66/11ಕೆ.ವಿ ಹಳೇಬೀಡು,ಗಂಗೂರು, ಮತ್ತು ಹಗರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ವಿದ್ಯುತ್ ಸರಬರಾಜಾಗುವ 66/11ಕೆ.ವಿ ಹಳೇಬೀಡು, ಗಂಗೂರು, ಮತ್ತು ಹಗರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಮತ್ತು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ದಿನಾಂಕ 05.12.2020 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆ ಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.