ರಸ್ತೆ ಮದ್ಯೆ ಕುಳಿತು ಕರವೇ ಪ್ರತಿಭಟನೆ ; ಕರವೇ ಕಾರ್ಯಕರ್ತರಿಗೂ ಪ್ರಾಧಿಕಾರ ಅಧಿಕಾರಿಗಳ ಮದ್ಯೆ ಮಾತಿನ ಚಕಾಮುಕಿ

0

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೈರಾಪುರದಲ್ಲಿ ರಸ್ತೆ ಸಂಪೂರ್ಣ ಅವಿಜ್ಞಾನಿಕವಾಗಿದ್ದು ಒಂದು ಕಿ ಮೀ ದೂರದಷ್ಟು ರಸ್ತೆ ಗುಂಡಿ ಬಿದ್ದಿದ್ದು ಸ್ಥಳೀಯ ಜನತೆ ಓಡಾಟಕ್ಕೆ ನರಕಯಾತನೆಯಾಗಿದ್ದು ಕೂಡಲೇ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಸ್ತೆ ಮದ್ಯೆ ಕುಳಿತು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಾಟೀಲ್ ಮಾತಾನಾಡಿ ರಾಷ್ಟ್ರೀಯ ಹೆದ್ದಾರಿಯವರ ನಿರ್ಲಕ್ಷಕ್ಕೆ ಅಮಾಯಕರು ಅಪಘಾತಕ್ಕೆ ಹಿಡಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಅವರ ಕುಟುಂಬಕ್ಕೆ ಹೊಣೆಯಾರುಯೆಂದು ರಸ್ತೆ ಪ್ರಾಧಿಕಾರ ಅಧಿಕಾರಿಗಳಿಗೆ ಪ್ರಶ್ನಿಸಿದರು ಪ್ರತಿನಿತ್ಯ ಅಪಘಾತಗಳು ಆಗುತ್ತಲೆ ಇದ್ದರು ಕೂಡ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ ರಸ್ತೆಗೆ ಹಾಕ ಬೇಕಾದ ನಾಮಫಲಕಗಳನ್ನು ಆಳವಡಿಸಿಲ್ಲ ಬೇಕಾಬಿಟ್ಟಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಅಲ್ಲದೆ ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರಿಸುತ್ತವೆ

ಆದರೆ ಈ ರಸ್ತೆ ಗುಂಡಿಗಳಿಂದಕೂಡಿದ್ದು ರಸ್ತೆಗೆ ಡಾಂಬರ್ ಕೂಡ ಹಾಕಿಲ್ಲ ನಾವು ಅನೇಕ ಬಾರಿ ಈ ವಿಷಯವಾಗಿ ಪ್ರತಿಭಟನೆ ಮಾಡಿದರು ಅಧಿಕಾರಿಗಳು ಮಾತ್ರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಇನ್ನೂ ಸ್ಥಳೀಯರ ಮನೆ ಮುಭಾಂಗದಲ್ಲಿ ಅಂಡರ್ ಪಾಸ್ ಮಾಡಿದ್ದು ಸರ್ವಿಸ್ ರಸ್ತೆಯನ್ನು ಕೂಡ ಮಾಡಿಲ್ಲ ಮಳೆ ಬಾಗಿಲು ತೆಗೆದರೆ ಗುಂಡಿಯೊಳಗೆ ಬೀಳುತ್ತಾರೆ ಹಾಗೂ ಅವರಿಗೂ ಪರಿಹಾರವು ಕೂಡ ದೂರತಿಲ್ಲ ಇದಕ್ಕೆಹೊಣೆಯಾರು ಕೊಡಲೇ ರಸ್ತೆಸರಿ ಪಡಿಸಬೇಕು ಹಾಗೂ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲವಾದಲ್ಲಿ ನಿಮ್ಮ ಕಚೇರಿಗೆ ನುಗ್ಗಿ ಎಲ್ಲಾವನ್ನು ದ್ವಂಸಗೊಳಿಸಿ ಅಧಿಕಾರಿಗಳನ್ನು ಬಿಡುವುದಿಲ್ಲವೆಂದು ಖಡಕ್ ಎಚ್ಚರಿಕೆ ನೀಡಿದರು.

ಕರವೇ ತಾಲ್ಲೂಕು ಅಧ್ಯಕ್ಷ ಮಾತಾನಾಡಿ ಹಾಸನದಿಂದ ಬರುವ ಬಸ್ ಗಳು ಆಲೂರು ಬಸ್ ನಿಲ್ದಾಣಕ್ಕೆ ಬರದೇ ನೇರವಾಗಿ ಬೈಪಾಸ್ ಮೂಲಕ ತೆರಳುತ್ತವೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆಯೆಂದು ಕ ರಾ ರ ಸಾ ನಿಗಮ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು ಪ್ರತಿನಿತ್ಯ ಶಾಲೆ ಕಾಲೇಜು ವಿದ್ಯಾರ್ಥಿಗಳನ್ನು ಬಸ್ ಚಾಲಕರು ಬಸ್ ನಿಲ್ಲಿಸದೆ ಬಿಟ್ಟು ಹೋಗುತ್ತಾರೆ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಈ ರೀತಿ ಆದರೆ ಅವರ ಪರಿಸ್ಥಿತಿ ಏನು ಅವರು ಎಷ್ಟು ಗಂಟೆಗೆ ಶಾಲಾ ಕಾಲೇಜಿಗೆ ಹಾಗೂ ಮನೆಗೆ ಹೋಗಬೇಕೆಂದರು ಅಲ್ಲದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶಮಾಡಿಕೊಟ್ಟರು ಕಂಡಕ್ಟರ್ ಗಳು ಆಧಾರ್ ಕಾರ್ಡ್ ಇಲ್ಲವೆಂದರೆ ಅಲ್ಲೇ ಇಳಿಸಿಹೋಗುತ್ತಾರೆಯೆಂದು ಆರೋಪಿಸಿದರು

ಸರ್ಕಾರವೆ ಹೇಳಿದಂತೆ ಮಹಿಳೆಯರು ಯಾವದಾದ್ರು ಧಾಖಲೆಗಳನ್ನು ತೋರಿಸಿ ಬಸ್ ನಲ್ಲಿ ಹೋಗಬಹುದು ಆದರೆ ಕಂಡಕ್ಟರ್ಗಳು ಮಾತ್ರ ಇದ್ಯಾವುದನ್ನು ಗಮನಿಸದೆ ಮಹಿಳೆಯರನ್ನು ಸಾರ್ವಜನಿಕರ ಮದ್ಯೆ ನಿಂದಿಸುತ್ತಿದ್ದಾರೆಯೆಂದು ಅಧಿಕಾರಿಗಳಿಗೆ ತಿಳಿಸಿದರು ಇನ್ನೂ ಬಸ್ ಗಳು ಕೆಲವು ಬಸ್ ನಿಲ್ದಾಣಕ್ಕೆ ಬರುತ್ತಿಲ್ಲ ರಾಜಹಂಸ ಬಸ್ ಗಳನ್ನ ಹೋರೆತುಪಡಿಸಿ ಇನ್ನ ಎಲ್ಲಾ ಬಸ್ ಗಳು ಬಸ್ ನಿಲ್ದಾಣಕ್ಕೆ ಹೋಗಬೇಕೆಂದು ಆದೇಶಗಳಿದ್ದರು ವಾಹನ ಸವಾರರು ಮಾತ್ರ ಈ ನಿಯಮವನ್ನು ಪಾಲಿಸುತ್ತಿಲ್ಲ ಹಾಗೂ ಬೈರಾಪುರ ಗ್ರಾಮದಲ್ಲಿ ಬರುವ ಎಲ್ಲಾ ಬಸ್ ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ಕೊಡಲೇ ಅನುಕೂಲ ಮಾಡಿಕೊಡಬೇಕೆಂದರು ಇಲ್ಲವಾದಲ್ಲಿ ರಸ್ತೆ ಮದ್ಯೆ ಕುಳಿತು ಬಸ್ ಗಳನ್ನು ತಡೆ ಹಿಡಿದು ಉಗ್ರಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು.

ಕ ರಾ ರ ಸಾ ನಿಗಮದ ಹಾಸನ ಅಧಿಕಾರಿ ಮಹೇಂದ್ರ ಮಾತಾನಾಡಿ ತಾಲ್ಲೂಕಿನಲ್ಲಿ ಈ ರೀತಿಯ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು ಖುದ್ದು ನಾನೇ ಬಂದು ಸಮಸ್ಯೆಯನ್ನು ಆಲಿಸಿ ಅದನ್ನು ಬಗೆಹರಿಸಿ ಚಾಲಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ದಿಕ್ಕಾರಕೂಗಿ ರಸ್ತೆ ತಡೆ ಹಿಡಿದು ತಮ್ಮ ಆಕ್ರೋಶವ್ಯಕ್ತ ಪಡಿಸಿದಲ್ಲದೆ ಪೊಲೀಸ್ ಇಲಾಖೆಯವರಿಗೂ ಹಾಗೂ ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆದು ನೂಕು ನುಗ್ಗಲು ನಡೆಯಿತು.

LEAVE A REPLY

Please enter your comment!
Please enter your name here