ಮೊದಲನೇ ಹಂತದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ

0

ಜಿಲ್ಲೆಯಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ನಾಲ್ಕು ತಾಲೂಕುಗಳಲ್ಲಿ ಸಂಜೆ 5 ಗಂಟೆವರೆಗೆ ಶೇ. ರಷ್ಟು ಮತ ಚಲಾವಣೆ ಗೊಂಡಿದೆ
ಹಾಸನ ಸಕಲೇಶಪುರ ಅರಕಲಗೂಡು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ನಡೆದ ಮತದಾನದಲ್ಲಿ ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಪಾಲ್ಗೊಂಡು ಮತಚಲಾಯಿಸಿದರು.

ಎಲ್ಲ ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಹಾಗೂ ವಯೋವೃದ್ಧರಿಗೆ ಗಾಲಿಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು ವಿಕಲಚೇತನರಿಗೆ ಜಿಲ್ಲಾಡಳಿತ ವತಿಯಿಂದಲೇ ಸಾರಿಗೆ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು ಅಶಕ್ತ ಮತದಾರರಿಗೆ ಆದ್ಯತೆ ಮೇರಿಗೆ ಮತ ಚಲಾಯಿಸಲು ಅವಕಾಶ ಒದಗಿಸಲಾಗಿತ್ತು. ಸಾಲಗಾಮೆ ಗ್ರಾಮದ ಮತಗಟ್ಟೆಯಲ್ಲಿ 96 ವರ್ಷದ ಸಿದ್ದಪ್ಪ ಅವರು ಗಾಲಿ ಕುರ್ಚಿ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು ಇದೇ ರೀತಿ 88 ವರ್ಷದ ವಯೋವೃದ್ಧೆ ಲಕ್ಷ್ಮಮ್ಮ ಅವರು ಕೆಲವತ್ತಿ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು .

ಮತಗಟ್ಟೆಗಳಿಗೆ ಆಗಮಿಸಿದ ಮತದಾರರನ್ನು ಸ್ಕ್ರೀನಿಂಗ್ ಮಾಡಿ ಮತಗಟ್ಟೆಗೆ ಬಿಡಲಾಯಿತು ಸ್ಯಾನಿಟೈಸರ್ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಿದರು

ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳಲ್ಲಿ ಬೆಳಿಗ್ಗೆ 9 ರವರೆಗೆ ಹಾಸನ ತಾಲ್ಲೂಕಿನಲ್ಲಿ ಶೇ.10.19 ರಷ್ಟು, ಮತದಾನವಾಗಿದೆ.ಅರಕಲಗೂಡು ತಾಲ್ಲೂಕಿನಲ್ಲಿ ಶೇ.8.63 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.10.09 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.11.27 ರಷ್ಟು ಮತದಾನವಾಗಿತ್ತು.
ಇದೇ ರೀತಿ ಬೆಳಗ್ಗೆ 11 ರವರೆಗೆ ಹಾಸನ ತಾಲ್ಲೂಕಿನಲ್ಲಿ ಶೇ.28.79 ರಷ್ಟು, ಅರಕಲಗೂಡು ತಾಲ್ಲೂಕಿನಲ್ಲಿ ಶೇ.25.80 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.27.61 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.29.69 ರಷ್ಟು ಮತ ಚುನಾವಣೆಗೊಂಡಿದೆ.

ಮದ್ಯಾಹ್ನ 1 ಗಂಟೆವರಗೆ ಹಾಸನ ತಾಲ್ಲೂಕಿನಲ್ಲಿ ಶೇ.52.53 ರಷ್ಟು, ಅರಕಲಗೂಡು ತಾಲ್ಲೂಕಿನಲ್ಲಿ ಶೇ.43.73 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.52.21 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.50.38 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು .
ಸಂಜೆ 3 ರವರೆಗೆ ಹಾಸನ ತಾಲ್ಲೂಕಿನಲ್ಲಿ ಶೇ.69.53 ರಷ್ಟು, ಅರಕಲಗೂಡು ತಾಲ್ಲೂಕಿನಲ್ಲಿ ಶೇ.70.70 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.72.18 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.64.60 ರಷ್ಟು ಮತದಾನವಾಗಿತ್ತು.

LEAVE A REPLY

Please enter your comment!
Please enter your name here