ರೈತ ಮಲ್ಲಯ್ಯನಿಗೆ ಅನ್ಯಾಯ ಮಾಡಿದಂತ ಸರ್ಕಾರಿ ಅಧಿಕಾರಿಗಳನ್ನು ಸರ್ಕಾರ ವಜಾಗೊಳಿಸಿ ರೈತನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ರೈತ ಸಂಘ ಒತ್ತಾಯ

0

ಅರಸೀಕೆರೆ ನಗರದ ತಾಲೂಕ್ ಆಡಳಿತ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅರಸೀಕೆರೆ ಇವರ ವತಿಯಿಂದ ಪ್ರತಿಭಟಿಸಿ ಅಧಿಕಾರಿ ಶಿವಶಂಕರ್ ರವರಿಗೆ ಮನವಿ ಪತ್ರವನ್ನು ನೀಡಲಾಯಿತು. ಮನವಿ ಪತ್ರ ನೀಡಿ ನಂತರ ಮಾತನಾಡಿದ ಜಿಲ್ಲಾ ಕಾರ್ಯಧ್ಯಕ್ಷರು ಶಿವಲಿಂಗಪ್ಪ ಅರಸೀಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಗುಂಡಕನಹಳ್ಳಿ ಸರ್ವೆ ನಂಬರ್ 18/1 ರಲ್ಲಿ ಓಬಯ್ಯ ಎಂಬುವರಿಗೆ ಸುಮಾರು 4.27 ಗುಂಟೆ ಜಮೀನು ಇದ್ದು ಓಬಯ್ಯ ಎಂಬುವರಿಗೆ ಮಕ್ಕಳಿರ ಕಾರಣ ಮಲ್ಲಯ್ಯ ಎಂಬುವರಿಗೆ ದತ್ತು ಪಡೆದು ಎರಡು ಎಕರೆ ಜಮೀನನ್ನು ವೀಲ್ ಮಾಡಿಕೊಟ್ಟಿದ್ದು ಉಳಿದಂತ 2.27 ಎಕ್ಕರೆ ಜಮೀನನ್ನು ಓಬಯ್ಯ ಉಳಿಸಿಕೊಂಡಿರುತ್ತಾರೆ

ಓಬಯ್ಯ ಅವರ ಮರಣ ನಂತರ ಯಾರೋ ಕಾಣದ ದೊಡ್ಡ ಕೈಗಳಿಂದ ಕೆಲವು ಸರ್ಕಾರಿ ಅಧಿಕಾರಿಗಳ ಕುಮ್ಮಕಿಯಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆ ಜಮೀನನ್ನು ಗಂಗಮ್ಮ ಎನ್ನುವರ ಹೆಸರಿಗೆ ಮಾಡಿಕೊಟ್ಟಿದು ಇದು ರೈತನಿಗೆ ಮಾಡಿರುವ ದೊಡ್ಡ ಅನ್ಯಾಯವಾಗಿದ್ದು ಇದನ್ನ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ರೈತನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ನಂತರ ತಾಲೂಕ್ ಅಧ್ಯಕ್ಷರಾದ ಅಣ್ಣನಾಯಕನಹಳ್ಳಿ ಶಿವಮೂರ್ತಿ ಮಾತನಾಡಿ ರೈತನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಹೋದರೆ ರೈತರ ಸಂಘದ ಶಾಸಕರಾದ ದರ್ಶನ್ ಪುಟ್ಟಣ್ಣ ಅವರ ಸಾರಥ್ಯದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತರಲಾಗುವುದೆಂದರು. ಈ ಸಂದರ್ಭದಲ್ಲಿ ಮಧುಸೂದನ್, ರವೀಶ್ ಗೀಜೆ ಹಳ್ಳಿ, ಸೋಮಣ್ಣ ಮಲ್ಲೇನಹಳ್ಳಿ, ಕುಮಾರ್ ಅಗುಂದ, ರವಿ ಕಾರಹಳ್ಳಿ, ಇನ್ನು ಮುಂತಾದ ರೈತರ ಸಂಘದವರು ಉಪಸ್ಥಿದರು

LEAVE A REPLY

Please enter your comment!
Please enter your name here