ರಾಹುಲ್ ಅಗರ್ವಾಲ್ ಅಧಿಕಾರ ಸ್ವೀಕಾರ

0

ರಾಹುಲ್ ಅಗರ್ವಾಲ್ ರವರು ಇಂದು ಮೈಸೂರಿನಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹೊಸ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡರು.

ಅವರು 1992 ವರ್ಷದ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿ (ಐ.ಆರ್.ಟಿ.ಎಸ್.)ಯಾಗಿ ನಿಯುಕ್ತಿಯಾದವರು. ಅವರು ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ ಹಾಗೂ ಅದೇ ಸಂಸ್ಥೆಯಿಂದಲೇ ಥರ್ಮಲ್ ಎಂಜಿನಿಯರಿಂಗ್‍ನಲ್ಲಿ ತಮ್ಮ ಎರಡನೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅಗರ್ವಾಲ್ ರವರು ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ ಅನುಭವವನ್ನು ಹೊಂದಿದ್ದು, ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಸಂಚಾರ ಸಾರಿಗೆ(ಉಕ್ಕು) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಉತ್ತರ ಮಧ್ಯೆ ರೈಲ್ವೆಯಲ್ಲಿ ಮುಖ್ಯ ಪ್ರಯಾಣಿಕರ ಸಂಚಾರ ವ್ಯವಸ್ಥಾಪಕರಾಗಿ ಹಾಗೂ ಸರಕು ಮಾರಾಟ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ರಾಹುಲ್ ಅಗರ್ವಾಲ್

ಇವರು ಸಿಂಗಾಪುರ ಮತ್ತು ಮಲೇಷ್ಯಾದಲ್ಲಿ ತರಬೇತಿ ಕೋರ್ಸ್‍ಗಳಿಗೆ ಹಾಜರಾಗಿದ್ದಾರೆ. ವಡೋದರಾದ ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೆಯಲ್ಲಿ ನಡೆದ ಸುಧಾರಿತ ನಿರ್ವಹಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ಅವರು ತಮ್ಮ ಅತ್ಯುತ್ತಮ ಸೇವೆಗಾಗಿ 2013 ರಲ್ಲಿ ರೈಲ್ವೆ ಸಚಿವರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಂದು ಕಚೇರಿಯನ್ನು ತೆರವುಗೊಳಿಸಿದ ಅಪರ್ಣ ಗರ್ಗ್ ರವರು ಬೆಂಗಳೂರಿನ ಯಲಹಂಕ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಪ್ರಧಾನ ಹಣಕಾಸು ಸಲಹೆಗಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here