿಷನ್ ನಿರ್ದೇಶಕರಾದ ಡಾ. ಮಮತ ತಿಳಿಸಿದರು.
ಸಕಾಲ ಸಪ್ತಾಹದಲ್ಲಿ ಮೂಲ ಉದ್ದೇಶ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅವಧಿ ಮೀರಿ ಬಾಕಿ ಉಳಿದ ಅರ್ಜಿಗಳ ಪ್ರಮಾಣ ತಗ್ಗಿಸುವುದು. ತಿರಸ್ಕರಿಸಿದ ಅರ್ಜಿಗಳಿಗೆ ಸೂಕ್ತ ಸಮರ್ಥನೆಯನ್ನು ನೀಡುವುದು ಶೂನ್ಯ ಸ್ವೀಕೃತಿ ಕಚೇರಿಗಳ ಸಂಖ್ಯೆಗಳನ್ನು ತಗ್ಗಿಸುವುದು ಹಾಗೂ ಬಾಕಿ ಉಳಿದ ಮೇಲ್ಮವಿಗಳ ವಿಲೇವಾರಿ ಮಾಡುವ ಉದ್ದೇಶವನ್ನು ಸಕಾಲ ಸಪ್ತಾಹದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಪ್ತಾಹದ ಮಾರ್ಗಸೂಚಿಯಂತೆ ಕಚೇರಿಗಳಲ್ಲಿ ಹೆಲ್ಪ್ ಡಿಸ್ಕ್ ನಿರ್ಮಿಸುವುದು. ಕರಪತ್ರ ವಿತರಿಸಿ ಸಪ್ತಾಹದ ಅರಿವು ಮೂಡಿಸುವುದು. ಎಲ್ಲಾ ಇಲಾಖೆಗಳು ಸಕಾಲ ಯೋಜನೆ ಕುರಿತು ಅಳವಡಿಸಿರುವ ಬೋರ್ಡ್ ಮತ್ತು ಸಕಾಲ ಸಪ್ತಾಹದ ಬ್ಯಾನರ್ ಹಾಕಿರುವ ಬಗ್ಗೆ ಪೋಟೋ ತೆಗೆದು ಆಪ್‍ಲೋಡ್ ಮಾಡುವಂತೆ ತಿಳಿಸಿದರು.
ಸಕಾಲ ಯೋಜನೆಯಡಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಸರ್ವೋತ್ತಮ ಸೇವೆ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕರಾದ ತಿಮ್ಮಪ್ಪ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು

LEAVE A REPLY

Please enter your comment!
Please enter your name here